ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೈಬರ್ ಅಪರಾಧ ಕೃತ್ಯಕ್ಕಾಗಿ ಖಾಸಗಿ ಕಂಪನಿಯ ಹೆಸರಿನ ನಕಲಿ ಬಿಪಿಓ ಕಂಪನಿ ಯನ್ನು ತೆರೆದು ಸುಮಾರು 20-25 ಯುವಕರು ಮತ್ತು ಯುವತಿಯರನ್ನು ಆನ್ಲೈನ್ ಮೂಲಕ ಕೆಲಸಕ್ಕೆ ಎಂದು ಇಟ್ಟುಕೊಂಡು ಅವರುಗಳಿಗೆ ಆನ್ಲೈನ್ ಮೂಲಕ ಜನರಿಗೆ ವಂಚಿಸುವ ಸೈಬರ್ ವಂಚನೆಯ ತರಬೇತಿಯನ್ನು ನೀಡಿ ಅವರಿಗೆ ಅಪರಾಧಗಳ ಸಂಚು ನಡೆಸಿ ಆನ್ಲೈನ್ ಮುಖಾಂತರ ಅಪರಿಚಿತ ಜನರ ಮಾಹಿತಿ ಸಂಗ್ರಹಿಸಿ ಅವರುಗಳನ್ನು ಫೋನ್ ಮುಖಾಂತರ ಸಂಪರ್ಕಿಸಿ ಅವರಿಗೆ ಮಾದಕ ವಸ್ತುಗಳ ಕಾಯ್ದೆ ಅಪರಾಧ ಮಾಡಿರುವ ಬಗ್ಗೆ ಮತ್ತು ಮನಿ ಲ್ಯಾಂಡ್ ರಿಂಗ್ ವಂಚನೆ ಮಾಡಿರುವ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿ ತನಿಕಾ ಸಂಸ್ಥೆ ಅಥವಾ ಪೊಲೀಸ್ ಏಜೆನ್ಸಿ ರವರ ಎಂದು ಹೇಳಿಕೊಂಡು ಅಮಾಯಕರಿಗೆ ಯಾಮಾರಿಸುತ್ತಿದ್ದವರನ್ನು ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ಯವರು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಎಚ್ಎಸ್ಆರ್ ಲೇಔಟ್ ಪೊಲೀಸ್ ಮತ್ತು ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ತನಿಖೆಯನ್ನು ಮುಂದುವರಿಸಿ ಸೈಬರ್ ಅಪರಾಧಗಳನ್ನು ಎಸಗುತ್ತಿರುವವರ ವಿರುದ್ಧ ದಾಳಿ ಮಾಡಿ ಯುಎಸ್ಎ ಕೆನಡಾ ಮತ್ತು ಇತರೆ ದೇಶಗಳಿಗೆ ಆನ್ಲೈನ್ ಮಾಹಿತಿ ಸೇವೆ ಒದಗಿಸುವ ಕಾಲ್ ಸೆಂಟರ್ ಗಳಲ್ಲಿ ಕೆಲಸ ಮತ್ತು ವಸತಿ ಸೌಲಭ್ಯ ಒದಗಿಸುವ ಆಮಿಷವಡ್ಡಿ ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಕರೆಸಿಕೊಂಡು ಕಂಪನಿಯು ನೀಡಿದ ಲೈವ್ ಸರ್ವರ್ ಸಾಫ್ಟ್ವೇರ್ನಲ್ಲಿ ವ್ಯವಹರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿರುತ್ತಾರೆ.

ಕೃತಕ್ಕೆ ಬಳಕೆ ಮಾಡುತ್ತಿದ್ದ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರದ ಎಂಟು, ಮೇಘಾಲಯದ ನಾಲ್ಕು, ಒರಿಸ್ಸಾ ,ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ಮೂಲದ ನಾಲ್ಕು ಆರೋಪಿಗಳು ಸೇರಿದಂತೆ ಒಟ್ಟು 16 ಆರೋಪಿತರನ್ನು ಬಂಧಿಸಿರುತ್ತಾರೆ.
ಈ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಡೀಸಿಪಿ ಸಾರಾ ಫಾತಿಮಾ, ಐಪಿಎಸ್,ರವರ ಮಾರ್ಗದರ್ಶನದಲ್ಲಿ ಆಗ್ನೇ ವಿಭಾಗದ ಸಿಇಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರದ ಗೋವರ್ಧನ್ ಗೋಪಾಲ್, ರವರ ನೇತೃತ್ವದಲ್ಲಿ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್, ಹರೀಶ್ ಮತ್ತು ಸಿಇಎನ್ ಪೊಲೀಸ್ ಠಾಣೆಯ ಈಶ್ವರಿ ಪಿಎನ್, ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಎಚ್ಎಸ್ಆರ್ ಮತ್ತು ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









