ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಘಟನೆ
ಐಪಿಎಲ್- ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿ ಅವರಿಂದ 6.99 ಲಕ್ಷ ರು.ಗಳ ನಗದು ಮತ್ತು ಮೂರು ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿರುವ ಘಟನೆ ನಗರದ ಮಡಿವಾಳೇಶ್ವರ ಏರಿಯಾದಲ್ಲಿ ನಡೆದಿದೆ.
ಸೋಮವಾರ ರಾತ್ರಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೇಂಜರ್ಸ್ ಬೆಂಗಳೂರು, ಐಪಿಎಲ್ ಪಂದ್ಯಾವಳಿಯ ಕ್ರಿಕೆಟ್ ವೇಳೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು ಎನ್ನುವ ಖಚಿತ ಮಾಹಿತಿ ಮೇರೆಗೆ, ಇನ್ ಪೆಕ್ಟರ್ ಸಾಹೇಬಗೌಡ ಪಾಟೀಲ್ ಮತ್ತವರ ತಂಡ ದಾಳಿ ನಡೆಸಿ, ಕಕ್ಕಸಗೇರಾ ತಾಂಡಾದ ಪುಂಡಲೀಕ್ ಜಾಧವ, ಏವೂರು ದೊಡ್ಡ ತಾಂಡಾದ ಹರಿಪ್ರಸಾದ್ ರಾಠೋಡ್ ಎಂಬಿಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ3 ಮೊಬೈಲ್ ಹಾಗೂ 6.99 ಲಕ್ಷ ರು.ಗಳ ನಗದು ವಶಪಡಿಸಿಕೊಂಡು, ಮಂಗಳವಾರದಂದು ರದಂದು ಪ್ರಕರಣ ಪ್ರಕ ದಾಖಲಿಸಲಾಗಿದೆ.
ಜಪ್ತಿ ಪಡಿಸಿಕೊಂಡಿರುವ ಮೊಬೈಲ್‌ಗಳಲ್ಲಿ , ಆರೋಪಿಗೆ ಆರೋಪಿಗಳ ಜೊತೆಗೆ ಸಂಪರ್ಕದಲ್ಲಿರುವವರ ಪರಿಶೀಲಿಸಲಾಗುತ್ತದೆ, ಅವರೆಲ್ಲರನ್ನೂ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.
Sp ಹೇಳಿಕೆ :- ಕ್ರಿಕೆಟ್ ಬೆಟ್ಟಿಂಗ್, ಇಸ್ಪೇಟ್, ಮಟ್ಕಾ ಸೇರಿದಂತೆ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳ ಮತ್ತು ಸ್ಥಳದ ಮಾಹಿತಿ ನೀಡುವವರ ಹೆಸರು ಗೌಪ್ಯವಾಗಿಡಲಾಗುವುದು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕ ಪಾತ್ರ ಬಹಳ ಮುಖ್ಯವಾಗಿದೆ.
- ಪೃಥ್ವಿಕ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಯಾದಗಿರಿ.
ನ್ಯಾಯಾಲಯದ ವಶಕ್ಕೆ ಕೊಡಲಾಗುವುದು ಎಂದು ಇನ್ಸಪೆಕ್ಟರ್ ತಿಳಿಸಿದ್ದಾರೆ. ದಾಳಿ ವೇಳೆ ಪೊಲೀಸ್ ಸಿಬ್ಬಂದಿಗಳಾದ ಪಿಎಸ್‌ಐ ಡಿ. ವಿ. ನಾಯಕ್, ಗಣಪತಿ, ಶಿವಲಿಂಗಪ್ಪ, ಮಾನಯ್ಯ, ಸಿದ್ರಾಮರಡ್ಡಿ, ರವಿಕುಮಾರ ಹಾಗೂ ಸಿದ್ದಪ್ಪ ಇದ್ದರು.
ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವ ಆರೋಪಿಗಳನ್ನು ಬಂಧಿಸುವಲ್ಲಿ ಶಹಾಪುರ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಪೃಥ್ವಿಕ್ ಶಂಕರ್ ಮತ್ತು ಉಪ ಅಧೀಕ್ಷಕ ಜಾವೀದ್ ಇನಾಮ್‌ದಾರ್ ಅವರು ಅಭಿನಂದಿಸಿದ್ದಾರೆ.
ವರದಿ :- ಸಿದ್ದು ಪಟ್ಟೇದಾರ್









