ಆಡುಗೋಡಿ ಪೊಲೀಸ್ ಠಾಣೆಯ ಸರಹದ್ದಿನಲ್ಲಿರುವ ಎಲ್ ಆರ್ ನಗರದಲ್ಲಿ ವಾಸವಿರುವ ಪಿರ್ಯಾದುದಾರರು ದಿನಾಂಕ 22/01/ 2025 ರಂದು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ.
ದೂರಿನಲ್ಲಿ ಒಂದು ತಿಂಗಳ ಹಿಂದೆ ಪಿರ್ಯಾದುದಾರರ ಮೊಬೈಲ್ ನಂಬರಗೆ ಅಪರಿಚಿತ ವ್ಯಕ್ತಿ ಒಬ್ಬರು “Work From Home” ಪ್ರಾಜೆಕ್ಟ್ ವರ್ಕ್ ಇರುವುದಾಗಿ ಮೆಸೇಜ್ ಮೂಲಕ ತಿಳಿಸಿರುತ್ತಾರೆ. ಪ್ರಾಜೆಕ್ಟ್ ಕೆಲಸ ಮುಗಿಸಿದ್ದಲ್ಲಿ ಕಮಿಷನ್ ಹಣ ನೀಡುವುದಾಗಿ ತಿಳಿಸಿರುತ್ತಾರೆ. ಇದನ್ನು ನಂಬಿದ ಪಿರ್ಯದುದಾರರು “Work From Home” ಪ್ರಾಜೆಕ್ಟ್ ವರ್ಕ್ ಕೆಲಸ ಮುಗಿಸಿದಾಗ, ಅಪರಿಚಿತ ವ್ಯಕ್ತಿಯು ಪಿ ರ್ಯಾದುದಾರರಿಗೆ ಪ್ರಾಜೆಕ್ಟ್ ವರ್ಕ್ ಕ್ರೆಡಿಟ್ ಸ್ಕೋರ್ ಬ್ಯಾಲೆನ್ಸ್ ಶೀಟ್ ನೆಗೆಟಿವ್ ತೋರಿಸುವುದಾಗಿ ತಿಳಿಸಿ, ಹಣ ಡ್ರಾ ಮಾಡಲು ಅಪರಿಚಿತ ವ್ಯಕ್ತಿಯು ನೀಡುವ ಫ್ಲಾಟ್ ಫಾರ್ಮ್ ನಲ್ಲಿ ರಿಜಿಸ್ಟರ್ ಮಾಡುವಂತೆ ತಿಳಿಸಿರುತ್ತಾನೆ. ಅದರಂತೆ ಪಿರ್ಯಾದುದಾರರು ಅಪರಿಚಿತ ವ್ಯಕ್ತಿಯು ತಿಳಿಸಿದಂತೆ ರಿಜಿಸ್ಟರ್ ಮಾಡಿದ್ದು ನಂತರ ಪಿರ್ಯಾದಿಯವರಿಗೆ 800/- ಲಾಭದ ಹಣ ಖಾತೆಗೆ ಬಂದಿರುತ್ತದೆ. ಅಪರಿಚಿತ ವ್ಯಕ್ತಿಯು ಉಳಿದ ಹಣ ಡ್ರಾ ಮಾಡಲು ಪಿರ್ಯಾದಿಯವರಿಗೆ ₹10,000/-ಹಣವನ್ನು ಪೇ ಮಾಡಲು ತಿಳಿಸಿದ್ದು ಅದರಂತೆ ಪಿರಿಯಾದುದಾರರು ಹಣವನ್ನು ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡಿದ್ದು. ನಂತರ ಪಿರಿಯಾದುದಾರರಿಗೆ ₹20,000/- ಹಣವು ಖಾತೆಗೆ ಜಮಾ ಆಗಿರುತ್ತದೆ.
ಅಪರಿಚಿತನು ಪಿರಿಯಾದುದಾರರಿಗೆ ಇದೇ ರೀತಿ ಆಸೆ ಮತ್ತು ನಂಬಿಕೆ ಬರುವಂತ ಮಾಡಿ ಪಿರಿಯಾದುದಾರರ ಕೋರ್ ಬ್ಯಾಲೆನ್ಸ್ ಶೀಟ್ ನಲ್ಲಿ ₹10, 83, 502/-ಹಣವನ್ನು ತೋರಿಸಿದ್ದು ಈ ಹಣವನ್ನು ಪಿರಿಯಾದುದಾರರ ಖಾತೆಗೆ ಜಮವಾಗಬೇಕಾದರೆ ಅಪರಿಚಿತನು ತಿಳಿಸಿದ ವಿವಿಧ ಬ್ಯಾಂಕ್ ಗಳ ಖಾತೆಗಳಿಗೆ ಹಂತ ಹಂತವಾಗಿ ಹಣವನ್ನು ವರ್ಗಾವಣೆ ಮಾಡಿಕೊಂಡು ಒಟ್ಟು 5,00,000/-ಹಣವನ್ನು ವರ್ಗಾವಣೆ ಮಾಡಿಸಿಕೊಂಡಿರುತ್ತಾನೆ. ಅಪರಿಚಿತ ವ್ಯಕ್ತಿಯು ಪಿರ್ಯಾದಿಯವರಿಗೆ ಇನ್ನೂ ಹೆಚ್ಚಿನ ಹಣ ಅಂದರೆ 3,24,000/- ಹಣ ಜಮಾ ಮಾಡಲು ತಿಳಿಸಿದ್ದರಿಂದ ಅನುಮಾನ ಗೊಂಡ ಪಿರಿಯಾದುದಾರರು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ತಿಳಿಸಿರುತ್ತಾರೆ. ಆಡುಗೋಡಿ ಪೊಲೀಸ್ ಠಾಣೆಯವರು ಪ್ರಕರಣವನ್ನು ದಾಖಲಿಸಿರುತ್ತಾರೆ.
ತನಿಖೆಯನ್ನು ಮುಂದುವರಿಸಿದ್ದ ಆಡುಗೋಡಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು. ಪಿರಿಯಾದುದಾರರಿಂದ ಹಣ ವರ್ಗಾವಣೆ ಯಾಗಿದ್ದ ಪೆಡರಲ್ ಬ್ಯಾಂಕ್ ಉತ್ತರಪ್ರದೇಶ ಶಾಖೆಯ ಕೆ ವೈ ಸಿ ಡಿಟೈಲ್ಸ್ ನು ಖಾತೆದಾರರಿಗೆ ನೋಟಿಸ್ ಜಾರಿ ಮಾಡಲಾಯಿತು. ಫೆಡರಲ್ ಬ್ಯಾಂಕ್ ನ ಖಾತೆದಾರನು ನೋಟಿಸ್ ನೊಂದಿಗೆ ಠಾಣೆಗೆ ಹಾಜರಾಗಿ ಖಾತೆಯು ತನ್ನದೆಂದು ಒಪ್ಪಿಕೊಂಡಿದ್ದು, ಈ ಬ್ಯಾಂಕ್ ನ ಖಾತೆಯನ್ನು ಮುಂಬೈನಲ್ಲಿರುವ ಲೇಬರ್ ಕಾಂಟಾಕ್ಟ್ ನ ಮಾಲೀಕನು ಖಾತೆಯನ್ನು ತಿಳಿಸಿದ್ದು, ಸದರಿ ಖಾತೆಯ ಪಾಸ್ ಬುಕ್, ಎಟಿಎಂ ಕಾರ್ಡ್, ಸಿಮ್ ಕಾರ್ಡ್ ಆತನ ಬಳಿಯಲ್ಲಿಯೇ ಇಟ್ಟುಕೊಂಡಿರುತ್ತಾನೆ ಎಂದು ತಿಳಿಸಿರುತ್ತಾನೆ. ಈ ಬ್ಯಾಂಕ್ ನ ಖಾತೆಯನ್ನು ಲೀನ್ಮಾರ್ಕ್ ಮಾಡಿಸಲಾಗಿರುತ್ತದೆ.
ತನಿಖೆಯನ್ನು ಮುಂದುವರಿಸಿ ದಿನಾಂಕ 19/04/2025 ರಂದು ಫೆಡರಲ್ ಬ್ಯಾಂಕ್ ನ ಖಾತೆದಾರರೊಂದಿಗೆ ಮುಂಬೈಗೆ ತೆರಳಿ ಲೇಬರ್ ಕಾಂಟ್ರಾಕ್ಟ್ ಕೆಲಸ ಮಾಡಿಸಿಕೊಂಡಿದ್ದ ಮಾಲೀಕನನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಲಾಗಿ ಆತನು ಲೇಬರ್ ಕಾಂಟ್ರಾಕ್ಟ್ ಕೆಲಸ ಮಾಡುವ ವ್ಯಕ್ತಿಗಳಿಂದ ಬ್ಯಾಂಕ್ ಖಾತೆಗಳನ್ನು ತಿಳಿಸಿ ಖಾತೆಯ ಪಾಸ್ ಬುಕ್, ಎಟಿಎಂ ಕಾರ್ಡ್, ಸಿಮ್ ಕಾರ್ಡ್ಗಳನ್ನು ಉತ್ತರ ಪ್ರದೇಶದಲ್ಲಿರುವ ಮೂವರು ವ್ಯಕ್ತಿಗಳಿಗೆ ನೀಡುತ್ತಿದ್ದಾಗಿ ತಿಳಿಸಿದ್ದು ಇದಕ್ಕೆ ಅವರುಗಳು ಒಂದು ಖಾತೆಗೆ 1500 ಕಮಿಷನ್ ನೀಡಿದ್ದರೆಂದು ತಿಳಿಸಿದನು. ಇದೇ ರೀತಿ ಸುಮಾರು 22 ಖಾತೆಗಳ ದಾಖಲಾತಿಗಳನ್ನು ನೀಡಿದ್ದು ಕಮಿಷನ್ ಹಣವನ್ನು ಪಡೆದಿರುವುದಾಗಿ ತಿಳಿಸಿರುತ್ತಾನೆ.
