18 ಮೊಬೈಲ್ ಫೋನ್ ಹಾಗೂ 2 ದ್ವಿ-ಚಕ್ರ ವಾಹನಗಳ ವಶ. ಮೌಲ್ಯ 5 ಲಕ್ಷ.
ರಾಜಗೋಪಾಲ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ, ಕೆಂಪೇಗೌಡನಗರದ ಆಂಧ್ರಹಳ್ಳಿಯಲ್ಲಿ ವಾಸವಿರುವ ಪಿಾದುದಾರರು ದಿನಾಂಕ:26/02/2025 ರಂದು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿಾದುದಾರರು ರಾಜಗೋಪಾಲನಗರದ 9ನೇ ಕ್ರಾಸ್‌ನಲ್ಲಿರುವ ಪ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಪಾಳಿಯ ಕೆಲಸಕ್ಕೆ ಹೋಗುವ ಸಲುವಾಗಿ ದಿನಾಂಕ:26/02/2025 ರಂದು ರಾಜಗೋಪಾಲನಗರ ಮುಖ್ಯರಸ್ತೆಯಲ್ಲಿ, ರಾತ್ರಿ ಮೊಬೈಲ್ ಫೋನ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳ ಪೈಕಿ ಹಿಂಬಂದಿ ಸೀಟ್‌ನಲ್ಲಿ ಕುಳಿತ್ತಿದ್ದ ವ್ಯಕ್ತಿಯು ಪಿರ್ಯಾದುದಾರರ ಮೊಬೈಲ್ ಫೋನ್‌ನ್ನು ಕಿತ್ತುಕೊಂಡು, ಪರಾರಿಯಾಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಮೊಬೈಲ್‌ನ ಬೆಲೆಯು * 24,000/- ಎಂದು ತಿಳಿಸಿರುತ್ತಾರೆ. ಈ ಕುರಿತು ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:02/03/2025 ರಂದು ಜಿ.ಕೆ.ಡಬ್ಲ್ಯೂ ಲೇಔಟ್ ಸರ್ಕಲ್ ಬಳಿ ದ್ವಿ-ಚಕ್ರ ವಾಹನ ಹಾಗೂ 18 ಮೊಬೈಲ್ ಫೋನ್‌ಗಳ ಸಮೇತ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಮೊಬೈಲ್ ಸುಲಿಗೆ ಮಾಡಿರುವುದಾಗಿ ತಪ್ರೊಪ್ಪಿಕೊಂಡಿರುತ್ತಾರೆ ಹಾಗೂ ದ್ವಿ-ಚಕ್ರ ವಾಹನವನ್ನು ಸಹ ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.

ದಿನಾಂಕ:03/02/2025 ರಂದು ಆರೋಪಿಗಳಿಬ್ಬರು ನೀಡಿದ ಮಾಹಿತಿ ಮೇರೆಗೆ ಪೀಣ್ಯಾ 2ನೇ ಹಂತದ ಬೃಂದಾವನ ರಸ್ತೆಯಲ್ಲಿರುವ ಒಂದು ಪ್ಯಾಕ್ಟರಿಯ ಬಳಿ ಕಳವು ಮಾಡಿದ 1 ದ್ವಿ-ಚಕ್ರ ವಾಹನವನ್ನು ನಿಲ್ಲಿಸಿರುವುದಾಗಿ ತಿಳಿಸಿದ್ದನ್ನು ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿಗಳಿಬ್ಬರ ವಶದಿಂದ ಒಟ್ಟು 18 ಮೊಬೈಲ್ ಫೋನ್ ಗಳು ಹಾಗೂ 2 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 5,00,000/- (ಐದು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಗಳಿಬ್ಬರ ಬಂಧನದಿಂದ, 1) ರಾಜಗೋಪಾಲನಗರ ಪೊಲೀಸ್ ಠಾಣೆಯ-01 ಮೊಬೈಲ್ ಫೋನ್ ಸುಲಿಗೆ ಪ್ರಕರಣ. 2) ಪೀಣ್ಯ ಪೊಲೀಸ್ ಠಾಣೆಯ-01 ಮೊಬೈಲ್ ಫೋನ್ ಸುಲಿಗೆ ಪ್ರಕರಣ, 3) ಬಾಗಲಗುಂಟೆ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ, 4) ವಿಜಯನಗರ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ, ಸೇರಿದಂತೆ 2 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ಮತ್ತು 2 ಮೊಬೈಲ್ ಸುಲಿಗೆ ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 16 ಮೊಬೈಲ್ ಫೋನ್‌ಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ.
ದಿನಾಂಕ:03/03/2025 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಶ್ರೀ ಸೈದುಲು ಅಡಾವತ್ ಐ.ಪಿ.ಎಸ್ ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ, ಶ್ರೀ ಸದಾನಂದ ಎ. ತಿಪ್ಪಣ್ಣವರ, ಸಹಾಯಕ ಪೊಲೀಸ್ ಆಯುಕ್ತರು, ಪೀಣ್ಯ ಉಪ-ವಿಭಾಗ ರವರ ನಿರ್ದೇಶನದಲ್ಲಿ, ರಾಜಗೋಪಾಲನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಪುನೀತ್ ಬಿ.ಎನ್ ರವರ ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









