Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Bengaluru City Police

ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ.

CREDOPRESS MEDIA PVT LTD by CREDOPRESS MEDIA PVT LTD
March 13, 2025
in Bengaluru City Police,Crime News,J. JOHN PREM EDITOR,Karnataka News,Karnataka State Police,Latest News,Namma Police,Namma Police News,Police News
0
ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ.
0
SHARES
14
VIEWS
Share on FacebookShare on Twitter

18 ಮೊಬೈಲ್ ಫೋನ್ ಹಾಗೂ 2 ದ್ವಿ-ಚಕ್ರ ವಾಹನಗಳ ವಶ. ಮೌಲ್ಯ 5 ಲಕ್ಷ.

ರಾಜಗೋಪಾಲ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ, ಕೆಂಪೇಗೌಡನಗರದ ಆಂಧ್ರಹಳ್ಳಿಯಲ್ಲಿ ವಾಸವಿರುವ ಪಿಾದುದಾರರು ದಿನಾಂಕ:26/02/2025 ರಂದು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿಾದುದಾರರು ರಾಜಗೋಪಾಲನಗರದ 9ನೇ ಕ್ರಾಸ್‌ನಲ್ಲಿರುವ ಪ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಪಾಳಿಯ ಕೆಲಸಕ್ಕೆ ಹೋಗುವ ಸಲುವಾಗಿ ದಿನಾಂಕ:26/02/2025 ರಂದು ರಾಜಗೋಪಾಲನಗರ ಮುಖ್ಯರಸ್ತೆಯಲ್ಲಿ, ರಾತ್ರಿ ಮೊಬೈಲ್ ಫೋನ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳ ಪೈಕಿ ಹಿಂಬಂದಿ ಸೀಟ್‌ನಲ್ಲಿ ಕುಳಿತ್ತಿದ್ದ ವ್ಯಕ್ತಿಯು ಪಿರ್ಯಾದುದಾರರ ಮೊಬೈಲ್ ಫೋನ್‌ನ್ನು ಕಿತ್ತುಕೊಂಡು, ಪರಾರಿಯಾಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಮೊಬೈಲ್‌ನ ಬೆಲೆಯು * 24,000/- ಎಂದು ತಿಳಿಸಿರುತ್ತಾರೆ. ಈ ಕುರಿತು ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:02/03/2025 ರಂದು ಜಿ.ಕೆ.ಡಬ್ಲ್ಯೂ ಲೇಔಟ್ ಸರ್ಕಲ್ ಬಳಿ ದ್ವಿ-ಚಕ್ರ ವಾಹನ ಹಾಗೂ 18 ಮೊಬೈಲ್ ಫೋನ್‌ಗಳ ಸಮೇತ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಮೊಬೈಲ್ ಸುಲಿಗೆ ಮಾಡಿರುವುದಾಗಿ ತಪ್ರೊಪ್ಪಿಕೊಂಡಿರುತ್ತಾರೆ ಹಾಗೂ ದ್ವಿ-ಚಕ್ರ ವಾಹನವನ್ನು ಸಹ ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.

ದಿನಾಂಕ:03/02/2025 ರಂದು ಆರೋಪಿಗಳಿಬ್ಬರು ನೀಡಿದ ಮಾಹಿತಿ ಮೇರೆಗೆ ಪೀಣ್ಯಾ 2ನೇ ಹಂತದ ಬೃಂದಾವನ ರಸ್ತೆಯಲ್ಲಿರುವ ಒಂದು ಪ್ಯಾಕ್ಟರಿಯ ಬಳಿ ಕಳವು ಮಾಡಿದ 1 ದ್ವಿ-ಚಕ್ರ ವಾಹನವನ್ನು ನಿಲ್ಲಿಸಿರುವುದಾಗಿ ತಿಳಿಸಿದ್ದನ್ನು ವಶಪಡಿಸಿಕೊಳ್ಳಲಾಯಿತು.

ಈ ಪ್ರಕರಣದ ಆರೋಪಿಗಳಿಬ್ಬರ ವಶದಿಂದ ಒಟ್ಟು 18 ಮೊಬೈಲ್ ಫೋನ್‌ ಗಳು ಹಾಗೂ 2 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 5,00,000/- (ಐದು ಲಕ್ಷ ರೂಪಾಯಿ).

ಈ ಪ್ರಕರಣದ ಆರೋಪಿಗಳಿಬ್ಬರ ಬಂಧನದಿಂದ, 1) ರಾಜಗೋಪಾಲನಗರ ಪೊಲೀಸ್ ಠಾಣೆಯ-01 ಮೊಬೈಲ್ ಫೋನ್ ಸುಲಿಗೆ ಪ್ರಕರಣ. 2) ಪೀಣ್ಯ ಪೊಲೀಸ್ ಠಾಣೆಯ-01 ಮೊಬೈಲ್ ಫೋನ್ ಸುಲಿಗೆ ಪ್ರಕರಣ, 3) ಬಾಗಲಗುಂಟೆ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ, 4) ವಿಜಯನಗರ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ, ಸೇರಿದಂತೆ 2 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ಮತ್ತು 2 ಮೊಬೈಲ್ ಸುಲಿಗೆ ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 16 ಮೊಬೈಲ್ ಫೋನ್‌ಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ.

ದಿನಾಂಕ:03/03/2025 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.

ಈ ಕಾರ್ಯಾಚರಣೆಯನ್ನು ಶ್ರೀ ಸೈದುಲು ಅಡಾವತ್ ಐ.ಪಿ.ಎಸ್ ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ, ಶ್ರೀ ಸದಾನಂದ ಎ. ತಿಪ್ಪಣ್ಣವರ, ಸಹಾಯಕ ಪೊಲೀಸ್ ಆಯುಕ್ತರು, ಪೀಣ್ಯ ಉಪ-ವಿಭಾಗ ರವರ ನಿರ್ದೇಶನದಲ್ಲಿ, ರಾಜಗೋಪಾಲನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಪುನೀತ್ ಬಿ.ಎನ್ ರವರ ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

    Tags: Bengaluru City PoliceKarnataka NewsKarnataka State PoliceLatest NewsNamma PoliceNamma Police NewsPolice NewsPrime News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ
    Bengaluru City Police

    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

    May 12, 2026
    ಶಿಡ್ಲಘಟ್ಟ: ಐದು ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು – ಓರ್ವನ ಬಂಧನ
    CREDOPRESS

    ಶಿಡ್ಲಘಟ್ಟ: ಐದು ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು – ಓರ್ವನ ಬಂಧನ

    May 11, 2026
    ಈಶಾನ್ಯ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ.
    Bengaluru City Police

    ಈಶಾನ್ಯ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ.

    May 8, 2026
    Next Post
    ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ 7 ಲಕ್ಷ ಬೆಲೆ ಬಾಳುವ 10 ದ್ವಿಚಕ್ರ ವಾಹನಗಳ ವಶ

    ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ 7 ಲಕ್ಷ ಬೆಲೆ ಬಾಳುವ 10 ದ್ವಿಚಕ್ರ ವಾಹನಗಳ ವಶ

    ಕಾರಿನಲ್ಲಿದ್ದ 33 ಲಕ್ಷ ದೋಚಿದ್ದ ಆರೋಪಿ ಅರೆಸ್ಟ್

    ಕಾರಿನಲ್ಲಿದ್ದ 33 ಲಕ್ಷ ದೋಚಿದ್ದ ಆರೋಪಿ ಅರೆಸ್ಟ್

    ಕೋಣನಕುಂಟೆ ಪೊಲೀಸ್ ರಿಂದ ಭರ್ಜರಿ ಕಾರ್ಯಾಚರಣೆ

    ಕೋಣನಕುಂಟೆ ಪೊಲೀಸ್ ರಿಂದ ಭರ್ಜರಿ ಕಾರ್ಯಾಚರಣೆ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    BBMP B Dayananada Begur Police Bengaluru City Police Bidar District Police Bidar Police ccb CCB Police Cen Police Chikkabalapura Police CM Siddaramaiah Credo Press CREDOPRESS MEDIA Cyber Crime Davangere police drugs news Electronic city Police Govindaraj Nagar Police Hoskote News Hoskote Police Hulimavu Police Indian Police News J. JOHN PREM EDITOR Kannada Actor Darshan Karnataka News Karnataka State Police Karwar Police Kodagu Police Kolar Police Konanakunte Police Koramangala Police KR Puram Police Latest News Madiwala Police Madiwala Police Station Mahadevpura Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ
    • ಶಿಡ್ಲಘಟ್ಟ: ಐದು ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು – ಓರ್ವನ ಬಂಧನ
    • ಈಶಾನ್ಯ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ.

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved