ಬಸವಕಲ್ಯಾಣ ನಗರದಲ್ಲಿ ಸಂಚಾರಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ, ಸಿದ್ದೇಶ್ವರ ಮತ್ತು ಸಿಬ್ಬಂದಿ ಮಿಥುನ್ ರವರು “Safe driving and defensive driving course” ತರಬೇತಿಯನ್ನು ಪಡೆದಿದ್ದು, ತರಬೇತಿಯ ಉದ್ದೇಶ Training of Trainers ಆಗಿದ್ದು, ಸಾರ್ವಜನಿಕರಲ್ಲಿ ( ಲಘು/ಭಾರಿ/ಕೆ.ಎಸ್.ಆರ್.ಟಿ.ಸಿ/ ಬಸ್ಸ ಚಾಲಕರಿಗೆ/ಆಟೋ/ದ್ವಿಚಕ್ರ ವಾಹನ ಸವಾರ) ರಿಗೆ 2-3 ಗಂಟೆಗಳ ಕಾಲ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಸವಕಲ್ಯಾಣದ ಗುಡ್ಸ್ ವಾಹನ ಮತ್ತು ಗುಡ್ಸ್ ಆಟೋಗಳ ಚಾಲಕರಿಗೆ ಅರಿವು ಮೂಡಿಸಿರುತ್ತಾರೆ.
ಬೀದರ್ ಜಿಲ್ಲಾ ಪೊಲೀಸರು ಜಿಲ್ಲೆಯಲ್ಲಿ ಅಪಘಾತದ ಪ್ರಮಾಣ ಇಳಿಸುವ ನಿಟ್ಟಿನಲ್ಲಿ ಸದಾ ಪ್ರಯತ್ನಿಸುತ್ತಿದ್ದು, ಬಸವಕಲ್ಯಾಣ ಸಂಚಾರಿ ಪೊಲೀಸ್ ರ ಪ್ರಯತ್ನವು ಪ್ರಸಂಶನಿಯವಾಗಿದ್ದು, ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಸಹಕರಿಸಲು ಕೋರಲಾಗಿದೆ.









