ಗ್ರಾಮಗಳಲ್ಲಿ ಅಪರಿಚಿತರ ಓಡಾಟಗಳ ಮೇಲೆ ನಿಗಾ ವಹಿಸಲು ಮತ್ತು ಅಪರಾಧಗಳ ತಡೆಗಟ್ಟುವಲ್ಲಿ, ಅಪರಾಧ ತನಿಖೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳ ಪಾತ್ರ ಅತೀ ಮಹತ್ವದಾಗಿದ್ದು, ಈ ನಿಟ್ಟಿನಲ್ಲಿ ಚಿಂತಾಕಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂತಕಿ, ಮೇಡಪಳ್ಳಿ, ಗುಡಪಳ್ಳಿ, ಗಾಂಧಿನಗರ ತಾಂಡ, ಉಜನಿ, ಏಕಲಾರ, ಬರದಾಪುರ, ಕೊಳ್ಳುರ ಗ್ರಾಮಗಳ ಬೀಟ್ ಗಳಲ್ಲಿ ಭಾಲ್ಕಿ ಉಪ-ವಿಭಾಗದ ಡಿ.ಎಸ್.ಪಿ ಶ್ರೀ, ಶಿವಾನಂದ ಪವಾಡಶೆಟ್ಟಿ, ರವರ ನೇತೃತ್ವದಲ್ಲಿ ಶ್ರೀ, ರಘುವೀರಸಿಂಗ್ ಠಾಕೂರ, ಸಿ.ಪಿ.ಐ, ಔರಾದ-ಬಿ, ಶ್ರೀ, ಸಿದ್ದಲಿಂಗ, ಪಿ.ಎಸ್.ಐ, ಸಿಬ್ಬಂದಿಯವರಾದ ಶ್ರೀ, ಅಸ್ಲಂ, ಕು. ಲಕ್ಷ್ಮಿ, ಶ್ರೀ, ಗೋರಖನಾಥ್, ಶ್ರೀ, ಸಂತೋಷ್, ಕು. ಲಿಂಗೇಶ್ವರಿ, ಶ್ರೀ, ಓಂಕಾರ, ಶ್ರೀಮತಿ ಶೋಭಾರವರು ತಮ್ಮ ತಮ್ಮ ಬೀಟಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರೊಂದಿಗೆ, ಬೀಟ್ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಗ್ರಾಮಗಳಲ್ಲಿ ಸಿ.ಸಿ.ಟಿವಿಅಳವಡಿಸಿದಲ್ಲಿ ಅದರ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿ, ಗ್ರಾಮಗಳಲ್ಲಿ ಅಳವಡಿಸಲು ಪ್ರೇರಣೆ ನೀಡಿ, ಗ್ರಾಮಗಳ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿಸಿರುತ್ತಾರೆ.
ಪಬ್ಲಿಕ್ ಸೇಫ್ಟಿ ಆಕ್ಟ್ ನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಲು ಸಹಕರಿಸಿದ ಬೀಟ್ ಸದಸ್ಯ, ಗ್ರಾಮ ಪಂಚಾಯತ ಸದಸ್ಯರು, ಗ್ರಾಮ ಪಂಚಾಯತ್ ಅಧಿಕಾರಿ ಸಿಬ್ಬಂದಿಯವರಿಗೆ ಮತ್ತು ಅಳವಡಿಸಲು ಪ್ರೇರಣೆ ನೀಡಿ ಉತ್ತಮ ಕೆಲಸ ಮಾಡಿದ ಚಿಂತಾಕಿ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಅಪರಾಧ ತಡೆಯುವುದು ಪೊಲೀಸ್ ಇಲಾಖೆ ಮತ್ತು ಸಮಾಜದ ಒಂದೇ ಉದ್ದೇಶವಾಗಿದ್ದರಿಂದ ಜಿಲ್ಲೆಯ ನಾಗರಿಕರೇ ತಾವುಗಳು ತಮ್ಮ ಮನೆ/ಓಣಿ/ಅಂಗಡಿ/ಗ್ರಾಮಗಳಲ್ಲಿ ಸಿ.ಸಿ.ಟಿ.ವಿ ಅಳವಡಿಸಿಕೊಂಡಲ್ಲಿ ಅಪರಾಧಗಳನ್ನು ತಡೆಯುವಲ್ಲಿ ಸಹಕರಿಸ ಬಹುದಾಗಿದ್ದು, ಇದರಿಂದ ಜಿಲ್ಲೆಯನ್ನು ಅಪರಾಧ ಮುಕ್ತ ಜಿಲ್ಲೆಯನ್ನಾಗಿಸಬಹುದಾಗಿದೆ.
ನಾಗರಿಕರ ಸುರಕ್ಷತೆಯೇ ನಮ್ಮ ಪ್ರಥಮ ಆಧ್ಯತೆಯಾಗಿದ್ದು, ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.








