ದಿನಾಂಕ:06/12/2024 ರಂದು ಬಿ.ಟಿ.ಎಂ ಲೇಔಟ್‌ನ 2ನೇ ಹಂತದಲ್ಲಿವಾಸವಿರುವ ಪಿರಾದುದಾರರು. ಆಗ್ನೆಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಒಂದು ಸಾಫ್ಟ್‌ವೇರ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಪಿರಾದುದಾರರಿಗೆ ಅವರ ಕಂಪನಿಯ ಲೋಗೊ ಹಾಗೂ ಎಂ.ಡಿ ಪೋಟೊವನ್ನು ವ್ಯಾಟ್ಸ್ ಆಪ್ ಡಿಪಿಯಲ್ಲಿ ಹಾಕಿಕೊಂಡಿರುವ ವ್ಯಾಟ್ಸ್ ಆಫ್ ನಂಬರ್‌ನಿಂದ ಕಂಪನಿಯ ಪ್ರೋಜೆಕ್ಟ್ ಆಡ್ವಾನ್ಸ್ ಸೆಕ್ಯೂರಿಟಿ ಡೆಪಾಜಿಟ್‌ಗಾಗಿ 56,00,100/- ಹಣವನ್ನು ವರ್ಗಾವಣೆ ಮಾಡಬೇಕಾಗುತ್ತದೆ ಎಂದು ವ್ಯಾಟ್ಸ್ ಆಫ್ ಮೇಸೆಜ್ ಮೂಲಕ ಸಂದೇಶವೊಂದು ಬಂದಿರುತ್ತದೆ. ಇದನ್ನು ನಂಬಿದ ಪಿರಾದುದಾರರು, ಹಣವನ್ನು ಕಂಪನಿಯ ಕರೆಂಟ್ ಅಕೌಂಟ್‌ನಿಂದ ವ್ಯಾಟ್ಸ್ ಆಫ್ ಮೇಸೆಜ್‌ನಲ್ಲಿ ಸೂಚಿಸಿರುವ ಖಾತೆಗೆ ಹಣವನ್ನು ಜಮೆ ಮಾಡಿರುತ್ತಾರೆ. ತದನಂತರ ಪಿರಾದುದಾರರು ವಂಚನೆಗೊಳಗಾಗಿರುವ ಬಗ್ಗೆ ತಿಳಿದು, ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಆಗ್ನೆಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಸಿ.ಇ.ಎನ್ ಪೊಲೀಸರು ಆರೋಪಿತರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಕಲೆ ಹಾಕಿದ್ದು, ಆ ಬ್ಯಾಂಕ್ ಖಾತೆಯಿಂದ ಹೈದರಬಾದ್ ಮೂಲದ ಆರೋಪಿಯ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದ್ದು, ಆ ವ್ಯಕ್ತಿಯನ್ನು ದಿನಾಂಕ:08/12/2024 ರಂದು ಹೈದರಬಾದ್‌ನ ಹಯಾತ್ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ, ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೋಪ್ಪಿಕೊಂಡಿರುತ್ತಾನೆ. ಹಾಗೂ ಇತರೆ ಐವರು ಸಹಚರರಿಗೆ ಹಣವನ್ನು ವರ್ಗಾಯಿಸಿರುವ ಬಗ್ಗೆ ತಿಳಿಸಿದ್ದು, ವರ್ಗಾವಣೆ ಮಾಡಿದ ಹಣವನ್ನು ವಿತ್ ಡ್ರಾ ಮಾಡಿಕೊಟ್ಟರೆ ಕಮಿಷನ್ ನೀಡುವುದಾಗಿ ತಿಳಿಸಿರುತ್ತಾನೆ. ಆತನು ನೀಡಿದ ಮಾಹಿತಿಯ ಮೇರೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನುಳಿದ 05 ಆರೋಪಿಗಳನ್ನು ಹೈದರಬಾದ್ ನಾಸಿಂಗೀ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅದೇ ದಿನ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಐವರು ಆರೋಪಿಗಳನ್ನು ವಿಚಾರಿಸಲಾಗಿ, ಬಿನಾನ್ಸ್ ಎಂಬ ಅಪ್ಲಿಕೇಷನ್‌ನಲ್ಲಿ ಪರಿಚಯರಾದ ಅಪರಿಚಿತ ವ್ಯಕ್ತಿಯು, ನಾವು ನೀಡಿದ ಬ್ಯಾಂಕ್ ಖಾತೆಗಳಿಗೆ ಆರೋಪಿಗಳು ಹಣವನ್ನು ಹಾಕಿರುತ್ತಾರೆ. ಸದರಿ ಹಣವನ್ನು ವಿತ್ ಡ್ರಾ ಮಾಡಿ, ಯು.ಎಸ್.ಡಿ.ಟಿ ಅನ್ನು ಖರೀದಿ ಮಾಡಿ, ಅಧಿಕ ಬೆಲೆಗೆ ಅದೇ ಅಪರಿಚಿತ ವ್ಯಕ್ತಿಗೆ U-homeEX ಅಪ್ಲಿಕೇಷನ್ ಮೂಲಕ ಮಾರಾಟ ಮಾಡಿರುತ್ತೇವೆಂದು ತಿಳಿಸಿರುತ್ತಾರೆ.

ದಿನಾಂಕ:10/12/2024 ರಂದು ಆರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮೂವರು ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಒಳಪಡಿಸಿರುತ್ತೆ. ಇನ್ನುಳಿದ ಮೂವರು ಆರೋಪಿಗಳಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೊಳಪಡಿಸಿರುತ್ತೆ.
ವಶಕ್ಕೆ ಪಡೆದ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಅವರುಗಳಿಂದ ಕೃತ್ಯಕ್ಕೆ ಉಪಯೋಗಿಸಿದ 1-ಮೊಬೈಲ್ ಫೋನ್ ಹಾಗೂ ವಂಚಿಸಿದ್ದ ಹಣದಿಂದ ಖರೀದಿ ಮಾಡಿದ್ದ I-Audi-A4 ಕಾರ್ ಮತ್ತು ನಗದು 58,600/– ವಶಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಲೀನ್ ಮಾಡಿ, ಅದರಲ್ಲಿದ್ದದ 5,00,000/- ಲಕ್ಷ ಹಣವನ್ನು ಪಿರಾದುದಾರರ ಕಂಪನಿಯ ಖಾತೆಗೆ ಹಿಂದಿರುಗಿಸಲಾಗಿದೆ.
ದಿನಾಂಕ:16/12/2024 ರಂದು ಪೊಲೀಸ್ ಅಭಿರಕ್ಷೆಗೆ ಪಡೆದಿದ್ದ ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೊಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ.ಸಾರಾ ಫಾತಿಮಾ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಆಗ್ನೆಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಾದ ಡಾ:ಗೋವರ್ಧನ್ ಗೋಪಾಲ್ ರವರು ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಮತಿ.ಈಶ್ವರಿ ಪಿ.ಎನ್ ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.








