ದಿನಾಂಕ 03-06-2025 ರಂದು ಬಕ್ರೀದ್ ಬಹಬ್ಬದ ನಿಮಿತ್ಯ ಬೀದರ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು, ಬೀದರ ಜಿಲ್ಲೆ, ರವರ ಮಾರ್ಗದರ್ಶನದಲ್ಲಿ ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಬೀದರ, ಶ್ರೀ ಶಿವನಗೌಡ ಪಾಟೀಲ್ಪೊಲೀಸ್ ಉಪಾಧೀಕ್ಷಕರು, ಬೀದರ್ ಉಪವಿಭಾಗ, ಶ್ರೀ ಶಿವಾನಂದ ಪವಾಡಶೆಟ್ಟಿ, ಪೊಲೀಸ್ ಉಪಾಧೀಕ್ಷಕರು ಭಾಲ್ಕಿ ಉಪವಿಭಾಗ ಮತ್ತು ಶ್ರೀ ಜೆ.ಎಸ್ ನ್ಯಾಮೇಗೌಡ, ಪೊಲೀಸ್ ಉಪಾಧೀಕ್ಷಕರು ಹುಮನಾಬಾದ ಉಪವಿಭಾಗ ರವರ ನೇತೃತ್ವದಲ್ಲಿ ಬೀದರ ಜಿಲ್ಲೆಯಲ್ಲಿರುವ ಮುಸ್ಲಿಂ ಹಾಗೂ ಹಿಂದೂ ಸಮುದಾಯಗಳ ಮುಖಂಡರಗಳ ಸೌಹಾರ್ದತೆ ಸಭೆಯನ್ನು ನಡೆಸಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಒಗಟ್ಟಾಗಿ ಯಾವುದೇ ರೀತಿಯ ಅಹಿತಕರ ಘಟನೆ ಯಾಗದಂತೆ ಶಾಂತತೆಯಿಂದ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಬೇಕು. 1] ಗೋವುಗಳ ಹತ್ಯೆ ಅಕ್ರಮ ಸಾಗಾಟವನ್ನು ನಿಷೇಧಿಸಲಾಗಿದೆ. 2] ಗೋಹತ್ಯೆ ನಿಷೇದ ಕಾಯ್ದೆ ಉಲಂಘಟನೆ ಮಾಡಿದರೆ ಅಂತವರ ವಿರೋಧ ಕಾನೂನು ಕ್ರಮ ಕೈಕೊಳ್ಳಲಾಗುವುದು. 3] ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್‌ಗಳು/ದ್ವೇಷ ಭಾಷಣ ಮಾಡಬಾರದು. ವಿವಾದಾತ್ಮಕ ಅಂಶಗಳು ಪೋಸ್ಟ್/ವಿಡಿಯೋ ಮಾಡಬಾರದು ಮಾಡಿದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.









