ದಿನಾಂಕ: 15/11/2024 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ, ಪೊಲೀಸ್ ಅಧೀಕ್ಷಕರವರಾದ ಶ್ರೀ. ಕುಶಾಲ್ ಚೌಕ್ಸ್, ಐ.ಪಿ.ಎಸ್ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ. ರಾಜಾ ಇಮಾಮ್ ಕಾಸಿಂ.ಪಿ, ರವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಉಪಾದೀಕ್ಷಕರಾದ ಶ್ರೀ. ರವಿಕುಮಾರ್.ಕೆ. ವೈನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ. ಎಂ. ಸೂರ್ಯಪ್ರಕಾಶ್ ಹಾಗೂ ಸಿಬ್ಬಂದಿಯಾದ ಸುಬ್ರಮಣಿ ಎ.ಎಸ್.ಐ, ಸಿ.ಹೆಚ್.ಸಿ-181 ಕೃಷ್ಣಪ್ಪ, ಸಿ.ಹೆಚ್.ಸಿ-48 ನಾರಾಯಣಸ್ವಾಮಿ, ಸಿ.ಹೆಚ್.ಸಿ-110 ವೇಣು, ಸಿ.ಪಿ.ಸಿ-436 ಬಾಲಕೃಷ್ಣ, ಸಿಪಿಸಿ-260 ಮುತ್ತಪ್ಪ ನಿಗರಿ, ಸಿಪಿಸಿ-393 ಬಾರೇಶ ವಲ್ಲಿ, ಸಿಪಿಸಿ-319 ವಿನಾಯಕ ವಿಶ್ವ ಬ್ರಾಹ್ಮಣ ರವರೊಂದಿಗೆ ಚಿಕ್ಕಬಳ್ಳಾಪುರ ಬೆಂಗಳೂರು ಮುಖ್ಯ ರಸ್ತೆಯ ಕೆ.ವಿ. ಕ್ಯಾಂಪಾಸ್ ಕ್ರಾಸ್ ಬಳಿ ಬೆಂಗಳೂರು ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಚೆಕ್ ಮಾಡುತ್ತಿದ್ದಾಗ ಬೆಳಿಗ್ಗೆ 5-45 ಗಂಟೆಯಲ್ಲಿ ಬರುತ್ತಿದ್ದ AP-02-BU-8487 ನಂಬರಿನ ಬಲೇನೋ ಕಾರಿನಲ್ಲಿ ಇಬ್ಬರು ಆಸಾಮಿಗಳು ಸುಮಾರು 7,20,000/-ರೂ ಬೆಲೆಯ ಮಾದಕ ವಸ್ತು ಆದ 12-ಕೆ.ಜಿ ತೂಕದ ಗಾಂಜಾವನ್ನು ಆಂದ್ರದ ವಿಶಾಖ ಪಟ್ಟಣಂ ನಿಂದ ಚಿಕ್ಕಬಳ್ಳಾಪುರಕ್ಕೆ ಸಾಗಾಣಿಕೆ ಮಾಡಿಕೊಂಡು ಬರುತ್ತಿರುವುದಾಗಿ ನೀಡಿದ ಮಾಹಿತಿ ಮೇರೆಗೆ ಕಾರಿನಲ್ಲಿದ್ದ 12 ಕೆ.ಜಿ ಗಾಂಜಾ, 2-ಮೊಬೈಲ್ ಪೋನ್ ಗಳು, AP-02-BU-8487 ನಂಬರಿನ ಬಲೇನೋ ಕಾರನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಈ ಬಗ್ಗೆ ಸಿ.ಇ.ಎನ್ ಪೊಲೀಸ್ ಠಾಣಾ ಮೊ.ಸಂ.123/2024 ಕಲಂ.20(ಬಿ) ಎನ್.ಡಿ.ಪಿ.ಎಸ್. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತೆ.
ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದಂತಹ ಶ್ರೀ. ಕುಶಾಲ್ ಚೌಕ್ಸ್, ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ. ರಾಜಾ ಇಮಾಮ್ ಕಾಸಿಂ.ಪಿ ರವರು ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ.
ವಶಕ್ಕೆ ಪಡೆದಿರುವ ವಸ್ತುಗಳು:-
1] 12 ಕೆ.ಜಿ ಮಾದಕ ವಸ್ತು ಗಾಂಜಾ ಬೆಲೆ 7,20,000/-ರೂ
2] AP-02-BU-8487 ನಂಬರಿನ ಬಲೇನೋ
3] ಎರಡು ಮೊಬೈಲ್ ಫೋನ್ ಗಳು.









