ಅಮೃತಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಿಗೆ ಖಚಿತ ಮಾಹಿತಿಯ ಮೇರೆಗೆ ಠಾಣಾ ಸರಹದ್ದಿನ ಅಮೃತಹಳ್ಳಿ ಕೆರೆ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾವನ್ನು ಇಟ್ಟುಕೊಂಡು ಯುವಕರಿಗೆ ಮಾರಾಟ ಮಾಡುತ್ತಿದ್ದರು
ಖಚಿತ ಮಾಹಿತಿಯನ್ನ ಆದರಿಸಿ ಎನ್ ಡಿ ಪಿ ಎಸ್ ಕಾಯ್ದೆ ಪ್ರಕರಣವನ್ನು ದಾಖಲಿಸಿದ ಅಮೃತಹಳ್ಳಿ ಪೊಲೀಸರು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹೊರ ರಾಜ್ಯದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳ ಪಡಿಸಲಾಗಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ಆರೋಪಿತರು ತಪ್ಪು ಒಪ್ಪಿಕೊಂಡಿರುತ್ತಾರೆ
ಪಶ್ಚಿಮ ಬಂಗಾಳ ರಾಜ್ಯದ ಮರ್ಶಿದಾಬಾದ್ ನಿಂದ ಪರಿಚಯ ಇರುವ ವ್ಯಕ್ತಿಗಳಿಂದ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿ ಮಾಡಿಕೊಂಡು ಬೆಂಗಳೂರು ನಗರಕ್ಕೆ ಬಂದು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಧಿಕ ಲಾಭಗಳಿಸುವ ಉದ್ದೇಶದಿಂದ ಈ ಕೃತ್ಯವನ್ನು ಎಸೆಗಿರುತ್ತಾರೆ
ಆರೋಪಿಗಳಿಬ್ಬರಿಂದ ಒಟ್ಟು ಎರಡು ಲಕ್ಷ ರೂಪಾಯಿ ಮೌಲ್ಯದ 5 ಕೆಜಿ ಗಾಂಜಾವನ್ನು ಅಮೃತಹಳ್ಳಿ ಪೊಲೀಸರು ವಶ ಪಡಿಸಿಕೊಂಡಿರುತ್ತಾರೆ
ಈ ಕಾರ್ಯಚರಣೆಯನ್ನು ಉಪ ಪೊಲೀಸ್ ಆಯುಕ್ತರು ಈಶಾನ್ಯ ವಿಭಾಗ ಸಜಿತ್ ಐಪಿಎಸ್ ಸಹಾಯಕ ಪೊಲೀಸ್ ಆಯುಕ್ತರು, ಸಂಪಿಗೆಹಳ್ಳಿ ಉಪ ವಿಭಾಗ ಮುರುಗೇಂದ್ರಯ್ಯ ಸುವರ್ಣ ರವರ ಮಾರ್ಗದರ್ಶನದಲ್ಲಿ ಅಮೃತಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಂಬರೀಶ್ ಎಂ ಹಾಗೂ ಸಿಬ್ಬಂದಿರವರ ತಂಡ ಈ ಪ್ರಕರಣವನ್ನು ಭೇಧಿಸಿರುತ್ತದೆ.
ವರದಿ
ಶಶಿಕುಮಾರ್ ವಿ









