ಬೆಂಗಳೂರು ನಗರದ ಆಗ್ನೇಯ ವಿಭಾಗದ (South East Division) ಪೊಲೀಸರು ಮಾರ್ಚ್ 2026ರಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಕಳೆದುಹೋಗಿದ್ದ ಮತ್ತು ಕಳುವಾಗಿದ್ದ ಒಟ್ಟು 321 ಮೊಬೈಲ್ ಫೋನ್ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಒಟ್ಟು ಮೊಬೈಲ್ ಸಂಖ್ಯೆ: 321 ಫೋನ್ಗಳು.ಒಟ್ಟು ಮೌಲ್ಯ: ಸುಮಾರು 49.30 ಲಕ್ಷ.ಕೇಂದ್ರ ಸರ್ಕಾರದ CEIR (Central Equipment Identity Register) ತಂತ್ರಾಂಶದ ಮೂಲಕ ಈ ಫೋನ್ಗಳನ್ನು ಪತ್ತೆಹಚ್ಚಲಾಗಿದೆ.
ಪೊಲೀಸರು ವಿವಿಧ ಠಾಣಾ ವ್ಯಾಪ್ತಿಯಲ್ಲಿ ಪತ್ತೆಹಚ್ಚಿದ ಮೊಬೈಲ್ಗಳ ವಿವರ ಆಡುಗೋಡಿ 45 ಮೊಬೈಲ್ಗಳು ಬೊಮ್ಮನಹಳ್ಳಿ ೪೯ ಮೊಬೈಲ್ ಗಳು ಎಚ್ಎಸ್ಆರ್ ಲೇಔಟ್ 15 ಮೊಬೈಲ್ ಗಳು ಕೋರಮಂಗಲ 27 ಮೊಬೈಲ್ಗಳು ಮಡಿವಾಳ ೪೯ ಮೊಬೈಲ್ ಗಳು ಮೈಕೋ ಲೇಔಟ್ 65 ಮೊಬೈಲ್ ಗಳು ಎಸ್ ಜಿ ಪಾಳ್ಯ 41 ಮೊಬೈಲ್ಗಳು ತಿಲಕ್ ನಗರ್ 30 ಮೊಬೈಲ್ ಗಳು ಒಟ್ಟು 321 ಮೊಬೈಲ್ ಗಳು ವಶಪಡಿಸಿಕೊಳ್ಳಲಾಗಿದೆ.
ಆಡುಗೋಡಿ 45 ಮೊಬೈಲ್ಗಳು ಬೊಮ್ಮನಹಳ್ಳಿ ೪೯ ಮೊಬೈಲ್ ಗಳು ಎಚ್ಎಸ್ಆರ್ ಲೇಔಟ್ 15 ಮೊಬೈಲ್ ಗಳು ಕೋರಮಂಗಲ 27 ಮೊಬೈಲ್ಗಳು ಮಡಿವಾಳ ೪೯ ಮೊಬೈಲ್ ಗಳು ಮೈಕೋ ಲೇಔಟ್ 65 ಮೊಬೈಲ್ ಗಳು ಎಸ್ ಜಿ ಪಾಳ್ಯ 41 ಮೊಬೈಲ್ಗಳು ತಿಲಕ್ ನಗರ್ 30 ಮೊಬೈಲ್ ಗಳು ಒಟ್ಟು 321 ಮೊಬೈಲ್ ಗಳು ವಶಪಡಿಸಿಕೊಳ್ಳಲಾಗಿದೆ.
ಈ ಎಲ್ಲಾ 321 ಮೊಬೈಲ್ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ
ಪತ್ತೆಹಚ್ಚಲಾದ ಎಲ್ಲಾ 321 ಮೊಬೈಲ್ ಫೋನ್ಗಳನ್ನು ಆಯಾ ವಾರಸುದಾರರನ್ನು ಕರೆಸಿ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ. ಕಳೆದುಹೋದ ಫೋನ್ ಮರಳಿ ಸಿಕ್ಕಿದ್ದಕ್ಕೆ ಸಾರ್ವಜನಿಕರು ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ನಿಮ್ಮ ಮೊಬೈಲ್ ಫೋನ್ ಕಳೆದುಹೋದರೆ ಕೂಡಲೇ CEIR ಪೋರ್ಟಲ್ನಲ್ಲಿ ದೂರು ದಾಖಲಿಸಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.