ತನಿಖೆಯನ್ನು ಮುಂದುವರಿಸಿ ದಿನಾಂಕ 23.04.2025 ರಂದು ಮುಂಬೈನಲ್ಲಿ ಕಮಿಷನ್ ಪಡೆದ ಆರೋಪಿಯೊಂದಿಗೆ ಉತ್ತರಪ್ರದೇಶಕ್ಕೆ ತೆರಳಿದ್ದು, ಅಲ್ಲಿ ಓರ್ವ ಆರೋಪಿಯನ್ನು ತೋರಿಸಿದ್ದು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಆತನು ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪು ಒಪ್ಪಿಕೊಂಡಿದ್ದು, ತನ್ನೊಂದಿಗೆ ಇತರೆ ಸ್ನೇಹಿತರುಗಳು ಭಾಗಿಯಾಗಿರುವುದಾಗಿ ತಿಳಿಸಿರುತ್ತಾನೆ. ಈ ಪ್ರಕರಣದಲ್ಲಿ ತನಗೆ ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ದಾಖಲಾತಿಗಳನ್ನು ನೀಡಿದ್ದಲ್ಲಿ 18 ರಿಂದ 20 ಸಾವಿರ ಕಮಿಷನ್ ಹಣವನ್ನು ಪಡೆಯುತ್ತಿದ್ದಾಗಿ, ಲೋಕಲ್ ಬ್ಯಾಂಕ್ ಖಾತೆಯಾಗಿದ್ದಲ್ಲಿ 3000 ಕಮಿಷನ್ ಪಡೆದುಕೊಂಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ 26.4.2015 ರಂದು ಮುಂಬೈನಲ್ಲಿ ಕಮಿಷನ್ ಪಡೆಯುತ್ತಿದ್ದ ಆರೋಪಿಯೊಂದಿಗೆ ವಾರಣಾಸಿಯ ಪ್ರಯಾಗ್ರಾಜ್ ನಲ್ಲಿರುವ ಕಮಲಾ ನಗರದ ಬಾಡಿಗೆ ಮನೆ ಒಂದರಲ್ಲಿ ವಾಸವಿದ್ದ 10 ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಯಿತು ವರ್ಷಕ್ಕೆ ಪಡೆದ 10 ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪೊಪ್ಪಿಕೊಂಡಿರುತ್ತಾರೆ. ವಶಕ್ಕೆ ಪಡೆದ 10 ವ್ಯಕ್ತಿಗಳಿಂದ ಕೃತ್ಯಕ್ಕೆ ಬಳಸಿದ್ದ ಸುಮಾರು 400 ಮೊಬೈಲ್ ಸಿಮ್ಗಳು,140 ಎಟಿಎಂ ಕಾರ್ಡ್ ಗಳು,17 ಚೆಕ್ ಪುಸ್ತಕಗಳು,27 ಮೊಬೈಲ್ ಫೋನ್ ಗಳು,22 ವಿವಿಧ ಬ್ಯಾಂಕ್ ಪಾಸ್ ಬುಕ್ ಆದಾಯ ಮತ್ತು ಖರ್ಚು ವೆಚ್ಚಗಳನ್ನು ನಮೂದಿಸಿರುವ ಸ್ಪೈರಲ್ ಬೈಂಡಿನ ಪುಸ್ತಕ ಮತ್ತು 15,000/- ಹಣವನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಈ ಪ್ರಕರಣವನ್ನು ಆಗ್ನೇಯ ವಿಭಾಗದ ಡಿಸಿಪಿ ಶ್ರೀಮತಿ ಸಾರ ಫಾತೀಮಾರವರ ಮಾರ್ಗದರ್ಶನದಲ್ಲಿ, ಮಡಿವಾಳ ಉಪ ವಿಭಾಗದ ಎಸಿಪಿ ಕೆ ವಾಸುದೇವ ರವರ ನಿರ್ದೇಶನದಲ್ಲಿ ಆಡುಗೋಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ರವಿಕುಮಾರ್ ಸಿಮತ್ತು ಸಿಬ್ಬಂದಿಯವರು ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿರುತ್ತಾರೆ.









