ಮಾನ್ಯ ಶ್ರೀ ಪ್ರದೀಪ್ ಗುಂಟಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಬೀದರ, ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಬೀದರ ಹುಮನಾಬಾದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ರಾಬರಿ ಪ್ರಕರಣದ ಪತ್ತೆ ಕುರಿತು ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಬೀದರ ರವರ ಮುಂದಾಳತ್ವದಲ್ಲಿ ಶ್ರೀ ಜೆ.ಎಸ್ ನ್ಯಾಮಗೌಡರ್, ಪೊಲೀಸ್ ಉಪಾಧೀಕ್ಷಕರು ಹುಮನಾಬಾದ ರವರ ನೇತೃತ್ವದಲ್ಲಿ ಹುಮನಾಬಾದ ವೃತ್ತದ ಸಿ.ಪಿ.ಐ ಶ್ರೀ ಗುರುಲಿಂಗಪ್ಪಗೌಡ ಪಾಟೀಲ್, ಶ್ರೀ ಸುರೇಶಕುಮಾರ ಪಿಎಸ್ಐ ಹುಮನಾಬಾದ ಪೊಲೀಸ್ ಠಾಣೆ, ಸಿಬ್ಬಂದಿರವರಾದ ಶ್ರೀ ಶಿವಶರಣ, ಶ್ರೀ ಬಸವರೆಡ್ಡಿ, ಶ್ರೀ ಚನ್ನಬಸಪ್ಪ, ಶ್ರೀ ರಮೇಶ, ಶ್ರೀ ಸೂರ್ಯಕಾಂತ, ಶ್ರೀ ನಾಗೇಶ, ಶ್ರೀ ಗಂಗಾಧರ, ಶ್ರೀ ಉಮೇಶ ರವರನ್ನೊಳಗೊಂಡ ತಂಡವನ್ನು ರಚಿಸಿದ್ದು, ತಂಡವು ಸಿ.ಸಿ ಟಿ.ವಿ ಕಂಟ್ರೋಲ ಕಮಾಂಡ್ ಸೆಂಟರ್ ವಿಭಾಗದಲ್ಲಿನ ಸಿಸಿ ಕ್ಯಾಮರಾ ಫುಟೇಜ, ಪೊಲೀಸ್ ಬಾತ್ಮಿದಾರರಿಂದ ಪಡೆದ ಮಾಹಿತಿ ಆಧಾರದ ಮೇರಗೆ ಆರೋಪಿತರನ್ನು ವಶಕ್ಕೆ ಪಡೆದು ಅವರಿಂದ 17 ಗ್ರಾಂ ಬಂಗಾರದ ಒಡವೆಗಳು ಅ:ಕಿ: 1,19,000=00 ರೂಪಾಯಿ ಬೆಲೆ ಬಾಳುವ ಸ್ವತ್ತನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗಿದೆ.
ಅತೀ ಚಾಕ ಚಾಕತ್ಯೆಯಿಂದ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ…









