ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಾನಂದ ನಗರದಲ್ಲಿ ಪಿರಿಯಾದುದಾರರು ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿ ವಾಪಸ್ ಮನೆಗೆ ಬಂದು ಬೀಗವನ್ನು ತೆರೆದು ಒಳಗೆ ಪ್ರವೇಶಿಸಿ ನೋಡಲಾಗಿ ಯಾರು ಅಪರಿಚಿತರು ಬೀರುವಿನಲ್ಲಿಟ್ಟಿದ ಹತ್ತು ಲಕ್ಷ ರೂಪಾಯಿ ನಗದು ಮತ್ತು 125 ಗ್ರಾಂ ಚಿನ್ನದ ಸರ ಹಾಗೂ ಬಳೆಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ವಿವಿದಾಯಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿ ಮೇರೆಗೆ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರೋದು ಆರೋಪಿಯು ತಪ್ಪು ಒಪ್ಪಿಕೊಂಡಿರುತ್ತಾನೆ
ಸುಧೀರ್ಘವಾಗಿ ವಿಚಾರಣೆ ಮಾಡಿದ ನಂದಿನಿ ಲೇಔಟ್ ಪೊಲೀಸರು ಪಿರಿಯಾದುದಾರರ ಮಗಳ ಮಗನಾಗಿದ್ದು ಕುಟುಂಬ ಸಮೇತ ಹೊಸ ಪಾಳ್ಯಕ್ಕೆ ಹೋಗಿದ್ದನ್ನು ಗಮನಿಸಿ ಪಿರ್ಯಾದುದಾರರ ಮನೆಯ ಬಾಗಿಲ ಕಿಯನ್ನು ಕೀ ತಯಾರಿಸುವ ವ್ಯಕ್ತಿಯಿಂದ ನಕಲು ಮಾಡಿಸಿಕೊಂಡು ಅದರಿಂದ ಬಾಗಿಲನ್ನು ತೆಗೆದು ಈ ಕೃತ್ಯ ವ್ಯಸಗಿರುವುದಾಗಿ ಆರೋಪಿಯು ತಿಳಿಸಿರುತ್ತಾನೆ
ಈ ಪ್ರಕರಣದಲ್ಲಿ ಕಳುವು ಮಾಡಿದ ಚಿನ್ನಾಭರಣಗಳನ್ನು ಯಶವಂತಪುರದ ಮತ್ತಿಕೆರೆಯಲ್ಲಿರುವ ಜ್ಯುವೆಲ್ಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ಹಾಗೂ ನಗದನ್ನು ಅಂದ್ರಹಳ್ಳಿಯಲ್ಲಿ ವಾಸವಿರುವ ಸ್ನೇಹಿತನಿಗೆ ನೀಡಿರುವುದಾಗಿ ಹೇಳಿರುತ್ತಾನೆ
ಯಶವಂತಪುರದ ಮತ್ತಿಕೆರೆಯಲ್ಲಿರುವ ಜುವೆಲ್ಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ 81 ಗ್ರಾಂ ಚಿನ್ನಾಭರಣವನ್ನು ನಂದಿನಿ ಲೇಔಟ್ ಪೊಲೀಸರು ವಶಪಡಿಸಿಕೊಂಡರು
ಈ ಪ್ರಕರಣದ ಆರೋಪಿಯ ಬಂಧನದಿಂದ 81 ಗ್ರಾಂ ಚಿನ್ನ ಒಂದು ದ್ವಿಚಕ್ರ ವಾಹನ ಎರಡು ನಕಲಿ ಕೀ ಗಳು 9,44,000 ನಗದು ಗಳನ್ನು ವಶಪಡಿಸಿ ಕೊಳ್ಳಲಾಯಿತು
ಈ ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸೈದುಲ್ಲಾ ಅಡಾವತ್ ರವರು ಮತ್ತು ಮಲ್ಲೇಶ್ವರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಎಚ್ ಕೃಷ್ಣಮೂರ್ತಿ ರವರ ಮಾರ್ಗದರ್ಶನದಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಲಕ್ಷ್ಮಣ್ ಜಿಹಾಗು ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









