ಪ್ರಸ್ತುತ ಕರ್ನಾಟಕದಾದ್ಯಂತ ಯುವಕರನ್ನು ಗುರಿಯಾಗಿಸಿಕೊಂಡು ಭಾರಿ ಉದ್ಯೋಗ ವಂಚನೆ(Job Scam) ನಡೆಯುತ್ತಿದೆ. ಸರ್ಕಾರಿ ಇಲಾಖೆಗಳು ಮತ್ತು ಪ್ರಮುಖ ಕಾರ್ಪೊರೇಟ್ ಕಂಪನಿಗಳಲ್ಲಿ ಗ್ಯಾರಂಟಿ ಕೆಲಸ ಕೊಡಿಸುವುದಾಗಿ ನಂಬಿಸಿ, ವಂಚಕರು ನಿರುದ್ಯೋಗಿ ಪದವೀಧರರು ಮತ್ತು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ.
ಅವರ ಆಮಿಷಗಳಿಗೆ ಬಲಿಯಾಗಬೇಡಿ! ನಿಮ್ಮ ಕಷ್ಟದ ಹಣ ಮತ್ತು ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಬೇಡಿ.”ನೋಂದಣಿ ಶುಲ್ಕ” (Registration fee), “ಕಡ್ಡಾಯ ತರಬೇತಿ”,ಎಂಬ ಹೆಸರಿನಲ್ಲಿ ಮೊದಲೇ ಹಣ ಕೇಳುತ್ತಾರೆ. ನೆನಪಿಡಿ, ಯಾವುದೇ ನಿಜವಾದ ಕಂಪನಿ ಕೆಲಸ ನೀಡಲು ಹಣ ಕೇಳುವುದಿಲ್ಲ.
ಅಪರಿಚಿತ ನಂಬರ್ಗಳಿಂದ ವಾಟ್ಸಾಪ್ಅಥವಾ ಟೆಲಿಗ್ರಾಮ್ನಲ್ಲಿ ಸಂದೇಶ ಕಳುಹಿಸಿ, ಅತಿ ಹೆಚ್ಚು ಸಂಬಳದ ಪಾರ್ಟ್-ಟೈಮ್ ಕೆಲಸ ಅಥವಾ ನೇರ ಉದ್ಯೋಗದ ಆಸೆ ತೋರಿಸುತ್ತಾರೆ.
ಯಾವುದೇ ಏಜೆಂಟ್, ಕನ್ಸಲ್ಟೆನ್ಸಿ ಅಥವಾ ವ್ಯಕ್ತಿ ಕೆಲಸ ಕೊಡಿಸಲು ₹1 ರೂಪಾಯಿಕೇಳಿದರೂ ತಕ್ಷಣ ಅಲ್ಲಿಂದ ದೂರ ಇರಿ.ಮಧ್ಯವರ್ತಿಗಳನ್ನು ಎಂದಿಗೂ ನಂಬಬೇಡಿ. ಉದ್ಯೋಗದ ಜಾಹೀರಾತು ನಿಜವೇ ಎಂಬುದನ್ನು ಕಂಪನಿಯ ಅಧಿಕೃತ ವೆಬ್ಸೈಟ್ ಅಥವಾ ಸರ್ಕಾರದ ಅಧಿಕೃತ ಪೋರ್ಟಲ್ ಮೂಲಕವೇ ಖಚಿತಪಡಿಸಿಕೊಳ್ಳಿ.ನಿಮ್ಮ ಅಸಲಿ ಅಂಕಪಟ್ಟಿಗಳು, ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ವಿವರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ.
ನೀವು ಅಥವಾ ನಿಮ್ಮ ಸ್ನೇಹಿತರು ಈ ವಂಚಕರಿಗೆ ಹಣ ನೀಡಿ ಮೋಸ ಹೋಗಿದ್ದರೆ, ಭಯ ಅಥವಾ ಮುಜುಗರದಿಂದ ಸುಮ್ಮನಿರಬೇಡಿ
ತಕ್ಷಣ 1930 ಗೆ ಕರೆ ಮಾಡಿ: ಇದು ರಾಷ್ಟ್ರೀಯ ಸೈಬರ್ ಕ್ರೈಮ್ ಹೆಲ್ಪ್ಲೈನ್ (National Cyber Crime Helpline). ಹಣ ಕಳೆದುಕೊಂಡ ಕೆಲವೇ ಗಂಟೆಗಳಲ್ಲಿ ಕರೆ ಮಾಡಿದರೆ, ಪೊಲೀಸರು ವಂಚಕನ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿ ನಿಮ್ಮ ಹಣವನ್ನು ವಾಪಸ್ ಕೊಡಿಸಲು ಸಾಧ್ಯವಾಗುತ್ತದೆ! ಆನ್ಲೈನ್ನಲ್ಲಿ ದೂರು ನೀಡಿ: www.cybercrime.gov.in ವೆಬ್ಸೈಟ್ಗೆ ಭೇಟಿ ನೀಡಿ ದೂರು ದಾಖಲಿಸಿ.
CEN ಪೊಲೀಸ್ ಠಾಣೆಗೆ ಭೇಟಿ ನೀಡಿ: ಕರ್ನಾಟಕದ ನಿಮ್ಮ ಹತ್ತಿರದ ಸೈಬರ್, ಆರ್ಥಿಕ ಅಪರಾಧಗಳು ಮತ್ತು ಮಾದಕದ್ರವ್ಯ ತಡೆ (CEN) ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ.
ನಿಮ್ಮ ಎಲ್ಲಾ ಕಾಲೇಜು ಗ್ರೂಪ್ಗಳು ಮತ್ತು ಉದ್ಯೋಗಾಕಾಂಕ್ಷಿ ಸ್ನೇಹಿತರೊಂದಿಗೆ ಈ ಸಂದೇಶವನ್ನು ಹಂಚಿಕೊಳ್ಳಿ. ಜಾಗೃತಿಯೇ ನಮ್ಮ ರಕ್ಷಣೆ!









