ಮನೆ ಕೆಲಸದವನಿಂದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯ ಬಂದನದಿಂದ 13 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಮಲ್ಲೇಶ್ವರಂ ಪೊಲೀಸರು
ಅಪಾರ್ಟ್ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ ಪಿರಿಯಾದುದಾರರು ಮನೆಯಲ್ಲಿ ಬೀರುವಿನಲ್ಲಿ ಬಿದ್ದ ಚಿನ್ನಾಭರಣಗಳನ್ನು ಮನೆಯಲ್ಲೇ ಕೆಲಸ ಮಾಡಿಕೊಂಡಿದ್ದ ಕೆಲಸಗಾರ ಕಳುವು ಮಾಡಿರುತ್ತಾನೆ ಎಂದು ದೂರನ್ನು ದಾಖಲಿಸಿರುತ್ತಾರೆ
ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ಆರೋಪಿತನಿಂದ 13 ಲಕ್ಷ ಬೆಲೆಬಾಳುವ 140 ಗ್ರಾಂ ಚಿನ್ನಾಭರಣಗಳನ್ನು ಹಡಮಾನವಿಟ್ಟಿದ್ದ ವಿವಿಧ ಜ್ಯುವೆಲರಿ ಅಂಗಡಿಗಳಿಂದ ವಶಪಡಿಸಿಕೊಳ್ಳಲಾಯಿತು.
ಇದೇ ತರಹ ಜ್ಯುವೆಲ್ಲರಿ ಅಂಗಡಿಗಳಲ್ಲಿ ಬೇರೆ ಕಡೆ ಗಮನ ಸೆಳೆದು ಚಿನ್ನಾಭರಣಗಳನ್ನು ಕಳುವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆರೋಪಿತನಿಂದ 13.41, ಲಕ್ಷ ಮೌಲ್ಯದ134 ಗ್ರಾಮ್ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ಕೊಂಡರು
ಮತ್ತೊಂದು ಪ್ರಕರಣ ಮನೆ ಕಳು ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಬಂಧಿತನಿಂದ 12 ಲಕ್ಷ ಮೌಲ್ಯದ 132 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಯಿತು
ಈ ಪ್ರಕರಣದ ಆರೋಪಿಗಳ ಬಂಧನದಿಂದ
1. ಮಲ್ಲೇಶ್ವರಂ ಪೊಲೀಸ್ ಠಾಣೆಯ ಒಂದು ಆಗಲು ಮನೆ ಕಳುವ ಪ್ರಕರಣ
- ಆಡುಗೋಡಿ ಪೊಲೀಸ್ ಠಾಣೆಯ ಒಂದು ಹಗಲು ಮನೆ ಕನ್ನ ಪ್ರಕರಣ
- ಬ್ಯಾಟರಾಯನಪುರ ಪೊಲೀಸ್ ಠಾಣೆಯ ಒಂದು ಕಳವು ಪ್ರಕರಣ
ಮಲ್ಲೇಶ್ವರಂ ಪೊಲೀಸರಿಂದ ಒಟ್ಟು ಐದು ಪ್ರಕರಣಗಳು ಪತ್ತೆಯಾಗಿದ್ದು
ಈ ಮೂರು ಪ್ರಕರಣಗಳ ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸೈದುಳು ಅಡಾವತ್ ರವರ ಮಾರ್ಗದರ್ಶನದಲ್ಲಿ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ ಹಾಗೂ ಮಲ್ಲೇಶ್ವರಂ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಗದೀಶ್ ಬಿ ಆರ್ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









