Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Bengaluru City Police

ಕಾಶಿ ತೀರ್ಥಯಾತ್ರೆಗೆ ಹೋಗಿದ್ದವರ ಮನೆಗೆ ಕನ್ನ ಹಾಕಿದ್ದ ಕಳ್ಳರು ಈಗ ಪೊಲೀಸ್ ಅತಿಥಿಗಳು

CREDOPRESS MEDIA PVT LTD by CREDOPRESS MEDIA PVT LTD
May 26, 2026
in Bengaluru City Police,CREDOPRESS,Crime News,J. JOHN PREM EDITOR,Karnataka News,Karnataka State Police,Kolar Police,Latest News,Namma Police,Namma Police News,National News,Police News
0
ಕಾಶಿ ತೀರ್ಥಯಾತ್ರೆಗೆ ಹೋಗಿದ್ದವರ ಮನೆಗೆ ಕನ್ನ ಹಾಕಿದ್ದ ಕಳ್ಳರು ಈಗ ಪೊಲೀಸ್ ಅತಿಥಿಗಳು
0
SHARES
14
VIEWS
Share on FacebookShare on Twitter

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭಾರಿ ಕನ್ನ ಕಳವು ಪ್ರಕರಣವೊಂದನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕಾಶಿ ತೀರ್ಥಯಾತ್ರೆಗೆ ತೆರಳಿದ್ದ ಪಿರ್ಯಾದುದಾರರ ಮನೆಯ ಬಾಗಿಲು-ಕಿಟಕಿ ಮುರಿದು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ.
ಕಳೆದ ಮಾರ್ಚ್ 20 ರಂದು ಬ್ಯಾಡರಹಳ್ಳಿಯ ಡಿ ಗ್ರೂಪ್ ಲೇಔಟ್ ನಿವಾಸಿಯೊಬ್ಬರು ಕುಟುಂಬ ಸಮೇತ ಕಾಶಿ ತೀರ್ಥಯಾತ್ರೆಗೆ ತೆರಳಿದ್ದರು. ಇದನ್ನು ಸಂಚು ಮಾಡಿದ ಕಳ್ಳರು, ಮನೆಯ ಬಾಗಿಲು ಮತ್ತು ಕಿಟಕಿಯನ್ನು ಹೊಡೆದು ಒಳಪ್ರವೇಶಿಸಿ ಬೀರುವಿನಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು. ಮಾರ್ಚ್ 28 ರಂದು ಮಾಲೀಕರು ಮನೆಗೆ ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿದ್ದು, ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಈ ನಡುವೆ ಚಿಕ್ಕಮಗಳೂರಿನ ಲಕ್ಕವಳ್ಳಿ ಠಾಣೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಜಿಲ್ಲಾ ಕಾರಾಗೃಹದಲ್ಲಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಾಡಿ ವಾರೆಂಟ್ ಮುಖೇನ ಏಪ್ರಿಲ್ 28 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆಯ ವೇಳೆ ಆರೋಪಿಗಳು ಕದ್ದ ಮಾಲನ್ನು ಮಂಗಳೂರಿನ ಜ್ಯೂವೆಲ್ಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮೇ 7 ರಂದು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು 470 ಗ್ರಾಂ ಚಿನ್ನಾಭರಣ, 750 ಗ್ರಾಂ ಬೆಳ್ಳಿಯ ವಸ್ತುಗಳು Rs.21.43 ಲಕ್ಷ ನಗದು ಹಣ ,01 ದ್ವಿಚಕ್ರ ವಾಹನ, ಒಟ್ಟು ಮೌಲ್ಯ: Rs.64,73,000/- ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಇಬ್ಬರು ಆರೋಪಿಗಳ ಬಂಧನದಿಂದ ಬ್ಯಾಡರಹಳ್ಳಿ ಹಾಗೂ ಪೀಣ್ಯ ಪೊಲೀಸ್ ಠಾಣೆಯ ತಲಾ ಒಂದು ಕನ್ನ ಕಳವು ಪ್ರಕರಣಗಳು ಪತ್ತೆಯಾದಂತಾಗಿದೆ. ಆರೋಪಿಗಳನ್ನು ಸದ್ಯ ಮರಳಿ ಚಿಕ್ಕಮಗಳೂರು ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.

