ಫರಹತಾಬಾದ ಪೊಲೀಸರು ಒಂದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ದೂರುದಾರರಾದ ಶಿವರಾಜರ ಎಂಬುವವರ ತಾಯಿ ತರಕಾರಿ ಕಡಿಯಲು ಹೋಗುತ್ತಿರುವಾಗ, 27 ವರ್ಷದ ಇಬ್ಬರು ಅಪರಿಚಿತರು ಅವರ ಬಳಿಯಿದ್ದ 80,000 ಬೆಲೆ ಬಾಳುವ 12 ಗ್ರಾಂ ಬಂಗಾರದ ಮಂಗಳ ಸೂತ್ರವನ್ನು ದೋಚಿದ್ದಾರೆ.
ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಇಬ್ಬರು ಆರೋಪಿಗಳಾದ ಕಡಣಿ ಗ್ರಾಮದ ಕಲ್ಲಾಲಿಂಗ ಹಾಗೂ ಮಹೇಶ್ ಎಂಬುವವರನ್ನು ಬಂಧಿಸಿದ್ದಾರೆ.

ಇದರೊಟ್ಟಿಗೆ, ತಮ್ಮ ದುಶ್ಚಟಗಳಿಗೆ ಹಣ ಹೊಂದಿಸಲು ಒಂಟಿ ಮಹಿಳೆಯನ್ನು ಹೆದರಿಸಿ ಸುಲಿಗೆ ಮಾಡಿದ ಪ್ರಕರಣವೂ ಪತ್ತೆಯಾಗಿದೆ.ಆರೋಪಿಗಳಿಂದ ಒಟ್ಟು 20 ಗ್ರಾಂನ 2 ಬಂಗಾರದ ತಾಳಿ, ಮೋಟಾರ್ ಸೈಕಲ್ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಯನ್ನು ಕಲಬುರಗಿ ನಗರದ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್. ಡಿ ಅವರು ಶ್ಲಾಘಿಸಿದ್ದಾರೆ

ಕಲಬುರ್ಗಿ ನಗರದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ. ಕನಿಕಾ ಸಿಕ್ರೆವಾಲ್ ಮತ್ತು ಶ್ರೀ. ಪ್ರವೀಣ್ ಹೆಚ್ ನಾಯಕ್ ಅವರ ಮಾರ್ಗದರ್ಶನದಲ್ಲಿ, ಸಬ್ಬರ್ಬನ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಡಿಜಿ ರಾಜಣ್ಣಅವರ ನೇತೃತ್ವದಲ್ಲಿ ಫರಹತಾಬಾದ್ ಪೊಲೀಸ್ ಠಾಣೆಯ ಶ್ರೀ.ಮಲ್ಲಿಕಾರ್ಜುನ್ ಸಿ ಇಕ್ಕಳಕಿ ( ಪಿ.ಐ ), ಶ್ರೀ.ಅಶೋಕ ( ಎ.ಎಸ್.ಐ ) ಮತ್ತು ಸಿಬ್ಬಂದಿಯವರಾದ ತುಕಾರಾಂ, ಕಲ್ಯಾಣಕುಮಾರ ಹಾಗು ಆನಂದ ಅವರನೊಳಗೊಂಡ ತಂಡವು ಯಶಸ್ವಿಗೊಳಿಸಿದೆ.ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









