ಡ್ರಗ್ಸ್ ವಿರುದ್ಧ ಸಮರ ಮುಂದುವರೆಸುತ್ತ ಗಾಂಜಾ ಮಾರಾಟ ಮಾಡಲು ಆಟೋರಿಕ್ಷಾದಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಚಿಕ್ಕಮಗಳೂರು-ಬೇಲೂರು ರಸ್ತೆಯಲ್ಲಿ ಪಿಐ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ನೇತೃತ್ವದ ಪೊಲೀಸ್ ತಂಡ ವಶಕ್ಕೆ ಪಡೆದು, ಆಟೋರಿಕ್ಷಾ ಸೇರಿದಂತೆ 5.143 ಕೆ.ಜಿ. ಗಾಂಜಾ ವಶಪಡಿಸಿಕೊಂಡಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಪಿಐ ಶ್ರೀ. ಸಚಿನ್ ಕುಮಾರ್, ಪಿಎಸ್ಐ ಶ್ರೀ. ರಘುನಾಥ್ ಎಸ್ ವಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀ. ಲೋಹಿತ್, ಶ್ರೀ. ಯುವರಾಜ, ಶ್ರೀ. ಮಹೇಶ, ಶ್ರೀ. ಸುನಿಲ್, ಶ್ರೀ. ಕಿರಣ, ಶ್ರೀ. ಶಶಿಧರ ಮತ್ತು ಶ್ರೀ. ಶಿವರಾಜ ರವರು ಭಾಗವಹಿಸಿರುತ್ತಾರೆ.









