Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Karnataka News

ದ್ವಿ-ಚಕ್ರ ವಾಹನ ಮತ್ತು ಕನ್ನ ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ಬಂಧನ.

CREDOPRESS MEDIA PVT LTD by CREDOPRESS MEDIA PVT LTD
February 27, 2025
in Karnataka News,Karnataka State Police,Latest News,Namma Police,Namma Police News
0
ದ್ವಿ-ಚಕ್ರ ವಾಹನ ಮತ್ತು ಕನ್ನ ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ಬಂಧನ.
0
SHARES
5
VIEWS
Share on FacebookShare on Twitter

16 ದ್ವಿ-ಚಕ್ರ ವಾಹನ ಮತ್ತು 76 ಗ್ರಾಂ ಚಿನ್ನಾಭರಣ ವಶ, ಮೌಲ್ಯ 29.08 ಲಕ್ಷ,

ಬಾಗಲಗುಂಟೆ ಪೊಲೀಸ್ ಠಾಣಾ ಸರಹದ್ದಿನ ಕಾಳಸ್ತಿನಗರದ, ಸಿದ್ದಮ್ಮ ಬಿಲ್ಡಿಂಗ್‌ನಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:31/01/2025 ರಂದು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:21/01/2025 ರಂದು ರಾತ್ರಿ ಪಿರ್ಯಾದುದಾರರು ವಾಸವಿರುವ ಮನೆಯ ಮುಂಭಾಗ ದ್ವಿ-ಚಕ್ರ ವಾಹನವನ್ನು ಬೀಗ ಹಾಕಿ ನಿಲ್ಲಿಸಿ ಹೊಗಿರುತ್ತಾರೆ. ದಿನಾಂಕ:22/01/2025 ರಂದು ಬೆಳಿಗ್ಗೆ ನೋಡಲಾಗಿ ದ್ವಿ-ಚಕ್ರ ವಾಹನವನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದ್ವಿ-ಚಕ್ರ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:05/02/2025 ರಂದು ಮೂವರು ವ್ಯಕ್ತಿಗಳನ್ನು ಠಾಣಾ ಸರಹದ್ದಿನ 8ನೇ ಮೈಲಿ ಬಳಿ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮೂವರು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ದ್ವಿ-ಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ. ಹಾಗೂ ಬೆಂಗಳೂರು ನಗರದ ವಿವಿಧ ಕಡೆ ದ್ವಿ-ಚಕ್ರ ವಾಹನಗಳನ್ನು ಮತ್ತು ಕನ್ನ ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.

ದಿನಾಂಕ:06/02/2025 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 06 ದಿನಗಳ ಕಾಲ ಪೊಲೀಸ್ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.

ಪೊಲೀಸ್ ಅಭಿರಕ್ಷೆಗೆ ಪಡೆದ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಆರೋಪಿಗಳು ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿ ಮಾರಾಟ ಮಾಡುವ ಸಲುವಾಗಿ ಬಾಗಲಗುಂಟೆ ಪೊಲೀಸ್ ಠಾಣಾ ಸರಹದ್ದಿನ ಹೆಸರಘಟ್ಟ ಮುಖ್ಯರಸ್ತೆ, ಬೋನ್‌ಮಿಲ್ ಫ್ಯಾಕ್ಟರಿ ಹತ್ತಿರದ ಕಾಂಪೌಂಡ್ ಪಕ್ಕದ ಖಾಲಿ ಜಾಗದಲ್ಲಿ 09 ದ್ವಿ-ಚಕ್ರ ವಾಹನಗಳನ್ನು ನಿಲ್ಲಿಸಿರುವುದಾಗಿ ತಿಳಿಸಿದ್ದು, ಅವುಗಳನ್ನು ದಿನಾಂಕ:11/02/2025 ರಂದು ವಶಪಡಿಸಿಕೊಳ್ಳಲಾಗಿರುತ್ತದೆ.

ದಿನಾಂಕ:11/02/2025 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೂವರು ಆರೋಪಿಗಳ ಪೈಕಿ ಓರ್ವ ಆರೋಪಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ. ಪ್ರಕರಣದ ಮತ್ತಿಬ್ಬರು ಆರೋಪಿಗಳನ್ನು ಮತ್ತೆ 06 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ನೀಡಿರುತ್ತದೆ.

ಪೊಲೀಸ್ ಅಭಿರಕ್ಷೆಗೆ ಪಡೆದ ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿ, ಆರೋಪಿಗಳು ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿ ಮಾರಾಟ ಮಾಡುವ ಸಲುವಾಗಿ ಬಾಗಲಗುಂಟೆ ಪೊಲೀಸ್ ಠಾಣಾ ಸರಹದ್ದಿನ ಮಂಜುನಾಥನಗರ ಮೆಟ್ರೋ ಸ್ಟೇಷನ್ ಹಿಂಭಾಗದ ಖಾಲಿ ಜಾಗದಲ್ಲಿ 07 ದ್ವಿ-ಚಕ್ರ ವಾಹನಗಳನ್ನು ನಿಲ್ಲಿಸಿರುವುದಾಗಿ ತಿಳಿಸಿದ್ದು ಅವುಗಳನ್ನು ದಿನಾಂಕ: 17/02/2025 ರಂದು ವಶಪಡಿಸಿಕೊಳ್ಳಲಾಗಿರುತ್ತದೆ.

ಬಾಗಲಗುಂಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕನ್ನ ಕಳವು ಮಾಡಿದ್ದ ಚಿನ್ನಾಭರಣಗಳನ್ನು ತುಮಕೂರಿನಲ್ಲಿ ವಾಸವಿರುವ ಆರೋಪಿಗಳ ಸ್ನೇಹಿತನೋರ್ವನಿಗೆ ನೀಡಿದ್ದು, ಆತನು ದಿನಾಂಕ:17/02/2025 ರಂದು ಠಾಣೆಗೆ ತಂದು ಹಾಜರು ಪಡಿಸಿದ 76 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಈ ಪ್ರಕರಣದ ಆರೋಪಿಗಳ ವಶದಿಂದ ಒಟ್ಟಾರೆ 16 ದ್ವಿ-ಚಕ್ರ ವಾಹನಗಳು ಮತ್ತು 76 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 29,08,000/-(ಇಪ್ಪತ್ತೊಂಬತ್ತು ಲಕ್ಷದ ಎಂಟು ಸಾವಿರ ರೂಪಾಯಿ).

ಈ ಪ್ರಕರಣದ ಆರೋಪಿಗಳ ಬಂಧನದಿಂದ 1) ಬಾಗಲಗುಂಟೆ ಪೊಲೀಸ್ ಠಾಣೆಯ-03 ಕನ್ನ ಕಳವು ಪ್ರಕರಣ ಮತ್ತು 02 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು, 2) ಕೊಡಿಗೆಹಳ್ಳಿ ಪೊಲೀಸ್ ಠಾಣೆಯ-03 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು, 3) ಬನಶಂಕರಿ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ. 4) ವಿಜಯನಗರ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ. 5) ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು 6) ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು 03 ಕನ್ನ ಕಳವು ಪ್ರಕರಣಗಳು ಹಾಗೂ 10 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಉಳಿದ 6 ದ್ವಿ-ಚಕ್ರ ವಾಹನಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ.

17/02/2025 ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ. ಹಾಜರುಪಡಿಸಿದ್ದು, ಮಾನ್ಯ

ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ಉತ್ತರ ವಿಭಾಗ ಶ್ರೀ. ಸೈದುಲ್ಲಾ ಅಡವತ್ ಐ.ಪಿ.ಎಸ್. ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ, ಶ್ರೀ ಸದಾನಂದ ತಿಪ್ಪಣ್ಣವರ್, ಸಹಾಯಕ ಪೊಲೀಸ್ ಆಯುಕ್ತರು ಪೀಣ್ಯಾ ಉಪ ವಿಭಾಗ ರವರ ನೇತೃತ್ವದಲ್ಲಿ, ಬಾಗಲಗುಂಟೆ ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ಶ್ರೀ ಹನುಮಂತರಾಜ್.ಎಂ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

    Tags: Bengaluru City PoliceKarnataka NewsKarnataka State PoliceLatest NewsNamma PoliceNamma Police NewsPolice NewsPrime News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ
    Bengaluru City Police

    50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ

    May 13, 2026
    ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
    Bengaluru City Police

    ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ

    May 13, 2026
    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ
    Bengaluru City Police

    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

    May 12, 2026
    Next Post
    ಹಾಲ್ ಮಾರ್ಕ್ ಸೆಂಟರ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಚಿನ್ನಾಭರಣಗಳನ್ನು ಕಳವು ಮಾಡಿದ್ದ ಕೆಲಸಗಾರ ಸೇರಿದಂತೆ ಇಬ್ಬರು ವ್ಯಕ್ತಿಗಳ ಬಂಧನ.

    ಹಾಲ್ ಮಾರ್ಕ್ ಸೆಂಟರ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಚಿನ್ನಾಭರಣಗಳನ್ನು ಕಳವು ಮಾಡಿದ್ದ ಕೆಲಸಗಾರ ಸೇರಿದಂತೆ ಇಬ್ಬರು ವ್ಯಕ್ತಿಗಳ ಬಂಧನ.

    ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ವಿಶೇಷ ಮಹಿಳಾ ಪೊಲೀಸ್ ತಂಡ “ಅಕ್ಕ ಪಡೆ

    ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ವಿಶೇಷ ಮಹಿಳಾ ಪೊಲೀಸ್ ತಂಡ “ಅಕ್ಕ ಪಡೆ

    ರಾಯಲ್ ಪಾಡು ಪೊಲೀಸರಿಂದ ಅಕ್ರಮವಾಗಿ ಗಾಂಜಾ ಸಾಗಣೆ ಮತ್ತು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ

    ರಾಯಲ್ ಪಾಡು ಪೊಲೀಸರಿಂದ ಅಕ್ರಮವಾಗಿ ಗಾಂಜಾ ಸಾಗಣೆ ಮತ್ತು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    BBMP B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police Chikkabalapura Police CM Siddaramaiah Credo Press Credopress CREDOPRESS MEDIA Cyber Crime Davangere police Davangere Railway Police drugs news Electronic city Police Hoskote News Hoskote Police Hulimavu Police Indian Police News J. JOHN PREM EDITOR Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • 50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ
    • ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
    • ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved