ಪೊಲೀಸ್ ಇಲಾಖೆ ಒಂದು ವಿಶ್ವವಿದ್ಯಾಲವಿದ್ದಂತೆ. ಈ ಸಂಸ್ಥೆಯಲ್ಲಿಯೂ ಅನೇಕ ವಿಭಾಗಗಳಿವೆ. ಜನರಿಗೆ ರಕ್ಷಣೆ ಒದಗಿಸುವುದು ಹಾಗೂ ಯಾವುದೇ ಘಟನೆಯ ಸತ್ಯ ಪತ್ತೆ ಮಾಡುವುದು ಪೊಲೀಸರ ಮುಖ್ಯ ಕರ್ತವ್ಯವಾಗಿದೆ’
ಅಧಿಕಾರಿಗಳು ನಿರಂತರವಾಗಿ ಶ್ರಮಿಸಿ, ಶಿಷ್ಟಾಚಾರ ಕಾಪಾಡಬೇಕು.ಪೊಲೀಸರು ಯಾವಾಗಲೂ ತಮ್ಮ ಕರ್ತವ್ಯವನ್ನು ಮೊದಲು ವಹಿಸಿಕೊಳ್ಳಬೇಕು, ಯಾವುದೇ ಅಪಾಯ ಅಥವಾ ಪ್ರಚೋದನೆ ಎದುರಾದರೂ ಶಾಂತವಾಗಿರಬೇಕು ಮತ್ತು ಒಳ್ಳೆಯ ಮನಸ್ಸಿನವರಾಗಿರಬೇಕು ಮತ್ತು ಇತರರ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಾಗಿರಬೇಕು. ಎಂಬಂತೆ ಅನೇಕ ಪೊಲೀಸ್ ಅಧಿಕಾರಿಗಳು ಇತರ ಪೊಲೀಸ್ ಸಿಬ್ಬಂದಿಗಳಿಗೆ ಮಾದರಿಯಾಗಿದ್ದಾರೆ. ಅಂತಹ ಪೊಲೀಸ್ ಅಧಿಕಾರಿಗಳನ್ನು ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿಷ್ಠೆ, ದಕ್ಷತೆಯನ್ನು ಗುರುತಿಸಿ ಮಾನ್ಯ ಡಿಜಿ & ಐಜಿಪಿ ರವರ 2024-25 ನೇಸಾಲಿನ “ಪ್ರಶಂಸನಾ ಪದಕ” ವನ್ನು ನೀಡಿ ಅಭಿನಂದಿಸಿರುತ್ತಾರೆ.
ಸಾರ್ವಜನಿಕ ಸೇವೆಯಲ್ಲಿ ತಮ್ಮದೇ ಶೈಲಿಯಲ್ಲಿ ಛಾಪು ಮೂಡಿಸಿದ ಹಲವಾರು ಗಣ್ಯರು ನಮ್ಮಲ್ಲಿದ್ದಾರೆ. ಅದರಲ್ಲೂ ವಿಶೇಷವಾಗಿ ನಮ್ಮ ಹೆಮ್ಮೆಯ ಪೊಲೀಸ್ ಇಲಾಖೆಯು ಪ್ರತೀಕ್ಷಣ ಸ್ವಾಸ್ಥ್ಯ ಸಮಾಜದ ಸ್ಥಾಪನೆಗಾಗಿ ಕಾರ್ಯನಿರತವಾಗಿದೆ.









