ವಿದ್ಯಾರ್ಥಿ/ವಿದ್ಯಾರ್ಥಿನಿಯರ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕುರಿತಾಗಿ ರಚಿತಗೊಂಡ ಅಕ್ಕ ಪಡೆಗೆ ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ, ಬೀದರ ರವರು ಮಹಿಳೆಯರ, ಮಕ್ಕಳ ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸುರಕ್ಷತೆ ಕುರಿತು ವಿಶೇಷ ಮುತುವರ್ಜಿ ವಹಿಸಿ ಮಹಿಳೆಯರ, ಮಕ್ಕಳ ಸುರಕ್ಷತೆಗಾಗಿ task ನೀಡಿದ್ದು, ಮಾನ್ಯರ ನೇರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಕಾರ್ಯ ಪ್ರವರ್ತರಾದ ಅಕ್ಕ ಪಡೆಯು ಬೀದರ್ ಜಿಲ್ಲೆಯ ಒಟ್ಟು 27 ಗ್ರಾಮಗಳಿಗೆ ಭೇಟಿಕೊಟ್ಟು ಗ್ರಾಮದ ಅಂಗನವಾಡಿ ಸೂಪರ್ ವೈಜರ ಮತ್ತು ಅಂಗನವಾಡಿ ಕಾರ್ಯಕರ್ತರವರೊಂದಿಗೆ ಗ್ರಾಮದಲ್ಲಿ ಬಾಲ್ಯ ವಿವಾಹ ತಡೆಹಿಡಿಯಲು ಕೈಕೊಳ್ಳಬಹುದಾದ ಕ್ರಮಗಳ ಬಗ್ಗೆ ಮತ್ತು ಮಹಿಳಾ & ಮಕ್ಕಳ ದೌರ್ಜನ್ಯ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಹಿಳಾ ಸುರಕ್ಷತೆ, ಸಂಚಾರಿ ಸುರಕ್ಷತಾ ನಿಯಮಗಳ ಕುರಿತಾಗಿ ಅರಿವು ಮೂಡಿಸಿ, ಸಹಾಯವಾಣಿ ಸಂ: 1098, ಸಹಾಯವಾಣಿ ಸಂ: 112, ಸೈಬರ್ ಅಪರಾಧ ಸಹಾಯವಾಣಿ ಸಂ: 1930 ಗಳ ಬಗ್ಗೆ ತಿಳುವಳಿಕೆ ನೀಡಿ ಭಿತ್ತಿ ಪತ್ರಗಳನ್ನು ನಿಡಿರುತ್ತಾರೆ ಮತ್ತು ನಾವು ಸದಾ ನಿಮ್ಮ ಸುರಕ್ಷತೆಗಾಗಿ ಇದ್ದು, ನೀವು ಭಯ ಪಡುವ ಅವಶ್ಯಕತೆ ಇಲ್ಲ ಸದಾ ನಿಮ್ಮೊಂದಿಗೆ ಇದ್ದೆವೆಂದು ಸಕಾರಾತ್ಮಕ ಭಾವವನ್ನು ಮೂಡಿಸುವ ಮೂಲಕ ಮಹಿಳೆಯರಿಗೆ, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ 24×7 ಸುರಕ್ಷತೆ ಒದಗಿಸುತ್ತಿರುವ ನಿಮ್ಮೇಲ್ಲರ ಮತ್ತು ಪೊಲೀಸ್ ಇಲಾಖೆಯ ಹೆಮ್ಮೆಯ “ಅಕ್ಕ ಪಡೆ” ಯ ಅಧಿಕಾರಿ, ಸಿಬ್ಬಂದಿ ರವರ ಕಾರ್ಯಕ್ಕೆ ಶ್ಲಾಘಿಸಿ ಅಭಿನಂದಿಸಲಾಗಿದೆ.









