ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿರವರುಗಳಿಗೆ ಭಾತ್ಮೀಯದಾರರಿಂದ ಖಚಿತ ಮಾಹಿತಿ ಎಂದು ಮೆರೆಗೆ. ಮಾಹಿತಿಯಲ್ಲಿ ಆವಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಮರಿಯಪ್ಪ ಲೇಔಟ್, ಮನೆಯೊಂದರಲ್ಲಿ ವಾಸವಾಗಿರುವ ವಿದೇಶಿ ಮೂಲದ ವ್ಯಕ್ತಿ ಓರ್ವನು ನಿಷೇಧಿತ ಮಾದಕ ವಸ್ತುವಾದ ಎಂ ಡಿ ಎಂ ಎ ಕ್ರಿಸ್ಟಲ್ ಅನ್ನು ಆತನ ವಶ ದಲ್ಲಿಟ್ಟುಕೊಂಡು ಆತನಿಗೆ ಪರಿಚಯವಿರುವ ಗಿರಾಕಿಗಳಿಗೆ ಮಾರಾಟ ಮಾಡಿ, ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಾನೆಂದು ತಿಳಿಸಿರುತ್ತಾರೆ.
ಈ ಮಾಹಿತಿಯನ್ನಾಧರಿಸಿ, ಅದೇ ದಿನ ಸಂಜೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಏನ್ ಡಿ ಪಿ ಎಸ್ ಕಾಯ್ದಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ಅವಲಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಜಂಟಿಯಾಗಿ, ಬಾತ್ಮಿದಾರರು ತಿಳಿಸಿದ ಸ್ಥಳಕ್ಕೆ ಭೇಟಿ ನೀಡಿ, ದಾಳಿ ಮಾಡಿ, ಓರ್ವ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವಿದೇಶಿ ಪ್ರಜೆಯನ್ನು ವಿಚಾರಣೆಗೊಳಪಡಿಸಲಾಗಿ, ಆತನು 2024ನೇ ಸಾಲಿನ ಅಕ್ಟೋಬರ್ ಮಾಹೆಯಲ್ಲಿ ಟೂರಿಸ್ಟ್ ವಿಸಾದಡಿಯಲ್ಲಿ ದೆಹಲಿಗೆ ಬಂದು ಬಟ್ಟೆ ವ್ಯಾಪಾರ ಮಾಡಿಕೊಂಡಿರುತ್ತಾನೆ. 2025 ನೇ ಸಾಲಿನಲ್ಲಿ ಬೆಂಗಳೂರಿಗೆ ಬಂದು, ಅವಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ವಾಸವಾಗಿರುತ್ತಾನೆ. ಬಟ್ಟೆ ವ್ಯಾಪಾರದಲ್ಲಿ ಬರುತ್ತಿದ್ದ ಹಣವು ಆತನಿಗೆ ಸಾಲದೆ ಇದ್ದದ್ದರಿಂದ, ನಿಷೇಧಿತ ಮಾದಕ ವಸ್ತು ಆದ ಎಂ ಡಿ ಎಂ ಎ ಕ್ರಿಸ್ಟಲನ್ನು ಮಾರಾಟ ಮಾಡಿಕೊಂಡು ಹೆಚ್ಚಿನ ಹಣ ಸಂಪಾದನೆ ಮಾಡುತ್ತಿರುವುದಲ್ಲದೆ, ಭಾರತ ಸರ್ಕಾರ ನೀಡಿರುವ ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ತಿಳಿದು ಬಂದಿರುತ್ತದೆ.

ಆರೋಪಿಯ ವಶದಲ್ಲಿದ್ದ 225 ಗ್ರಾಂನಿಷೇಧಿತ ಮಾದಕ ವಸ್ತು ಎಂ ಡಿ ಎಂ ಎ ಕ್ರಿಸ್ಟಲ್ ಹಾಗೂ ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿ ಕೊಂಡಿರುತ್ತಾರೆ. ಇದರ ಮೌಲ್ಯ 40,00,000 (ನಲವತ್ತು ಲಕ್ಷ ರೂಪಾಯಿ).
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳ ಪಡಿಸಲಾಗಿ, ಆತನಿಗೆ ಪರಿಚಯವಿರುವ ವಿದೇಶದಲ್ಲಿರುವ ವ್ಯಕ್ತಿಯೋರ್ವನಿಂದ, ನಿಷೇಧಿತ ಮಾದಕ ವಸ್ತು ಎಂ ಡಿ ಎಂ ಎ ಕ್ರಿಸ್ಟಲನ್ನು ಕಡಿಮೆ ಬೆಲೆಗೆ ಖರೀದಿಸಿರುತ್ತಿರುವುದಾಗಿ ತಿಳಿಸಿರುತ್ತಾನೆ.
ಈ ಕಾರ್ಯಾಚರಣೆಯನ್ನು ಮಾನ್ಯ ಜಂಟಿ ಪೊಲೀಸ್ ಆಯುಕ್ತರು, ಅಪರಾಧ, ಬೆಂಗಳೂರು ನಗರ ಹಾಗೂ ಉಪ ಪೊಲೀಸ್ ಆಯುಕ್ತರು, ಅಪರಾಧ-2 ಬೆಂಗಳೂರು ನಗರ ಮಾರ್ಗದರ್ಶನದಲ್ಲಿ, ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿ, ಅವಲಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರುಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.
ವರದಿ
ಶಶಿಕುಮಾರ್ ವಿ









