Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Karnataka News

ತುಮಕೂರಿನಲ್ಲಿ ವಿಮಾನ ನಿಲ್ದಾಣ ಮಾಡಿದರೆ ಅನುಕೂಲ-ಗೃಹ ಸಚಿವ ಜಿ.ಪರಮೇಶ್ವರ ಹೇಳಿಕೆ

CREDOPRESS MEDIA PVT LTD by CREDOPRESS MEDIA PVT LTD
December 16, 2024
in Karnataka News,Latest News
0
ತುಮಕೂರಿನಲ್ಲಿ ವಿಮಾನ ನಿಲ್ದಾಣ ಮಾಡಿದರೆ ಅನುಕೂಲ-ಗೃಹ ಸಚಿವ ಜಿ.ಪರಮೇಶ್ವರ ಹೇಳಿಕೆ
0
SHARES
18
VIEWS
Share on FacebookShare on Twitter

ಬೆಂಗಳೂರಿನ ಭಾಗವಾಗಿ ತುಮಕೂರು ಬೆಳೆಯುತ್ತಿದ್ದು, ವಿಮಾನ ನಿಲ್ದಾಣ‌ ಮಾಡಿದರೆ ಅನುಕೂಲವಾಗಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರಅವರು ಹೇಳಿದರು.

ಸದಾಶಿವನಗರದ‌ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ಸಾವಿರ ಎಕರೆ ಜಾಗದಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ತುಮಕೂರಿನಲ್ಲಿ ನಿರ್ಮಾಣವಾಗುತ್ತಿದೆ. ಮೊದಲ ಮತ್ತು ಎರಡನೇ ಹಂತದ ಕಾಮಗಾರಿ ಮುಗಿದಿದೆ. 150 ಕೈಗಾರಿಕೆಗಳು ಹಾಗೂ ಜಪಾನ್ ಟೌನ್‌ಶಿಪ್ ಬರುತ್ತಿದೆ. ಎಚ್‌ಎಎಲ್ ಹೆಲಿಕ್ಯಾಪ್ಟರ್ ಫ್ಯಾಕ್ಟರಿ ಕೆಲಸ ಆರಂಭಿಸಿದೆ. ಇನ್ನೂ ಹಲವು ದೊಡ್ಡ ಕೈಗಾರಿಕೆಗಲಕು ಬರಲಿವೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣ ಮಾಡಿದರೆ ಉತ್ತಮ ಎಂಬುದನ್ನು ತಿಳಿಸಲಾಗಿದೆ‌ ಎಂದರು.

ಮುಂದಿನ ದಿನಗಳಲ್ಲಿ ತುಮಕೂರು ಅಭಿವೃದ್ಧಿಗೆ ಬೇರೆಬೇರೆ ಹೊಸ ಯೋಜನೆಗಳನ್ನು ಇಟ್ಟುಕೊಳ್ಳಲಾಗಿದೆ. ತುಮಕೂರು ಬೆಂಗಳೂರಿನ ಒಂದು ಭಾಗವಾಗಿ ಬೆಳೆಯುತ್ತಿದ್ದು ಗ್ರೇಟರ್ ಬೆಂಗಳೂರು ಎಂದು ಪರಿಗಣಿಸುವಂತೆ ಕೇಳಿಕೊಳ್ಳಲಾಗಿದೆ.‌ ನೆಲಮಂಗಲ, ದಾಬಸ್‌ಪೇಟೆವರೆಗೆ ಬೆಂಗಳೂರು ಬೆಳೆದಿದೆ. ತುಮಕೂರುವರೆಗೆ ಮೆಟ್ರೋ ರೈಲು ವಿಸ್ತರಣೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ.‌ ತುಮಕೂರನ್ನು ಗ್ರೇಟರ್ ಬೆಂಗಳೂರು ಎಂದು ಕರೆಯಬಹುದು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು‌ ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಹೋದರನ ವಿರುದ್ಧದ‌ ಪ್ರಕರಣದ‌ ಕುರಿತು ಪ್ರತಿಕ್ರಿಯಿಸಿ, ದೂರು ಬಂದಾಗ ಗಂಭೀರವಾಗಿ ತೆಗೆದುಕೊಳ್ಳಬೇಕಲ್ಲವೇ? ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಗೋಪಾಲ್ ಜೋಷಿ ಎಂಬುವರು ತಲೆಮರೆಸಿಕೊಂಡಿದ್ದು ತನಿಖೆ ಮುಂದುವರಿದಿದೆ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಪ್ರಹ್ಲಾದ್ ಜೋಷಿ ಅವರ ಪಾತ್ರ ಇರುವುದು ನನಗೆ ಗೊತ್ತಿಲ್ಲ. ಬಂಧಿತರನ್ನು ವಿಚಾರಣೆ ನಡೆಸಿ, ಹೇಳಿಕೆ ಪಡೆದಾಗ ಯಾರಿದ್ದಾರೆ ಎಂಬುದು ಗೊತ್ತಾಗುತ್ತದೆ. ತನಿಖೆಗೆ ಮೊದಲು ಹೇಳುವುದು ಸರಿಯಲ್ಲ. ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ. ವರದಿ ಬಾರದೆ ಏನು ಹೇಳಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಡಿಜಿ ಮಾಲಿನಿ ಕೃಷ್ಣಮೂರ್ತಿ ಅವರು ಭೇಟಿ ನೀಡಿದ್ದಾರೆ. ಇವತ್ತು ವರದಿ ನೀಡಲಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆಂತರಿಕವಾಗಿ ಗಂಭೀರ ವಿಚಾರ ಆಗಿರುವುದರಿಂದ ಭೇಟಿ ನೀಡಿ ವರದಿ ನೀಡುವಂತೆ‌ ರಾಜ್ಯ ಬಂಧಿಖಾನೆ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದರು.

ಜಾತಿಗಣತಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ ಅವರು, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರನ್ನ ಯಾವ ವಿಚಾರಕ್ಕೆ ಭೇಟಿ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸರ್ಕಾರವು 160 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿ ಸಮೀಕ್ಷೆ ನಡೆಸಿದೆ. ಅಷ್ಟೊಂದು ಹಣ ಖರ್ಚು ಮಾಡಿದ ಮೇಲೆ ಜನಗಳಿಗೆ ಗೊತ್ತಾಗಬೇಕಲ್ಲವೇ? ಮುಂದೆ ಏನು ಮಾಡುತ್ತೇವೆ ಎಂಬುದು ಎರಡನೇ ಪ್ರಶ್ನೆ. ಯಾವ ಸಮುದಾಯಗಳು ಎಷ್ಟೆಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ಜನಸಮುದಾಯಕ್ಕೆ ತಿಳಿಸುವ ವರದಿಯನ್ನು ಸಚಿವ ಸಂಪುಟದ ಮುಂದೆ ತರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ‌. ಯಾವುದೇ ವಿಚಾರವನ್ನು ನೂರಕ್ಕೆ ನೂರರಷ್ಟು ಜನ ಒಪ್ಪಿಕೊಳ್ಳುವುದಿಲ್ಲ. ಪರ-ವಿರೋಧ ಇದ್ದೇ ಇರುತ್ತಾರೆ ಎಂದು ಹೇಳಿದರು.

ಪೊಲೀಸ್ ದಂಪತಿ ವರ್ಗಾವಣೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ನೂರಕ್ಕು ಹೆಚ್ಚು ಪೊಲೀಸ್ ದಂಪತಿ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಕೆಲವರಿಗೆ ತೊಂದರೆಯಾದಾಗ ಬಂದು ನನಗೆ ಮನವಿ ಸಲ್ಲಿಸುತ್ತಾರೆ. ಅದನ್ನು ಪರಿಶೀಲಿಸಿ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

    Tags: Dr G ParameshwaraHome Minister of KarnatakaKarnataka State PoliceNamma PoliceNamma Police NewsPolice News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು
    Bengaluru City Police

    ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು

    July 28, 2026
    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    Bengaluru City Police

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    July 24, 2026
    ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ
    Bengaluru District Police

    ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ

    July 23, 2026
    Next Post
    ಬೀದರ ಜಿಲ್ಲಾ ಪೊಲೀಸರಿಂದ ಕವಾಯತು

    ಬೀದರ ಜಿಲ್ಲಾ ಪೊಲೀಸರಿಂದ ಕವಾಯತು

    ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಾಚರಣೆ, ವಿವಿಧ ವಿದೇಶಗಳಿಂದ ಇಂಡಿಯನ್ ಪೋಸ್ಟ್ ಮುಖಾಂತರ ತರಿಸಿಕೊಂಡಿದ್ದ 21,17,34,000/- ಕೋಟಿ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳ ವಶ.

    ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಾಚರಣೆ, ವಿವಿಧ ವಿದೇಶಗಳಿಂದ ಇಂಡಿಯನ್ ಪೋಸ್ಟ್ ಮುಖಾಂತರ ತರಿಸಿಕೊಂಡಿದ್ದ 21,17,34,000/- ಕೋಟಿ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳ ವಶ.

    ಎರಡು ಕಳ್ಳತನ ಪ್ರಕರಣಗಳಲ್ಲಿ ಆರೋಪಿ ಕರ್ನಾಟಕದ ವ್ಯಕ್ತಿ ಬಂಧನ; ಕೃಷ್ಣಗಿರಿಯಲ್ಲಿ 5 ಲಕ್ಷ ರೂಪಾಯಿ ನಗದು, ಚಿನ್ನಾಭರಣ ವಶ

    ಎರಡು ಕಳ್ಳತನ ಪ್ರಕರಣಗಳಲ್ಲಿ ಆರೋಪಿ ಕರ್ನಾಟಕದ ವ್ಯಕ್ತಿ ಬಂಧನ; ಕೃಷ್ಣಗಿರಿಯಲ್ಲಿ 5 ಲಕ್ಷ ರೂಪಾಯಿ ನಗದು, ಚಿನ್ನಾಭರಣ ವಶ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    Amruthalli Police B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Cyber Crime Davangere police drugs news Electronic city Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Renukaswamy Sadashivnagar Police SG Palya Police Siddapura Police Siddapura Police Station Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು
    • ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    • ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved