ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಖಚಿತ ಮಾಹಿತಿ ಎಂದು ಬಂದಿದ್ದು ಮಾಹಿತಿಯಲ್ಲಿ ಎಚ್ಎಸ್ಆರ್ ಲೇಔಟ್ ನ ಆರನೇ ಸೆಕ್ಟರ್ ಫ್ರೀಡಂ ಇಂಟರ್ನ್ಯಾಷನಲ್ ಸ್ಕೂಲ್ ಹತ್ತಿರವಿರುವ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಐಷರ್ ಗೂಡ್ಸ್ ಕ್ಯಾರಿಯರ್ ವಾಹನದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ
ಮಾಹಿತಿಯನ್ನು ಆಧರಿಸಿದ ಹೆಚ್ಎಸ್ಆರ್ ಲೇಔಟ್ ನ ಪೊಲೀಸರು ಎನ್ ಡಿ ಪಿ ಎಸ್ ಕಾಯ್ದೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ನಂತರ ಸ್ಥಳಕ್ಕೆ ಧಾವಿಸಿ ದಾಳಿ ಮಾಡಿ ಓರ್ವ ವ್ಯಕ್ತಿಯನ್ನು ಒಂದು ಒಪ್ಪೋ ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ವಾಹನ ಮತ್ತು ವಾಹನದಲ್ಲಿದ್ದ ಗಾಂಜಾ ಸಮೇತ ವಶಕ್ಕೆ ಪಡೆದುಕೊಂಡರು
ಪೊಲೀಸ್ ಕಸ್ಟಡಿಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದ ಪೊಲೀಸರು ಆತನು ಒರಿಸ್ಸಾ ರಾಜ್ಯದಿಂದ ಕಡಿಮೆ ಬೆಲೆಗೆ ಗಾಂಜಾವನ್ನು ಖರೀದಿಸಿ ತದನಂತರ ಬೆಂಗಳೂರಿಗೆ ತಂದು ಸಾಫ್ಟ್ವೇರ್ ಉದ್ಯೋಗಿಗಳಿಗೆ ಹಾಗೂ ಕಾಲೇಜ್ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುತ್ತೇನೆ ಎಂದು ಆರೋಪಿ ತಿಳಿಸಿರುತ್ತಾನೆ
ಆರೋಪಿಯಿಂದ ಕೃತಕ್ಕೆ ಬಳಸಿದ ಒಟ್ಟು ಮೌಲ್ಯ 60 ಲಕ್ಷ ರೂಪಾಯಿಗಳಾಗಿರುತ್ತದೆ
ಈ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರದ ಶ್ರೀಮತಿ ಸಾರಾ ಫಾತಿಮಾ, ರವರ ಹಾಗೂ ವಾಸುದೇವ್ ವಿಕೆ ಸಹಾಯಕ ಪೊಲೀಸ್ ಆಯುಕ್ತರು, ಮಡಿವಾಳ ವಿಭಾಗ ರವರುಗಳ ಮಾರ್ಗದರ್ಶನದಲ್ಲಿ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ಕುಮಾರ್ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









