ಸಂತಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಜೊಜನಾ ಗ್ರಾಮ ಮತ್ತು ಬಾರ್ಡರ್ ತಾಂಡಾದಲ್ಲಿ ಅಪಘಾತ ತಡೆಯಲು ಮತ್ತು ಅಪಘಾತಂದಿಂದ ಸಂಭವಿಸುವ ಅಮಾಯಕರ ಪ್ರಾಣ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸಂಚಾರಿ ಸುವ್ಯವಸ್ಥೆ ಕಾಪಾಡುವಂತೆ ಸಂತಪೂರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ನಂದಕುಮಾರರವರು ತಮ್ಮ ಸಿಬ್ಬಂದಿಯವರೊಂದಿಗೆ ಸಾರ್ವಜನಿಕರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.
ಸಂತಪೂರ ಪೊಲೀಸ ಠಾಣೆಯ ಅಧಿಕಾರಿ, ಸಿಬ್ಬಂದಿಯವರ ಅಪಘಾತ ತಡೆಯಲು ಮತ್ತು ಪ್ರಾಣ ರಕ್ಷಣೆ ಮಾಡುವ ಪ್ರಯತ್ನವು ಪ್ರಸಂಶನಿಯವಾಗಿದ್ದು, ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು, ಚಾಲಕರು ಸಹಕರಿಸಲು ಕೋರಲಾಗಿದೆ.









