Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home National News

ಕನ್ನ ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿ ಹಾಗೂ ಕನ್ನ ಕಳವು ಮಾಡಲು ಪ್ರಚೋದಿಸುತ್ತಿದ್ದ ಮತ್ತೋರ್ವ ವ್ಯಕ್ತಿ ಸೇರಿದಂತೆ ಇಬ್ಬರ ಬಂಧನ.

CREDOPRESS MEDIA PVT LTD by CREDOPRESS MEDIA PVT LTD
March 7, 2025
in National News
0
ಕನ್ನ ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿ ಹಾಗೂ ಕನ್ನ ಕಳವು ಮಾಡಲು ಪ್ರಚೋದಿಸುತ್ತಿದ್ದ ಮತ್ತೋರ್ವ ವ್ಯಕ್ತಿ ಸೇರಿದಂತೆ ಇಬ್ಬರ ಬಂಧನ.
0
SHARES
13
VIEWS
Share on FacebookShare on Twitter

220 ಗ್ರಾಂ ಚಿನ್ನಾಭರಣ, 1 ಕೆ.ಜಿ ಬೆಳ್ಳಿಯ ವಸ್ತುಗಳ ವಶ, ಮೌಲ್ಯ 18 ಲಕ್ಷ.
ಅಮೃತಹಳ್ಳ ಪೊಲೀಸ್ ಠಾಣಾ ಪೊಲೀಸ್ ಠಾಣಾ ಸರಹದ್ದಿನ ರಾಚೇನಹಳ್ಳಿಯ ಅಪಾರ್ಟ್‌ ಮೆಂಟ್‌ ವೊಂದರಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:11/02/2025 ರಂದು ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:04/02/2025 ರಂದು ತಮ್ಮ ಸ್ವಂತ ಊರಾದ ಬಿಹಾರಕ್ಕೆ ಹೋಗಿರುತ್ತಾರೆ. ದಿನಾಂಕ:11/02/2025 ರಂದು ವಾಪಸ್ ಬಂದು ನೋಡಲಾಗಿ ಮನೆಯ ಹಿಂಭಾಗದಲ್ಲಿರುವ ಸೈಡ್ ಕಿಟಕಿಯನ್ನು ಓಪನ್ ಮಾಡಿ, ಮನೆಯ ಕೊಠಡಿಯ ಬೀರುವಿನಲ್ಲಿಟ್ಟದ್ದ ಡೈಮಂಡ್, ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕನ್ನಾಕಳವು ಪ್ರಕರಣ ದಾಖಲಾಗಿರುತ್ತದೆ.


ಪ್ರಕರಣದ ತನಿಖೆಯನ್ನು ಮುಂದುವರೆಸಿದ, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಭಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:22/02/2025 ರಂದು ಬಾಗಲೂರಿನ ರಜಾಕ್‌ ಪಾಳ್ಯ ಮಸೀದಿ ಹತ್ತಿರ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಕನ್ನ ಕಳವು ಮಾಡಲು ಪ್ರಚೋದಿಸಿದ ವ್ಯಕ್ತಿಯು ಕಳವು ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಿ, ಹಣವನ್ನು ನೀಡುವುದಾಗಿ ತಿಳಿಸಿದ ಮೇರೆಗೆ ಈ ಕೃತ್ಯವೆಸಗಿರುವುದಾಗಿ ಮತ್ತು ಪ್ರಚೋದಿಸಿದ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ.
ಆರೋಪಿತನು ನೀಡಿದ ಮಾಹಿತಿ ಮೇರೆಗೆ ದಿನಾಂಕ:22/02/2025 ರಂದು ವರ್ತೂರಿನ ಮುಖ್ಯರಸ್ತೆಯಲ್ಲಿ ಕನ್ನ ಕಳವು ಮಾಡಲು ಪ್ರಚೋದಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ದಿನಾಂಕ:22/02/2025 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.


ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಕಳವು ಮಾಡಿದ ಚಿನ್ನಾಭರಣಗಳನ್ನು ಪ್ರಚೋದಿಸಿದ ವ್ಯಕ್ತಿಯು ವರ್ತೂರಿನಲ್ಲಿ ವಾಸವಿರುವ ಆತನ ಸಂಬಂಧಿಕನೋರ್ವನಿಗೆ 44 ಗ್ರಾಂ ಚಿನ್ನಾಭರಣ ಹಾಗ 700 ಗ್ರಾಂ ಬೆಳ್ಳಿಯ ವಸ್ತಗಳನ್ನು ನೀಡಿರುವುದಾಗಿ ತಿಳಿಸಿರುತ್ತಾನೆ. ಪ್ರಚೋದಿಸಿ ವ್ಯಕ್ತಿಯ ಸಂಬಂಧಿಕನಿಗೆ ನೋಟೀಸ್ ಜಾರಿ ಮಾಡಿದ್ದು, ಆತನು ದಿನಾಂಕ:26/02/2025 ರಂದು ಅಮೃತಹಳ್ಳಿ ಪೊಲೀಸ್ ಠಾಣೆಗೆ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ತಂದು ಹಾಜರುಪಡಿಸಿದ್ದನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ದಿನಾಂಕ:26/02/2025 ರಂದು ಬಾಗಲೂರಿನ ಜ್ಯೂವೆಲರಿ ಅಂಗಡಿಯೊಂದರಲ್ಲಿ 20 ಗ್ರಾಂ ಚಿನ್ನಾಭರಣಗಳನ್ನು ಮಾರಾಟ ಮಾಡಿರುವುದಾಗಿ ಆರೋಪಿಯು ತಿಳಿಸಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ದಿನಾಂಕ:27/02/2025 ರಂದು ಚಿಕ್ಕಸಂದ್ರ ಮತ್ತು ಹಾಸನದ ಎರಡು ನ್ಯೂವಲರಿ ಅಂಗಡಿಗಳಲ್ಲಿ 134 ಗ್ರಾಂ ಚಿನ್ನಾಭರಣ ಹಾಗೂ 300 ಗ್ರಾಂ ಬೆಳ್ಳಿಯ ವಸ್ತುಗಳನ್ನು ಮಾರಾಟ ಮಾಡಿರುವುದಾಗಿ ಆರೋಪಿಯು ತಿಳಿಸಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ದಿನಾಂಕ:28/02/2025 ರಂದು ಎಂ.ಎಸ್. ಪಾಳ್ಯದಲ್ಲಿ ವಾಸವಿರುವ ಆರೋಪಿತನ ಸಹೋದರನಿಗೆ 20 ಗ್ರಾಂ ಚಿನ್ನಾಭರಣವನ್ನು ನೀಡದ್ದನ್ನು, ಆರೋಪಿಯ ಸೋದರನಿಗೆ ನೋಟಿಸ್ ಜಾರಿ ಮಾಡಿದ್ದು, ಆತನು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಪ್ರಕರಣದ ಆರೋಪಿಗಳ ವಶದಿಂದ ಒಟ್ಟು 220 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ * 18,00,000/- (ಹದಿನೆಂಟು ಲಕ್ಷ ರೂಪಾಯಿ)
ಈ ಪ್ರಕರಣದ ಆರೋಪಿಗಳ ಬಂಧನದಿಂದ ಅಮೃತಹಳ್ಳಿ ಪೊಲೀಸ್ ಠಾಣೆಯ 05 ಕನ್ನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ದಿನಾಂಕ:01/03/2025 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಜೀತ್, ಐ.ಪಿ.ಎಸ್ ಮತ್ತು ಸಂಪಿಗೆಹಳ್ಳಿ ಉಪ ವಿಭಾಗದ ಎ.ಸಿ.ಪಿ ಶ್ರೀ. ಮುರುಗೇಂದ್ರಯ್ಯ ರವರ ನೇತೃತ್ವದಲ್ಲಿ ಹಾಗೂ ಅಮೃತಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ಅಂಬರೀಶ್ ಎಂ. ರವರ ಅಧಿಕಾರಿ/ ಸಿಬ್ಬಂದಿಯವರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

