ಕನಕಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಕೆರಮ್ಮ ದೇವಸ್ಥಾನದಲ್ಲಿ ದಿನಾಂಕ:08.07.2025 ರಂದು ರಾತ್ರಿ, ಯಾರೋ ಕಳ್ಳರು ದೇವಸ್ಥಾನದಲ್ಲಿದ್ದ ಚಿನ್ನದ ತಾಳಿ & ಕಾಸುಗಳನ್ನು ಕಳ್ಳತನ ಮಾಡಿರುವ ಬಗ್ಗೆ ದೂರುದಾರರು ನೀಡಿದ ದೂರಿನ ಮೇರೆಗೆ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಮೊ. 99/2025, ಕಲಂ: 331 (4), 305 BNS ರೀತಿಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ, ಸುಮಾರು 1,60,000/- ರೂ ಮೌಲ್ಯದ 12 ಗ್ರಾಂ ತೂಕದ ಚಿನ್ನದ ತಾಳಿ & ಕಾಸುಗಳನ್ನು ವಶ ಪಡಿಸಿಕೊಂಡು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಕನಕಪುರ ಟೌನ್ ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂದಿ ರವರುಗಳ ತಂಡವು ಯಶಸ್ವಿಯಾಗಿರುತ್ತದೆ.







