ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ” ಜಿಲ್ಲೆಯನ್ನು ಶಾಂತಯುತವಾಗಿ ಇಡಲು ಕಾನೂನು ಸೂ ವ್ಯವಸ್ಥೆ ಕಾಪಾಡುವುದು ಅತೀ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕಳೆದ ಒಂದು ವಾರದಲ್ಲಿ ಕಮಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ತೊರಣಾ ಗ್ರಾಮದಲ್ಲಿ ಜರುಗಿದ ಸತ್ಯಾಗ್ರಹ, ಬೀದರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ “ಶಬೆ ಬಾರಾತ” ಜಗನೆಕಿ ರಾತ್, ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 23 ನೇ ವಚನ ವಿಜಯೋತ್ಸವದ ಮೆರವಣಿಗೆ, ಬಸವಕಲ್ಯಾಣ ನಗರದ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣಾ ಬ/ಬ, ಕುಶನೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರೀ ಚನ್ನಬಸವರ ಮೂರ್ತಿ ಅನಾವರಣ ಬ/ಬ, ಔರಾದ-ಬಿ ಪಟ್ಟಣದಲ್ಲಿ ಜೈ ಸೇವಾಲಾಲ ಜಯಂತಿ ಬ/ಬ, ಮತ್ತು ಬೀದರ ಜಿಲ್ಲಾದಾದ್ಯಂತ ರಾಜಕೀಯ ಪ್ರತಿ ಭಟನಾ ಬ/ಬ, ಸಾಂಸ್ಕೃತಿಕ ಕಾರ್ಯಕ್ರಮ, ಜಯಂತಿ ಬ/ಬಗಳನ್ನು ಹಾಗೂ ಜಿಲ್ಲೆಯಲ್ಲಿ ಗಣ್ಯರ ಮತ್ತು ಅತೀ ಗಣ್ಯರ ಕಾರ್ಯಕ್ರಮಗಳು ಮತ್ತು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಕಾನೂನು ಸುವ್ಯವಸ್ಥೆಗೆ ಯಶಸ್ವಿಯಾಗಿ ಜಿಲ್ಲೆಯ ಪೊಲೀಸರು ನಿರ್ವಹಿಸಿರುತ್ತಾರೆ.

ಜಿಲ್ಲೆಯ ಮೂರು ಉಪ-ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯವರು ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕಾನೂನು ಸೂ ವ್ಯವಸ್ಥೆ ಕಾಡುವಲ್ಲಿ ಅಚ್ಚು ಕಟ್ಟಾಗಿ ಬ/ಬ ಕರ್ತವ್ಯ ನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲಾ ಪೊಲೀಸ್ ಜಿಲ್ಲೆಯಲ್ಲಿ ಶಾಂತಿ ಸೂ ವ್ಯವಸ್ಥೆ ಕಾಪಾಡುವುದು ಸದಾ ಕಾರ್ಯಪ್ರವರ್ತಗಾಗಿದ್ದು, ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.