ವಾಯುವ್ಯ ವಿಭಾಗದ ಡಿಸಿಪಿ ಶ್ರೀ ನಾಗೇಶ್ ಡಿ.ಎಲ್. ಅವರ ಮಾರ್ಗದರ್ಶನದಲ್ಲಿ ಹಾಗೂ ಪೀಣ್ಯ ಉಪವಿಭಾಗದ ಎಸಿಪಿ ಶ್ರೀ ಅಶೋಕ್ ಎಂ.ಎಸ್. ನೇತೃತ್ವದಲ್ಲಿ, ಬ್ಯಾಡರಹಳ್ಳಿ ಇನ್ಸ್‌ಪೆಕ್ಟರ್ ಶ್ರೀ ಸಿ. ಭಾಸ್ಕರ್ ಮತ್ತು ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಇಲಾಖೆಯ ಶ್ಲಾಘನೆಗೆ ಪಾತ್ರವಾಗಿದೆ.

    Tags: Bengaluru City PoliceByadarahalli police stationIndian Police NewsKarnataka NewsKarnataka State PoliceLatest NewsNamma PoliceNamma Police NewsPolice NewsPrime News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಜ್ಯೂವೆಲರಿ ಅಂಗಡಿ ಗೋಡೆ ಹೊಡೆದು ಕಳವು ಮಾಡಿದ್ದ ಹೊರರಾಜ್ಯದ ಮೂವರ ಬಂಧನ!
    Bengaluru City Police

    ಜ್ಯೂವೆಲರಿ ಅಂಗಡಿ ಗೋಡೆ ಹೊಡೆದು ಕಳವು ಮಾಡಿದ್ದ ಹೊರರಾಜ್ಯದ ಮೂವರ ಬಂಧನ!

    May 28, 2026
    ಸಿಲಿಕಾನ್ ಸಿಟಿಯಲ್ಲಿ ಸಿಸಿಬಿ ಮತ್ತು ಜೀವನಭೀಮಾನಗರ ಪೊಲೀಸರಿಂದ ಬೃಹತ್ ಜಂಟಿ ಕಾರ್ಯಾಚರಣೆ!
    Bengaluru City Police

    ಸಿಲಿಕಾನ್ ಸಿಟಿಯಲ್ಲಿ ಸಿಸಿಬಿ ಮತ್ತು ಜೀವನಭೀಮಾನಗರ ಪೊಲೀಸರಿಂದ ಬೃಹತ್ ಜಂಟಿ ಕಾರ್ಯಾಚರಣೆ!

    May 26, 2026
    ವಂಚನೆ ಎಚ್ಚರಿಕೆ 🚨ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಗಮನಕ್ಕೆ!Namma Police News |
    Bengaluru City Police

    ವಂಚನೆ ಎಚ್ಚರಿಕೆ 🚨ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಗಮನಕ್ಕೆ!Namma Police News |

    May 25, 2026
    Next Post
    ಜ್ಯೂವೆಲರಿ ಅಂಗಡಿ ಗೋಡೆ ಹೊಡೆದು ಕಳವು ಮಾಡಿದ್ದ ಹೊರರಾಜ್ಯದ ಮೂವರ ಬಂಧನ!

    ಜ್ಯೂವೆಲರಿ ಅಂಗಡಿ ಗೋಡೆ ಹೊಡೆದು ಕಳವು ಮಾಡಿದ್ದ ಹೊರರಾಜ್ಯದ ಮೂವರ ಬಂಧನ!

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    Bagalkot district police B Dayananada Begur Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Cyber Crime Davangere police drugs news Electronic city Police Excise Department Hoskote Police HSR Layout Police Hulimavu Police Indian Police News J. JOHN PREM EDITOR Kannada Actor Darshan Karnataka News Karnataka State Police Karwar Police Kodagu Police Kolar Police Konanakunte Police Koramangala Police KR Puram Police Latest News Madiwala Police Madiwala Police Station Mahadevpura Police Mangaluru Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಜ್ಯೂವೆಲರಿ ಅಂಗಡಿ ಗೋಡೆ ಹೊಡೆದು ಕಳವು ಮಾಡಿದ್ದ ಹೊರರಾಜ್ಯದ ಮೂವರ ಬಂಧನ!
    • ಕಾಶಿ ತೀರ್ಥಯಾತ್ರೆಗೆ ಹೋಗಿದ್ದವರ ಮನೆಗೆ ಕನ್ನ ಹಾಕಿದ್ದ ಕಳ್ಳರು ಈಗ ಪೊಲೀಸ್ ಅತಿಥಿಗಳು
    • ಸಿಲಿಕಾನ್ ಸಿಟಿಯಲ್ಲಿ ಸಿಸಿಬಿ ಮತ್ತು ಜೀವನಭೀಮಾನಗರ ಪೊಲೀಸರಿಂದ ಬೃಹತ್ ಜಂಟಿ ಕಾರ್ಯಾಚರಣೆ!

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved