ಹುಲಿಮಾವು ಪೊಲೀಸ್ ಠಾಣಾ, ಸರಹದ್ದಿನ ಅಕ್ಷಯ ನಗರದಲ್ಲಿ ಮನೆ ಕಳುವಾಗಿರುವ ಬಗ್ಗೆ ಪಿರಿಯಾದುದಾರರು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ
ಪಿರಿಯಾದುದಾರರು ಶೃಂಗೇರಿಗೆ ಹೋಗಿ ಮತ್ತೆ ವಾಪಸ್ ಬಂದು ನೋಡಲಾಗಿ ಮನೆಯ ಮುಂಬಾಗಿ ನಲ್ಲಿ ಮನೆಯಲ್ಲಿದ್ದ ವಸ್ತುಗಳಾಗಲಿ ಹಾನಿಯಾಗಿರುವುದಿಲ್ಲ ಆದರೆ ಮನೆಯ ಕಬೋರ್ಡ್ ನಲ್ಲಿಟ್ಟಿದ್ದ 33 ಗ್ರಾಂ ಚಿನ್ನಾಭರಣ ಹಾಗೂ 40 ಬೆಳ್ಳಿಯ ವಸ್ತುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪ್ರಕರಣ ದಾಖಲಿಸಿರುತ್ತಾರೆ
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಹುಳಿಮಾವು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆ ಹಾಕಿ ಠಾಣಾಸರ ಹದ್ದಿನ ಬಸವನಪುರ ಬಸ್ ನಿಲ್ದಾಣದಲ್ಲಿ ಓರ್ವ ವ್ಯಕ್ತಿಯನ್ನು 40 ಗ್ರಾಂ ಬೆಳ್ಳಿಯ ವಸ್ತುವಿನ ಸಮೇತ ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳುವು ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿರುತ್ತಾನೆ
ಆರೋಪಿತನನ್ನು ಸುಧೀರ್ಘವಾಗಿ ವಿಚಾರಣೆಗೊಳಪಡಿಸಿದ ಪೊಲೀಸರು ಮೈಸೂರಿನ ವಿಜಯನಗರ ಮನೆ ಒಂದರಲ್ಲಿ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಮತ್ತೊರುವ ಸಹಚಾರನೊಂದಿಗೆ ಸೇರಿಕೊಂಡು ಕಳುವು ಮಾಡಿರುವುದಾಗಿ ತಿಳಿಸಿರುತ್ತಾನೆ ಕಳುವು ಮಾಡಿದ ಆಭರಣಗಳ ಪೈಕಿ ಕೆಲವು ಆಭರಣಗಳನ್ನು ತಮಿಳುನಾಡಿನ ತಿರುಚನಪಳ್ಳಿ ಜಿಲ್ಲೆಯ ವಾಸವಿರುವ ಆತನ ಸ್ನೇಹಿತನಿಗೆ ನೀಡಿರುವುದಾಗಿ ಜೆಪಿ ನಗರದಲ್ಲಿ ವಾಸವಿರುವ ಮತ್ತೊಬ್ಬ ಸ್ನೇಹಿತನಿಗೆ ಸ್ವಲ್ಪ ಆಭರಣಗಳನ್ನು ನೀಡಿದ್ದು, ಬಸವನಗುಡಿ ಇಲ್ಲಿರುವ ಬೆನಕ ಗೋಲ್ಡ್ ಕಂಪನಿಯಲ್ಲಿ ಸ್ವಲ್ಪ ಚಿನ್ನಾಭರಣಗಳನ್ನು ಮಾರಾಟ ಮಾಡಿರುವುದಾಗಿ ಹಾಗೂ ಬನ್ನೇರುಘಟ್ಟ ಮುಖ್ಯ ರಸ್ತೆಯ ನೈಸ್ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಮರದ ಕೆಳಗೆ ಬಚ್ಚಿಟ್ಟಿರುವುದಾಗಿ ಆರೋಪಿ ತಿಳಿಸಿರುತ್ತಾನೆ

ತನಿಖೆಯನ್ನು ಮುಂದುವರಿಸಿದ ಪೊಲೀಸರು 16 ಲಕ್ಷ ಮೌಲ್ಯದ 136 ಗ್ರಾಂ ಚಿನ್ನದ ಗಟ್ಟಿ ಒಂದು ಕೆಜಿ 653 ಗ್ರಾಂ ಬೆಳ್ಳಿಯ ವಸ್ತುಗಳನ್ನು ಹುಳಿಮಾವು ಪೊಲೀಸರು ವಶಪಡಿಸಿಕೊಂಡಿರುತ್ತಾರೆ
ಈ ಪ್ರಕರಣದ ಆರೋಗ್ಯ ಬಂಧನದಿಂದ ಹುಳಿಮಾವು ಪೊಲೀಸ್ ಠಾಣೆಯ ಒಂದು ಮನೆ ಕಳವು ಪ್ರಕರಣ, ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯ ಒಂದು ಮನೆಗಳು ಪ್ರಕರಣ ಸೇರಿದಂತೆ ಒಟ್ಟು ಎರಡು ಪ್ರಕರಣಗಳು ಪತ್ತೆಯಾಗಿರುತ್ತವೆ
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರಾದ ನಾರಾಯಣ ಎನ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ ಕೆಎಂ ಸತೀಶ್ ರವರ ಉಸ್ತುವಾರಿಯಲ್ಲಿ ಹುಳಿಮಾವು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿಜಿ ಕುಮಾರಸ್ವಾಮಿಹಾಗೂ ಅಧಿಕಾರಿ ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ
ನಮ್ಮ ಪೊಲೀಸ್ ನ್ಯೂಸ್









