‘ಪೂಜೆ ನೆಪದಲ್ಲಿ ಹಣದ ಮಳೆ’ ಸುರಿಸುವುದಾಗಿ ಸಾರ್ವಜನಿಕರಿಗೆ ನಂಬಿಸಿ ವಂಚಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಹಲಸೂರು ಗೇಟ್ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಒಟ್ಟು ಹತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.”
“ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂಪಾಯಿ ಮುಖಬೆಲೆಯ ನೋಟುಗಳ ಸರಣಿ ಸಂಖ್ಯೆಗಳನ್ನು ತಿದ್ದಿ ಆರ್.ಬಿ.ಐ.ಗೆ ಜಮಾ ಮಾಡುವ ಮೂಲಕ ಈ ವಂಚನೆ ನಡೆಸಲಾಗುತ್ತಿತ್ತು. ಆರೋಪಿಗಳು, ‘ಪೂಜೆ ಮಾಡಿಸಿದರೆ ನೀವು ನೀಡುವ ಹಣಕ್ಕೆ ನೂರು ಪಟ್ಟು ಹೆಚ್ಚಿನ ಹಣದ ಮಳೆ ಸುರಿಸುತ್ತೇವೆ’ ಎಂದು ಜನರಿಗೆ ಆಮಿಷವೊಡ್ಡುತ್ತಿದ್ದರು.”

“ಪೊಲೀಸರ ಕಾರ್ಯಾಚರಣೆಯಲ್ಲಿ, ತಿದ್ದುಪಡಿ ಮಾಡಿದ 2,000 ರೂಪಾಯಿ ಮುಖಬೆಲೆಯ ಒಟ್ಟು 18 ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ನೋಟುಗಳ ಸರಣಿ ಸಂಖ್ಯೆ ತಿದ್ದಲು ಬಳಸುತ್ತಿದ್ದ ಪರಿಕರಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.”
“ಸದ್ಯ ನ್ಯಾಯಾಲಯವು ಬಂಧಿತ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಓರ್ವ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.”









