ಕೊತ್ತನೂರು ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಯವರ ಓರ್ವ ವಿದೇಶಿ ವ್ಯಕ್ತಿಯ ಬಂಧನದಿಂದ ಯಶಸ್ವಿ ಕಾರ್ಯಾಚರಣೆ
ಖಚಿತ ಮಾಹಿತಿ ಮೇರೆಗೆ ಪೂರ್ವಾಂಕದ ಜೋಡಿ ರಸ್ತೆಯಲ್ಲಿ ಒಬ್ಬ ವಿದೇಶಿ ವ್ಯಕ್ತಿಯು ಒಂದು ಕಾರಿನಲ್ಲಿ ನಿಷೇಧಿತ ಮಾದಕ ವಸ್ತುವಾದ MDMA ಯನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿಯುತ್ತದೆ
ಮಾಹಿತಿ ಆಧಾರದ ಮೇರೆಗೆ ದಾಳಿ ಮಾಡಿ ಓರ್ವ ವಿದೇಶಿ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವ್ಯಕ್ತಿಯಿಂದ 416 ಗ್ರಾಂ METHAMPHETAMINE/MDMA ಮತ್ತು 15 ಸಾವಿರ ನಗದು, 20 ಕಾಲಿ ಇರುವ ಜಿಪ್ ಲಾಕ್ ಕವರ್, ಒಂದು ತೂಕದ ಯಂತ್ರ, ಕೃತಕ್ಕೆ ಬಳಸಿದ ಹೋಂಡಾ ಸಿವಿಕ್ ಕಾರನ್ನು ಪೊಲೀಸರು ವಶಪಡಿಸಿಕೊಂಡರು
ಸುಧೀರ್ಘವಾಗಿ ವಿಚಾರಣೆಗೊಳಪಡಿಸಿದ ಆರೋಪಿತನನ್ನು ವಿಚಾರಿಸಿದಾಗ ಕಡಿಮೆ ಬೆಲೆಗೆ ಅಪರಿಚಿತ ವಿದೇಶಿ ಪ್ರಜೆಯಿಂದ MDMA ಎನ್ನು ಪಡೆದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾಗಿ ಆರೋಪಿ ತಿಳಿಸಿರುತ್ತಾನೆ
ಈ ಪ್ರಕರಣದ ಆರೋಪಿಯ ಬಂದನದಿಂದ ಕೃತ್ಯಕ್ಕೆ ಬಳಸಿದ ಒಂದು ಕಾರು ಒಂದು ದ್ವಿಚಕ್ರ ವಾಹನ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ
ಈ ಕಾರ್ಯಚರಣೆಯನ್ನು ಈಶಾನ್ಯ ವಿಭಾಗದ ಉಪ ಪೋಲೀಸ್ ಸಯುಕ್ತರಾದ ವಿ ಜೆ ಸಜಿತ್ ಐಪಿಎಸ್,ರವರ ಹಾಗೂ ಸಹಾಯಕ ಪೊಲೀಸ್ ಆಯುಕ್ತರು ಸಂಪಿಗೆಹಳ್ಳಿ ಉಪ ವಿಭಾಗ ಎಮ್ ಮುರುಗೇಂದ್ರಯ್ಯ ರವರ, ಮಾರ್ಗದರ್ಶನದಲ್ಲಿ ಕೊತ್ತನೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಂಎಲ್ ಚೇತನ್ ಕುಮಾರ್, ಹಾಗೂ ಸಿಬ್ಬಂದಿರವರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