    CREDOPRESS MEDIA PVT LTD

    CREDOPRESS MEDIA PVT LTD

    Related Posts

    50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ
    Bengaluru City Police

    50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ

    May 13, 2026
    ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
    Bengaluru City Police

    ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ

    May 13, 2026
    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ
    Bengaluru City Police

    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

    May 12, 2026
    Next Post
    ಬೀದರ ಜಿಲ್ಲಾ ಪೊಲೀಸ್ ರಿಂದ ಕರ್ಕಶ ಶಬ್ದವನ್ನುಟ್ಟು ಮಾಡುತ್ತಿದ್ದ ದ್ವಿಚಕ್ರ ವಾಹನಗಳ ಸೈಲೆನ್ಸರಗಳ ಮೇಲೆ ರೋಲರ್ ಹಾಯಿಸಿ ನಿಸ್ಕೃಯ ಕಾರ್ಯಾಚರಣೆ

    ಬೀದರ ಜಿಲ್ಲಾ ಪೊಲೀಸ್ ರಿಂದ ಕರ್ಕಶ ಶಬ್ದವನ್ನುಟ್ಟು ಮಾಡುತ್ತಿದ್ದ ದ್ವಿಚಕ್ರ ವಾಹನಗಳ ಸೈಲೆನ್ಸರಗಳ ಮೇಲೆ ರೋಲರ್ ಹಾಯಿಸಿ ನಿಸ್ಕೃಯ ಕಾರ್ಯಾಚರಣೆ

    ಸಿಸಿಬಿ ಪೊಲೀಸರ ವಿಶೇಷ ಕಾರ್ಯಾಚರಣೆ R&AW ಸಂಸ್ಥೆಯಲ್ಲಿ ಇಂಟಲಿಜೆನ್ ಸ್ಪೆಷಲ್ ಆಫೀಸರ್ ಕೆಲಸ ಕೊಡಿಸುವುದಾಗಿ ಅಭ್ಯರ್ಥಿಗಳಿಂದ ಹಣ ಪಡೆದುಕೊಂಡು ಕೆಲಸವನ್ನು ಕೊಡಿಸದೆ ವಂಚಿಸುತ್ತಿದ್ದ ಆರೋಪಿತರ ಬಂಧನ

    ಸಿಸಿಬಿ ಪೊಲೀಸರ ವಿಶೇಷ ಕಾರ್ಯಾಚರಣೆ R&AW ಸಂಸ್ಥೆಯಲ್ಲಿ ಇಂಟಲಿಜೆನ್ ಸ್ಪೆಷಲ್ ಆಫೀಸರ್ ಕೆಲಸ ಕೊಡಿಸುವುದಾಗಿ ಅಭ್ಯರ್ಥಿಗಳಿಂದ ಹಣ ಪಡೆದುಕೊಂಡು ಕೆಲಸವನ್ನು ಕೊಡಿಸದೆ ವಂಚಿಸುತ್ತಿದ್ದ ಆರೋಪಿತರ ಬಂಧನ

    ದ್ವಿಚಕ್ರ ವಾಹನಗಳು ಮಾಡುತ್ತಿದ್ದ ಓರ್ವ ಅಂತರ್ ರಾಜ್ಯದ ವ್ಯಕ್ತಿಯ ಬಂಧನ, 23.5 ಲಕ್ಷ ಬೆಲೆಬಾಳುವ 34 ದ್ವಿಚಕ್ರ ವಾಹನಗಳ ವಶ

    ದ್ವಿಚಕ್ರ ವಾಹನಗಳು ಮಾಡುತ್ತಿದ್ದ ಓರ್ವ ಅಂತರ್ ರಾಜ್ಯದ ವ್ಯಕ್ತಿಯ ಬಂಧನ, 23.5 ಲಕ್ಷ ಬೆಲೆಬಾಳುವ 34 ದ್ವಿಚಕ್ರ ವಾಹನಗಳ ವಶ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police Chikkabalapura Police CM Siddaramaiah Credo Press Credopress CREDOPRESS MEDIA Cyber Crime Davangere police Davangere Railway Police drugs news Electronic city Police Hoskote News Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • 50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ
    • ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
    • ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved