ಮಾನ್ಯ ಶ್ರೀ ಪ್ರದೀಪ್ ಗುಂಟಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಬೀದರ, ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಬೀದರ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದ ಪತ್ತೆ ಕುರಿತು ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಬೀದರ, ರವರ ಮುಂದಾಳತ್ವದಲ್ಲಿ ಶ್ರೀ ಶಿವಾನಂದ ಪವಾಡಶೆಟ್ಟಿ, ಪೊಲೀಸ್ ಉಪಾಧೀಕ್ಷಕರು ಭಾಲ್ಕಿ ರವರ ನೇತೃತ್ವದಲ್ಲಿ ಭಾಲ್ಕಿ ಗ್ರಾಮೀಣ ವೃತ್ತದ ಸಿ.ಪಿ.ಐ ಶ್ರೀ ಹನುಮರೆಡ್ಡೆಪ್ಪಾ ಶ್ರೀ ಅಶೋಕ, ಪಿಎಸ್ಐ, ಶ್ರೀ ರಮೇಶ ಪಿ.ಎಸ್.ಐ ಸಿಬ್ಬಂದಿರವರಾದ ಶ್ರೀ ಗುರುನಾಥ, ಶ್ರೀ ಶಾಮರಾಯ, ಶ್ರೀ ಶಿವರಾಜ, ಶ್ರೀ ಉಮಾಕಾಂತಾ ದಾನಾ, ಶ್ರೀ ಭಗವಾನ, ಶ್ರೀ ರಾಜೇಂದ್ರ, ಶ್ರೀ ಮಹಾದೇವ ಹಿರೇಮಠ, ಶ್ರೀ ಜಗದೀಶ, ರವರನ್ನೊಳಗೊಂಡ ತಂಡವನ್ನು ರಚಿಸಿದ್ದು, ತಂಡವು ಸಿ.ಸಿ. ಟಿ.ವಿ ಕಂಟ್ರೋಲ ಕಮಾಂಡ್ ಸೆಂಟರ್ ವಿಭಾಗದಲ್ಲಿನ ಸಿಸಿ ಕ್ಯಾಮರಾ ಫುಟೇಜ, ಪೊಲೀಸ್ ಬಾತ್ಮಿದಾರರಿಂದ ಪಡೆದ ಮಾಹಿತಿ ಆಧಾರದ ಮೇರೆಗೆ ಆರೋಪಿತರ ಪತ್ತೆ ಹಚ್ಚಿ ಅವರಿಂದ ಒಂದು ಕಾರ ಅ:ಕಿ: 1,00,000=00, ಒಂದು ಬುಲೆರೋ ಪಿಕಪ್ ವಾಹನ ಅ:ಕಿ: 3,00,000=00 ರೂಪಾಯಿ ಹಾಗೂ ನಗದು ಹಣ 3,00,000=00 ರೂಪಾಯಿ ಹೀಗೆ ಒಟ್ಟು 7,00,000=00 ರೂಪಾಯಿ ಬೆಲೆ ಬಾಳುವ ಸ್ವತ್ತನ್ನು ವಶ ಪಡಿಸಿಕೊಂದು ಆರೋಪಿತರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗಿದೆ.
ಅತೀ ಚಾಕ ಚಾಕತ್ಯೆಯಿಂದ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ…









