ಆಡುಗೋಡಿ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಖಚಿತ ಮಾಹಿತಿ ಮೇರೆಗೆ ಠಾಣೆಯ ವ್ಯಾಪ್ತಿಗೆ ಒಳಪಡುವ ವೃತ್ತದಲ್ಲಿ ಮಾದಕ ವಸ್ತು ಗಳನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ತಿಳಿದಿರುತ್ತದೆ
ಮಾಹಿತಿ ಮೇರೆಗೆ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆಯಲ್ಲಿರುವ ಕೆಎಂಎಫ್ ಕಾಂಪೌಂಡ್ ನ ಪಕ್ಕದಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಯುತ್ತದೆ ಈ ಮಾಹಿತಿಯನ್ನ ಆಧರಿಸಿ ಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಲ್ಲಿ ಪ್ರಕರಣವನ್ನು ದಾಖಲಿಸಿ ಸ್ಥಳಕ್ಕೆ ಭೇಟಿ ನೀಡಿ ಓರ್ವ ವಿದೇಶಿ ಮೂಲದ ವ್ಯಕ್ತಿ ಸೇರಿದಂತೆ ಇಬ್ಬರ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು
ವಶಕ್ಕೆ ಪಡೆದ ಇಬ್ಬರು ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ ಆರೋಪಿಗಳಿಬ್ಬರಿಗೆ ವಿದೇಶಿ ಮೂಲದ ಮತ್ತೊಬ್ಬ ವ್ಯಕ್ತಿಯು ಪರಿಚಯವಿದ್ದು ಆತನಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುವಾದ ಎಂ ಡಿ ಎಂ ಎ ಮತ್ತು ಗಾಂಜಾವನ್ನು ಖರೀದಿ ಮಾಡಿಕೊಂಡು ಬಂದು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಮುಂದಾಗಿರುವುದಾಗಿ ತಿಳಿಯುತ್ತದೆ

ಆರೋಪಿಗಳ ವಶದಲ್ಲಿದ್ದ 59 ಗ್ರಾಂ ಎಂಡಿ ಎಂಎ ಮತ್ತು ಒಂದು ತೂಕದ ಯಂತ್ರ ಮತ್ತು ಒಂದು ದ್ವಿಚಕ್ರ ವಾಹನವನ್ನು ಆಡುಗೋಡಿ ಪೊಲೀಸರು ವಶಪಡಿಸಿಕೊಳ್ಳುತ್ತಾರೆ
ಪೊಲೀಸರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ ಆರೋಪಿಗಳಿಬ್ಬರಿಗೆ ನಿಷೇಧಿತ ಮಾದಕ ವಸ್ತುವಾದ ಎಂಡಿ ಎಂಎ ಮತ್ತು ಗಾಂಜಾವನ್ನು ನೀಡುತ್ತಿದ್ದ ವಿದೇಶಿ ಮೂಲದ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ ಹಾಗೂ ಆರೋಪಿಗಳಿಬ್ಬರು ಬಾಲಾಜಿನಗರದಲ್ಲಿ ವಾಸವಿರುವ ಮನೆಯಲ್ಲಿ ಗಾಂಜಾವನ್ನು ಇಟ್ಟಿರುವುದಾಗಿ ತಿಳಿಸುತ್ತಾರೆ
ಇದರಿಂದ ಒಂದು ಕೆಜಿ 231 ಗ್ರಾಂ ಗಾಂಜಾ, ಮೂರು ಮೊಬೈಲ್ ಫೋನ್, ಎರಡೂ ತೂಕದ ಯಂತ್ರವನ್ನು ವಶಪಡಿಸಿಕೊಂಡಿರುತ್ತಾರೆ
ಆರೋಪಿಗಳಿಬ್ಬರೂ ನೀಡಿದ ಮಾಹಿತಿ ಮೇರೆಗೆ ಆರೋಪಿಗಳಿಬ್ಬರಿಗೂ ಎಂ ಡಿ ಎಂ ಎ ಮತ್ತು ಗಾಂಜಾಬನ್ನು ನೀಡುತ್ತಿದ್ದ ಮತ್ತೋರ್ವ ವಿದೇಶ ಮೂಲದ ವ್ಯಕ್ತಿಯನ್ನು ದೇವರ ಚಿಕ್ಕನಹಳ್ಳಿಯಲ್ಲಿ ವಾಸವಿರುವ ಮನೆಯಲ್ಲಿ 684 ಗ್ರಾಂ ಎಂಡಿಎಂಎ, ಒಂದು ಮೊಬೈಲ್ ಫೋನ್, ಒಂದು ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಯಿತು
ಈ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನದಿಂದ ಒಟ್ಟು 743 ಗ್ರಾಂ ಎಂಡಿ ಎಂಎ, ಒಂದು ಕೆಜಿ 231 ಗಾಂಜಾ, 4 ಮೊಬೈಲ್ ಫೋನ್, 4 ತೂಕದ ಯಂತ್ರ, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ ಇವುಗಳ ಒಟ್ಟು ಮೌಲ್ಯ 77,00,000/- ಲಕ್ಷರೂಪಾಯಿಗಳಾಗಿರುತ್ತದೆ
ಈ ಕಾರ್ಯ ಆಚರಣೆಯಲ್ಲಿ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರದ ಶ್ರೀಮತಿ ಸಾರ ಫಾತಿಮಾ, ಐಪಿಎಸ್, ರವರ ಮಾರ್ಗದರ್ಶನದಲ್ಲಿ ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮಿ ನಾರಾಯಣ ರವರ ನಿರ್ದೇಶನದಲ್ಲಿ , ಹಾಗೂ ಆಡುಗೋಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ರವಿಕುಮಾರ್ ಸಿಹಾಗೂ ಅಧಿಕಾರಿ ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









