ಬೆಂಗಳೂರು ನಗರದ ಕೇಂದ್ರ ವಿಭಾಗದ ಕಬ್ಬನ್‌ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಿನಾಂಕ:28.03.2026 ರಂದು ಟಾಟಾ ಐಪಿಎಲ್-2026 ಪಂದ್ಯಾವಳಿ ನಡೆದಿದ್ದು. ಆ ಸಮಯದಲ್ಲಿ ಪಂದ್ಯಾವಳಿಯನ್ನು ವೀಕ್ಷಿಸಲು ಬಂದಿದ್ದ ಸಾರ್ಜಜನಿಕರ ಮೊಬೈಲ್ ಫೋನ್‌ಗಳು ಕಳ್ಳತನವಾಗಿದ್ದು, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಓರ್ವ ಪ್ರಮುಖ ಆರೋಪಿ ಮತ್ತು ಹಲವು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಶಕ್ಕೆ ಪಡಿದು ಪ್ರಕರಣವು ವಿಚಾರಣೆಯಲ್ಲಿರುತ್ತದೆ. ಪ್ರಮುಖ ಆರೋಪಿಯಿಂದ ವಿವಿಧ ಕಂಪನಿಯ 21 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ಆತನ ಹಲವು ಸಹಚರರುಗಳನ್ನು ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ತನಿಖೆಗೆ ಒಳಪಡಿಸಲಾಗಿರುತ್ತದೆ. ತನಿಖೆ ಚಾಲ್ತಿಯಲ್ಲಿರುತ್ತದೆ.
ಈ ಕಾರ್ಯಾಚರಣೆಯನ್ನು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಅಕ್ಷಯ್.ಎಂ.ಹಾಕೆ, ಐಪಿಎಸ್ ರವರ ಮಾರ್ಗದರ್ಶನದಲ್ಲಿ ಕಬ್ಬನ್ಪಾರ್ಕ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಡಾ:ಪ್ರಿಯದರ್ಶಿನಿ ರವರ ನೇತೃತ್ವದಲ್ಲಿ, ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜೀಧಿಸುವಲ್ಲಿ ಶ್ರೀ.ದೇವೇಂದ್ರಪ್ಪ.ಕೆ.ಎಸ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡವು ಪ್ರಕರಣವನ್ನು ಯಶಸ್ವಿಯಾಗಿರುತ್ತಾರೆ









