ಜಯನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ:10/04/2025 ರಂದು ವಿದ್ಯಾಮದಾರರು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ವಿದ್ಯಾದುದಾರರು ಆರ್.ಆರ್ ನಗರದಲ್ಲಿ ವಾಸವಿದ್ದು, ಜಯನಗರದ 4ನೇ ಬ್ಲಾಕ್, ಸಂಗಮ್ ಸರ್ಕಲ್ ನಲ್ಲಿ ಸ್ವೀಟ್ ಅಂಗಡಿಯೊಂದನ್ನು ಇಟ್ಟುಕೊಂಡಿರುತ್ತಾರೆ. ದಿನಾಂಕ:17/04/2025 ರಂದು ರಾತ್ರಿ ಪಿರಿಯಾದುದಾರರು ಹೊಂದಿದ್ದ ದ್ವಿ-ಚಕ್ರ ವಾಹನವನ್ನು ಜಯನಗರ 8ನೇ ಬ್ಲಾಕ್, ಸಂಗಮ ಸರ್ಕಲ್ ಬಳಿ ನಿಲ್ಲಿಸಿ ಸ್ವೀಟ್ ಅಂಗಡಿಯಲ್ಲಿ ಸ್ವೀಟ್‌ಗಳನ್ನು ತಯಾರಿಸಲು ಹೋಗಿರುತ್ತಾರೆ. ಮಾರನೆಯ ದಿನ ವಾಪಸ್ ಬಂದು ದ್ವಿ-ಚಿಕ್ರ ವಾಹನವನ್ನು ನೋಡಲಾಗಿ ದ್ವಿ-ಚಕ್ರ ವಾಹನವನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ದ್ವಿ-: ಚಕ್ರ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು. ಬಸವನಗುಡಿಯಲ್ಲಿರುವ, ಪಡೆದುಕೊಳ್ಳಲಾಯಿತು. ವಶಕ್ಕೆ ವಡೆದ ಇಬ್ಬರು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ದ್ವಿ-ಚಕ್ರ ವಾಹನವನ್ನು ಕಳುವು ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿರುತ್ತಾರೆ. ಹಾಗೂ ಠಾಣಾ ಸರಹದ್ದಿನಲ್ಲಿ ಮತ್ತೊಂದು ದ್ವಿ-ಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ. ಸರಹದ್ದಿನಲ್ಲಿ ಮತ್ತಿಬ್ಬರ ಸಹಚರರೊಂದಿಗೆ ಸೇರಿಕೊಂಡು ಮನೆ ಕನ್ನ ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ. ಗಾಂಧಿಬಜಾರ್ ರೋಡ್‌ನಲ್ಲಿ ಪ್ರಕರಣದಲ್ಲಿ ಕಳುವಾಗಿದ್ದ ದ್ವಿ-ಚಕ್ರ ವಾಹನ ಸಮೇತ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಯಿತು
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಮನೆ ಕನ್ನ ಕಳವು ಮಾಡಿದ ಚಿನ್ನಾಭರಣಗಳನ್ನು ಕತ್ರಿಗುಪ್ಪೆಯಲ್ಲಿರುವ ಜ್ಯೂವಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದುತ್ತಾರೆ. ಅದೇ ದಿನ ಕತ್ರಿಗುಪ್ಪೆಯಲ್ಲಿರುವ ಜ್ಯೂವಲರಿ ಅಂಗಡಿಯ ಮಾಲೀಕನಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅಂಗಡಿಯ ಮಾಲೀಕನು ಠಾಣೆಗೆ ಹಾಜರಾಗಿ ಆರೋಪಿಗಳಿಂದ ಪಡೆದ ಚಿನ್ನಾಭರಣಗಳನ್ನು ಚಿನ್ನದ ಗಟ್ಟಿಯನ್ನಾಗಿಸಿ, ಮತ್ತೊಂದು ಜ್ಯೂವಲರಿ ಅಂಗಡಿಗೆ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ. ಅದೇ ದಿನ ಕತ್ರಿಗುಪ್ಪೆಯಲ್ಲಿರುವ ಮತ್ತೊಂದು ಜ್ಯೂವಲರಿ ಅಂಗಡಿಯ ಮಾಲೀಕನಿಗೆ ನೋಟಿಸ್ ಜಾರಿ ಮಾಡಲಾಗಿರುತ್ತದೆ. ಆದೇ ದಿನ ಮತ್ತೊಂದು ಜ್ಯೂವಲರಿ ಅಂಗಡಿಯ ಮಾಲೀಕನು ಠಾಣೆಗೆ ತಂದು ಹಾಜರು ಪಡಿಸಿದ 390 ಗ್ರಾಂನ ಎರಡು ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಯಿತು.
ಆರೋಪಿಗಳು ಕಳವು ಮಾಡಿದ ಮತ್ತೊಂದು ದ್ವಿ-ಚಿತ್ರ ವಾಹನವನ್ನು ಜಯನಗರದ ಮೆಟ್ರೋ ನಿಲ್ದಾಣದ ಬಳಿ ನಿಲ್ಲಿಸಿರುವುದಾಗಿ ತಿಳಿಸಿದ್ದು, ಆ ದ್ವಿ-ಚಕ್ರ ವಾಹನವನ್ನು ದಿನಾಂಕ:26/04/2025 ರಂದು ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿಗಳಿಂದ ಒಟ್ಟು 390 ಗ್ರಾಂನ ಎರಡು ಚಿನ್ನದ ಗಟ್ಟಿಗಳನ್ನು ಮತ್ತು ಎರಡು ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ { 32,00,000/-(ಮೂವತ್ತೆರಡು ಲಕ್ಷ ರೂಪಾಯಿ)
ಈ ಪ್ರಕರಣದ ಆರೋಪಿಗಳಿಬ್ಬರ ಬಂಧನದಿಂದ 1 ಜಯನಗರ ಪೊಲೀಸ್ ಠಾಣೆಯ-02 ದ್ವಿ-ಚಿಕ್ರ ವಾಹನ ಕಳವು ಪ್ರಕರಣಗಳು, 2) ಸುಬ್ರಮಣ್ಯಪುರ ಪೊಲೀಸ್ ಠಾಣೆಯ-01 ಮನೆ ಕನ್ನ ಕಳವು ಪ್ರಕರಣ, 3) ಕೋಣನಕುಂಟೆ ಪೊಲೀಸ್ ಠಾಣೆಯ- 01 ಮನೆ ಕನ್ನ ಕಳವು ಪ್ರಕರಣಗಳು ಸೇರಿದಂತೆ, ಒಟ್ಟು 04 ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀ ಲೋಕೇಶ್ ಜಗಲಾಸರ್ ಐ.ಪಿ.ಎಸ್ ರವರ ನೇತೃತ್ವದಲ್ಲಿ, ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ದೀಪಕ್ ಆರ್. ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ..









