ಮಹದೇವಪುರ ಪೊಲೀಸ್ ಸರಹದ್ದಿನಲ್ಲಿರುವ ಹೆಚ್.ಪಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಫಿರಾದುದಾರರು ದಿನಾಂಕ:27/05/2024 ರಂದು ಮಹದೇವಮರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:23/05/2024 ರಂದು ಏರಾದುದಾರರು ಕೆಲಸ ಮಾಡುವ ಹೆಚ್.ಪಿ ಕಂಪನಿಯ ಹತ್ತಿರ ದ್ವಿ-ಚಕ್ರ ವಾಹನವನ್ನು ನಿಲ್ಲಿಸಿ ಲಾಕ್ ಮಾಡಿಕೊಂಡು ಹೋಗಿರುತ್ತಾರೆ. ಕೆಲಸ ಮುಗಿಸಿಕೊಂಡು ವಾಪಸ್ ಬಂದು ನೋಡಲಾಗಿ, ಪಿರಾದುದಾರರ ದ್ವಿ-ಚಕ್ರ ವಾಹನವನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಮಹದೇವಮರ ಪೊಲೀಸ್ ಠಾಣೆಯಲ್ಲಿ ದ್ವಿ-ಚಕ್ರ ವಾಹನ ಕಳವು ಪ್ರಕರಣದ ದಾಖಲಾಗಿರುತ್ತದೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡರು ಸಹ ಆರೋಪಿಯ ಬಗ್ಗೆ ಸೂಕ್ತ ಮಾಹಿತಿಯು ದೊರೆತಿರುವುದಿಲ್ಲ. ಆರೋಪಿಯ ಪತ್ತೆಗಾಗಿ ಸಿಬ್ಬಂದಿಯವರನ್ನು ನೇಮಿಸಿದ್ದು, ತನಿಖೆ ಮುಂದುವರೆದಿರುತ್ತದೆ.
https://youtu.be/1iat4E1LF6U
ದಿನಾಂಕ:20/10/2024 ರಂದು ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ಕೆ.ಆರ್.ಪರಂ ರೈಲ್ವೆ ನಿಲ್ದಾಣದ ಬಳಿ ಈ ಪ್ರಕರಣದಲ್ಲಿ ಕಳುವಾಗಿದ್ದ ದ್ವಿ-ಚಕ್ರ ವಾಹನ ಸಮೇತ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ದ್ವಿ-ಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ತಪ್‌ಪಿಕೊಂಡಿರುತ್ತಾನೆ. ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:21/10/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 7 ದಿನಗಳ ಕಾಲ ಪೊಲೀಸ್, ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಆರೋಪಿಯು ನೀಡಿದ ಮಾಹಿತಿ ಮೇರೆಗೆ ದಿನಾಂಕ:23/10/2024 ರಂದು ಮಹದೇವ ಪರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ರೈಲ್ವೆ ಸ್ಟೇಷನ್ ಡೀಜಲ್ ಶೆಡ್ ಪಕ್ಕದ ಖಾಲಿ ಜಾಗದಲ್ಲಿ, ಕಳವು ಮಾಡಿ ನಿಲ್ಲಿಸಿದ್ದ 7 ದ್ವಿ-ಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಯಿತು.

ದಿನಾಂಕ:26/10/2024 ರಂದು ಕೆ.ಆರ್.ಪುರ ರೈಲ್ವೆ ಪಾರ್ಕಿಂಗ್ ಪಕ್ಕದ ಖಾಲಿ ಜಾಗದಲ್ಲಿ ಕಳವು ಮಾಡಿ ನಿಲ್ಲಿಸಿದ್ದ 3 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು.
ಒಟ್ಟಾರೆ ಈ ಪ್ರಕರಣದ ಆರೋಪಿಯ ಬಂಧನದಿಂದ, 11 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯತೆ 8.00,000/-(ಎಂಟು ಲಕ್ಷರೂಪಾಯಿ).
ಈ ಪ್ರಕರಣದ ಆರೋಪಿಯ ಬಂಧನದಿಂದ 1) ಮಹದೇವಮರ ಮೊಠಾಣೆಯ-4ದ್ವಿ-ಚಕ್ರವಾಹನ ಕಳವು ಪ್ರಕರಣಗಳು, 2) ವೈಟ್‌ಫೀಲ್ಡ್ ಮೊ.ಠಾಣೆಯ-01ದ್ವಿ-ಚಕ್ರವಾಹನ ಕಳವು ಪ್ರಕರಣ, 3)ಮೈಕೋ ಲೇಔಟ್ ಮೊ.ಠಾಣೆಯ-01 ದ್ವಿ-ಚಕವಾಹನ ಕಳವು ಪ್ರಕರಣ 4)ಬೈಯಪ್ಪನಹಳ್ಳಿ ಮೊ.ಠಾಣೆಯ-01 ದ್ವಿ-ಚಕ್ರವಾಹನ ಕಳವು ಪ್ರಕರಣ 5) ತಮಿಳುನಾಡಿನ ತಿರುವಣ್ಣಾ ಮಲೈ ಮೊ.ಠಾಣೆಯ-01 ದ್ವಿ-ಚಕ್ರವಾಹನ ಕಳವು ಪ್ರಕರಣ, 6) ಸೂರ್ಯಸಿಟಿ ಮೊ.ಠಾಣೆಯ-01 ದ್ವಿ-ಚಕ್ರವಾಹನ ಕಳವು ಪ್ರಕರಣ, ಸೇರಿದಂತೆಒಟ್ಟು 09 ದ್ವಿ-ಚಕ್ರವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಉಳಿದ 2 ದ್ವಿ-ಚಕ್ರ ವಾಹನಗಳ ಮಾಲೀಕರು ಪತ್ತೆಯಾಗಬೇಕಾಗಿರುತ್ತದೆತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ವೈಟ್‌ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ|ಶಿವಕುಮಾರ್ ಗುಣಾರೇ, ಐಪಿಎಸ್‌ರವರ ಮಾರ್ಗದರ್ಶನದಲ್ಲಿ, ಶ್ರೀಮತಿ ರೀನಾ ಸುವರ್ಣ, ಸಹಾಯಕ ಪೊಲೀಸ್ ಆಯುಕ್ತರು ವೈಟ್‌ಫೀಲ್ಡ್ ಉಪ ವಿಭಾಗರವರ ನೇತೃತ್ವದಲ್ಲಿ, ಮಹದೇವಪುರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಪಕ ಶ್ರೀ.ಜಿ.ಪ್ರವೀಣ್‌ಬಾಬು ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









