ಮುಳಬಾಗಿಲು ಗ್ರಾಮಾಂತರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಸುಮಾರು 23 ಲಕ್ಷ ಬೆಲೆಯ 23 ಕೆಜಿ 805g ಗಾಂಜಾವನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿರುತ್ತಾರೆ
ಖಚಿತ ಮಾಹಿತಿ ಮೇರೆಗೆ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಗಾಂಜಾವನ್ನು ಒಂದು ಆಟೋದಲ್ಲಿ ಇಟ್ಟುಕೊಂಡು ಮುಳಬಾಗಿಲು ಮತ್ತು ಕೋಲಾರದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಆಂಧ್ರಪ್ರದೇಶ ಕಡೆಯಿಂದ ನಂಗಲಿ-ಮುಳಬಾಗಿಲು ಮಾರ್ಗದಲ್ಲಿ ಆಟೋವಿನ ಮುಖಾಂತರ ಬರುತ್ತಿರುವುದಾಗಿ ಮಾಹಿತಿಯನ್ನು ಪಡೆದ ಪೊಲೀಸರು ಅಲ್ಲಾಳಸಂದ್ರ ಗ್ರಾಮದ ಬಸ್ ನಿಲ್ದಾಣದ ಸಮೀಪ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಸಾಗಿಸುತ್ತಿದ್ದ 1.ಕೃಷ್ಣಮೂರ್ತಿ,2. ಮನೋಹರ, ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, ಗಾಂಜಾ ಸಾಧಿಸುತ್ತಿದ್ದ ಆಟೋವನ್ನು ವಶಕ್ಕೆ ಪಡೆದು ಎನ್ ಡಿ ಪಿ ಎಸ್ ಆಕ್ಟ್ ನಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ
ಕೆ ಜಿ ಸತೀಶ್ ಪೊಲೀಸ್ ಇನ್ಸ್ಪೆಕ್ಟರ್, (ಮುಳಬಾಗಿಲು ಗ್ರಾಮಾಂತರ ವೃತ್ತ), ಮುಳಬಾಗಿಲು ಗ್ರಾಮಾಂತರ ಠಾಣೆಯ ವಿಠ್ಠಲ್ ತಳವಾರ್ ಪಿಎಸ್ಐ, ಮಮತಾ ಎಲ್ ಪಿಎಸ್ಐ, ಹಾಗೂ ಸಿಬ್ಬಂದಿಯವರಾದ ಮಂಜುನಾಥ ರೆಡ್ಡಿ, ರಾಜು, ಲಕ್ಷ್ಮೀನಾರಾಯಣ, ಶಂಕರ್, ಶಶಿಕಲಾ, ನಾಗಾರ್ಜುನ, ರವರನ್ನುಮಾನ್ಯ ಕೋಲಾರ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಐ ಪಿ ಎಸ್, ಹೆಚ್ಚುವರಿ ಅಧೀಕ್ಷಕರಾದ ರವಿಶಂಕರ್ಹಾಗೂ ಜಗದೀಶ್, ಮತ್ತು ನಂದಕುಮಾರ್ ಡಿ. ಪೊಲೀಸ್ ಉಪಾದೀಕ್ಷಕರು ಮುಳಬಾಗಿಲು ಉಪ-ವಿಭಾಗ ರವರುಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪ್ರಶಂಸಿಸಿದ್ದಾರೆ.
ವರದಿ
ಶಶಿಕುಮಾರ್ ವಿ









