ಹೊರರಾಜ್ಯದ ಓರ್ವ ಪೆಡ್ಲರ್ ಪೊಲೀಸ್ ವಶಕ್ಕೆ.
27 ಕೆಜಿ ಗಾಂಜಾ, 3.2 ಕೆಜಿ ಹ್ಯಾಶಿಶ್ ಆಯಿಲ್ ಮತ್ತು ಒಂದು ದ್ವಿಚಕ್ರ ವಾಹನ.
ವೈಟ್‌ಫೀಲ್ಡ್ ವಿಭಾಗದ ನಾಗೊಂಡನಹಳ್ಳಿ ನಲ್ಲಿ ಈ ಸ್ಥಳದಲ್ಲಿ ಘಟನೆ ನಡೆದಿದೆ.ಒಟ್ಟು 55 ಲಕ್ಷ ರೂಪಾಯಿ ವಶಪಾದಸಿಕೊಡಿದರೆ
ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ದೊಡ್ಡ ಪ್ರಮಾಣದ ಮಾದಕ ವಸ್ತುವನ್ನು ಸಾಗಿಸುತ್ತಿದ್ದ ಹೊರರಾಜ್ಯದ ಪೆಡ್ಲರ್ ಒಬ್ಬನನ್ನು ಬಂಧಿಸಿದ್ದಾರೆ.
ದಿನಾಂಕ 01-03-2026 ರಂದು ನಾಗೊಂಡನಹಳ್ಳಿಯ ಶಿವಕುಂಟಮ್ಮ ದೇವಸ್ಥಾನದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಯನ್ನು ತಡೆದು ತಪಾಸಣೆ ಮಾಡಲಾಗಿತ್ತು. ಈ ವೇಳೆ ಆತನ ಬಳಿ ನಿಷೇಧಿತ ಮಾದಕ ವಸ್ತುಗಳಿರುವುದು ಪತ್ತೆಯಾಗಿದೆ.
ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಕಡಿಮೆ ಬೆಲೆಗೆ ಗಾಂಜಾ ಮತ್ತು ಹ್ಯಾಶಿಶ್ ಆಯಿಲ್ ಖರೀದಿಸಿ ತಂದು, ನಗರದ ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ಐಟಿ-ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ.
ಬಂಧಿತನಿಂದ 55 ಲಕ್ಷ ಮೌಲ್ಯದ 27 ಕೆಜಿ ಗಾಂಜಾ ಹಾಗೂ 3 ಕೆಜಿಗೂ ಅಧಿಕ ಹ್ಯಾಶಿಶ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.
ಪ್ರಸ್ತುತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಜಾಲದ ಹಿಂದಿರುವ ಪ್ರಮುಖ ಪೂರೈಕೆದಾರನಿಗಾಗಿ ವೈಟ್‌ಫೀಲ್ಡ್ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಡಿಸಿಪಿ ಸೈದುಲು ಅಡಾವತ್ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಗುರುಪ್ರಸಾದ್ ಎ. ಮತ್ತು ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.









