ಸಂಚಾರ ನಿರ್ವಹಣೆಗೆ ಡ್ರೋನ್ ಶಕ್ತಿ, ಟ್ರಾಫಿಕ್ ಪೊಲೀಸರಿಗೆ ಹೊಸ ಅಸ್ತ್ರ
ಆಕಾಶದಿಂದ ಸಂಚಾರ ನಿಯಂತ್ರಣ, ಬೆಂಗಳೂರು ಪೊಲೀಸರಿಂದ ಡ್ರೋನ್ ಕ್ರಾಂತಿ
ಅಪಘಾತ, ಉಲ್ಲಂಘನೆ ಪತ್ತೆಗೆ ಡ್ರೋನ್ ಕಣ್ಗಾವಲು, ತಂತ್ರಜ್ಞಾನದೊಂದಿಗೆ ತಂತ್ರಹೆಣೆದ ಸಂಚಾರ ಪೊಲೀಸರು
ಆಧುನಿಕ ಜಗತ್ತಿನಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ಮತ್ತು ಬೆಳವಣಿಗೆ ಅಧಿಕವಾಗುತ್ತಿದೆ. ಆಕಾಶದ ಲೋಹದ ಹಕ್ಕಿಗಳು ಈ ಪ್ರಕ್ರಿಯೆಯ ಹೆಗ್ಗುರುತು. ಇದರಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಚಾರ ನಿರ್ವಹಣೆ ಮತ್ತು ಕಾನೂನು ಜಾರಿಗಾಗಿ ಡ್ರೋನ್ಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. ಇವು ದಟ್ಟಣೆಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲು, ಅಪಘಾತಗಳನ್ನು ದಾಖಲಿಸಲು ಮತ್ತು ಸಂಚಾರ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ. ಡ್ರೋನ್ ಬಳಕೆಯಿಂದ ಮಾನವ ಸಂಪನ್ಮೂಲಗಳ ಅಗತ್ಯ ಕಡಿಮೆಯಾಗಿ, ದಕ್ಷತೆ ಹೆಚ್ಚುತ್ತದೆ.ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









