ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗೆ ಕನ್ನ ಹಾಕುತ್ತಿದ್ದ ಮನೆ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂದಿತನಿಂದ 6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ವರ್ತೂರು ಹೋಬಳಿ ಸೋರ ಹುಣಸೆ ಗ್ರಾಮದ ಶ್ರೀನಿವಾಸ್ (24) ಬಂಧಿತ ಆರೋಪಿ.

ತರಕಾರಿ ವ್ಯಾಪಾರ ಮಾಡುತ್ತಿದ್ದ ಈತ ರೂಢಿಗತ ಕಳ್ಳತನ ಆರೋಪಿಯಾಗಿದ್ದು ಈತನ ಮೇಲೆ ಬೆಂಗಳೂರು ನಗರದ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ 1, ಕೋಲಾರ ಜಿಲ್ಲೆಯ ಮಾಲೂರು ಪೊಲೀಸ್ ಠಾಣೆಯಲ್ಲಿ 1, ಹಾಗೂ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆಯಲ್ಲಿ 3, ತಿರುಮಲ ಶೆಟ್ಟಿ ಹಳ್ಳಿ ಪೊಲೀಸ್ ಠಾಣೆಯಲ್ಲಿ 2 ಸೇರಿದಂತೆ ಒಟ್ಟು ಏಳು ಕಳ್ಳತನ ಪ್ರಕರಣಗಳಿಗೆ ಬೇಕಾಗಿದ್ದ ಆರೋಪಿಯಾಗಿದ್ದನು.

ಇತ್ತೀಚಿಗೆ ಹೊಸಕೋಟೆ ತಾಲೂಕಿನ ಮುಗಬಾಳ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡುವ ಸಂದರ್ಭದಲ್ಲಿ ನಂದಗುಡಿ ಪೊಲೀಸರು ಹಿಡಿದು ಬಂಧಿಸಿದ್ದು ಏಳು ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣವನ್ನು ಭೇದಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಪರ ಪೊಲೀಸ್ ಅದೀಕ್ಷರು ನಾಗರಾಜ್ ಮಾರ್ಗದರ್ಶನದಲ್ಲಿ ಹೊಸಕೋಟೆ ಡಿವೈಎಸ್ಪಿ ಮಲ್ಲೇಶ್ ರವರ ನೇತೃತ್ವದಲ್ಲಿ ನಂದಗುಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಾಂತರಾಮ್, ಸಬ್ ಇನ್ಸ್ಪೆಕ್ಟರ್ ಗಂಗಪ್ಪ, ಸತ್ಯಣ್ಣ, ಸಿಬ್ಬಂದಿಗಳಾದ ಶ್ರೀಶೈಲಕೋಟಿ, ಸುಬ್ರಮಣಿ, ಪ್ರವೀಣ್, ಪ್ರಸನ್ನ,ಕಾರ್ಯನಿರ್ವಹಿಸಿದ್ದು ಎಸ್ ಪಿ ಸಿಕೆ ಬಾಬಾ ಅಭಿನಂದಿಸಿದ್ದಾರೆ.

ವರದಿ
ಶಶಿಕುಮಾರ್ ವಿ









