ತಳಕು ಠಾಣಾ ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ, ಅಂಗಡಿ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ, ಆರೋಪಿಯಿಂದ 2400/- ನಗದು ಹಣ ಮತ್ತು ಎರಡು ಮೊಬೈಲ್ ಗಳು ವಶ.
ಚಿತ್ರದುರ್ಗ ಜಿಲ್ಲೆ, ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಳಕು ಗ್ರಾಮದ ಬಸ್ ನಿಲ್ದಾಣದಲ್ಲಿ ದಿನಾಂಕ:04.03.2026 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ:05.03.2026 ರಂದು ಬೆಳಗಿನ ಜಾವ ಸುಮಾರು 05:00 ಗಂಟೆ ಮದ್ಯದ ವೇಳೆಯಲ್ಲಿ ರಾಜೇಶ ತಂದೆ ಲಚ್ಯಾನಾಯ್ಕ ರವರ ಯಾರೋ ಕಳ್ಳರು ಪಿರ್ಯಾದಿ ರಾಜೇಶ್ ರವರ ಡಬ್ಬ ಶೆಡ್ ಅಂಗಡಿಯ ಮೇಲೆ ಹತ್ತಿ ಯಾವುದೋ ಒಂದು ಕಟ್ಟರ್ ನ ಸಹಾಯದಿಂದ ಅಂಗಡಿಯ ಮೇಲ್ಬಾವಣಿಗೆ ಅಳವಡಿಸಿರುವ ತಗಡಿನ ಶೀಟ್ ಅನ್ನು ಸ್ವಲ್ಪ ಭಾಗ ಕಟ್ ಮಾಡಿ ಒಳಗಡೆ ಇಳಿದು ಅಂಗಡಿಯಲ್ಲಿ ಲಾಕರ್ ನಲ್ಲಿ ಪರ್ಸ್ ನಲ್ಲಿಟ್ಟಿದ್ದ 2,400/- ರೂ ನಗದು ಹಣ ಮತ್ತು ಸುಮಾರು 20,000/-4 ដ ដ POCO & IMΕΙ ΝΟ:01 864480067452341, IMEI NO:02 864480067452358 ಎಂತ ಇರುವ ಒಂದು ಮೊಬೈಲ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತನ್ನ ಅಂಗಡಿಯಲ್ಲಿ ಕಳ್ಳತನವಾಗಿರುವ ನಗದು ಹಣ, ಮೊಬೈಲ್ ಅನ್ನು ಮತ್ತು ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಿ ಎಂತ ಇದ್ದ ದೂರಿನ ಮೇರೆಗೆ ಠಾಣಾ ಮೊ.ನಂ.43/2026 ಕಲಂ: 331(4), 305(a) BNS-2023 ರೀತ್ಯಾ ಕೇಸು ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತದೆ.









