ಸೋನಾಟಾ, ಟೈಟಾನ್, ಫಾಸ್ಟ್‌ಟ್ಯಾಕ್ ಬ್ಯಾಂಡ್‌ನ ನಕಲಿ ವಾಚ್‌ಗಳನ್ನು ಹಾಗೂ ಬಿಡಿಭಾಗಗಳನ್ನು ಅಸಲಿಯೆಂದು ನಂಬಿಸಿ ಮಾರಾಟ ಮಾಡುತ್ತಿದ್ದ 05 ಅಂಗಡಿಗಳ ಮೇಲೆ ದಾಳಿ,
670 ವಾಚ್‌ಗಳು ಹಾಗೂ 414 ವಾಚ್‌ಗಳ ಬಿಡಿಭಾಗಗಳ ವಶ. ಮೌಲ್ಯ ಸುಮಾರು 25 ಲಕ್ಷ.
ಸಿಸಿಬಿಯ ಆರ್ಥಿಕ ಅಪರಾಧ ದಳದಲ್ಲಿ ಟೈಟನ್ ಕಂಪನಿಯ ಅಧಿಕೃತ ಕಾನೂನು ಪ್ರತಿನಿಧಿಯಾದ ಪಿತ್ಯಾದುದಾರರು ದಿನಾಂಕ:18/03/2026 ರಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಬೆಂಗಳೂರು ನಗರದ ಚಿಕ್ಕಪೇಟೆ, ಸುಲ್ತಾನ್‌ಪಾಳ್ಯ ಮುಖ್ಯರಸ್ತೆ, ಗಂಗಾನಗರ ಮತ್ತು ದಿಣ್ಣೂರು ಮುಖ್ಯರಸ್ತೆಯಲ್ಲಿರುವ 05 ಅಂಗಡಿಗಳಲ್ಲಿ ಪ್ರತಿಷ್ಠಿತ ಕಂಪೆನಿಗಳಾದ ಸೋನಾಟಾ, ಟೈಟಾನ್, ಫಾಸ್ಟ್‌ಟ್ರಾಕ್‌ನ ನಕಲಿ ವಾಚ್‌ಗಳು ಹಾಗೂ ಅವುಗಳ ಬಿಡಿಭಾಗಗಳನ್ನು ಅಸಲಿಯೆಂದು ನಂಬಿಸಿ, ಮೋಸದಿಂದ ಸಾರ್ವಜಕರಿಗೆ ಮಾರಾಟ ಮಾಡಿ, ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿರುವುದಾಗಿ ತಿಳಿಸಿರುತ್ತಾರೆ.
ತನಿಖೆಯನ್ನು ಮುಂದುವರೆಸಿದ ಸಿಸಿಬಿಯ ಆರ್ಥಿಕ ಅಪರಾಧ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ದಿನಾಂಕ: 18/03/2026 ಮತ್ತು 20/03/2026 ರಂದು 05 ಅಂಗಡಿಗಳ ಮೇಲೆ ದಾಳಿ ಮಾಡಿ 670 ವಿವಿಧ ಮಾದರಿಯ ಸೋನಾಟಾ, ಟೈಟಾನ್, ಫಾಸ್ಟ್‌ಟ್ರಾಕ್ ನಕಲಿ ವಾಚ್‌ಗಳು ಹಾಗೂ 414 ವಾಚುಗಳ ಬಿಡಿಭಾಗಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ ಸುಮಾರು 25,00,000/-(ಇಪ್ಪತ್ತೈದು ಲಕ್ಷ ರೂಪಾಯಿ).
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ.ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀ.ಅಜಯ್ ಹಿಲೋರಿ,ಅಪರ ಪೊಲೀಸ್ ಆಯುಕ್ತರು, ಅಪರಾಧ ಮತ್ತು ಶ್ರೀ.ರಾಜಾ ಇಮಾಮ್ ಕಾಸಿಂ, ಉಪ ಪೊಲೀಸ್ ಆಯುಕ್ತರು, ಅಪರಾಧ-2 ರವರ ನೇತೃತ್ವದಲ್ಲಿ, ಸಿಸಿಬಿಯ ಆರ್ಥಿಕ ಅಪರಾಧ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಹೆಚ್.ಕೆ.ಮಹಾನಂದ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಸಂತೋಷ್ ರಾಮ್.ಆರ್ ಮತ್ತು ಇತರೆ ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









