ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ್ ಜಿಲ್ಲೆ ಬೀದರ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿ ಪತ್ತೆ ಕುರಿತು ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಬೀದರ ರವರ ಮುಂದಾಳತ್ವದಲ್ಲಿ, ಶ್ರೀ ಶಿವನಗೌಡ ಪಾಟೀಲ್, ಪೊಲೀಸ್ ಉಪಾಧೀಕ್ಷಕರು, ಬೀದರ್ ರವರ ನೇತೃತ್ವದಲ್ಲಿ ಶ್ರೀ ಪಾಲಾಕ್ಷಯ್ಯ ಎಮ್ ಹಿರೇಮಠ, ಸಿಪಿಐ ನಗರ ವೃತ್ತ ಬೀದರ್, ಶ್ರೀ ಸಿದ್ದಣ್ಣ ಗಿರಿಗೌಡರ್, ಪಿ.ಎಸ್.ಐ (ಕಾ&ಸೂ), ಶ್ರೀ ಎಮ್.ಎ ಜಬ್ಬಾರ್, ಪಿ.ಎಸ್.ಐ (ತನಿಖೆ), ಹಾಗೂ ಸಿಬ್ಬಂದಿರವರಾದ ಶ್ರೀ ಎಮ್.ಡಿ ಶರೀಫ್, ಎ.ಎಸ್.ಐ, ಶ್ರೀ ಎಮ್.ಡಿ ಆರೀಫ್ ಸಿಹೆಚ್.ಸಿ-607, ಶ್ರೀ ಮುತ್ತಣ್ಣಾ ಸಿಪಿಸಿ-1168, ಶ್ರೀ ಕಮಲಾಕರ್, ಬೀದರ ನಗರ ವೃತ್ತ ಕಚೇರಿ, ಹಾಗೂ ಶ್ರೀ ರಮೇಶ್, ಬೀದರ್ ಸಬ್ ಅರ್ಬನ್ ಠಾಣೆ ರವರನ್ನೊಳಗೊಂಡ ತಂಡವನ್ನು ರಚಿಸಿದ್ದು, ತಂಡವು ಸಿ.ಸಿ ಟಿವಿ, ವೈಜ್ಞಾನಿಕ ನೆರವಿನಿಂದ ಪೊಲೀಸ್ ಬಾತ್ಮಿದಾರರ ಮಾಹಿತಿಯಂತೆ ಪ್ರಕರಣ ದಾಖಲಾದ 24 ಗಂಟೆಯ ಒಳಗಡೆ ಒಬ್ಬ ಆರೋಪಿತನನ್ನು ವಶಕ್ಕೆ ಪಡೆದು ಅವನಿಂದ 7.5 ತೊಲೆ ಬಂಗಾರದ ಒಡವೆಗಳು ಅ:ಕಿ 6,37,500=00 ರೂಪಾಯಿ ಮೌಲ್ಯದವುಗಳನ್ನು ವಶ ಪಡಿಸಿಕೊಂಡು ಆರೋಪಿತನ ವಿರುದ್ಧ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗಿದೆ.
ಅತೀ ಚಾಕ ಚಾಕತ್ಯೆಯಿಂದ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ









