ರಯಾನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಬಾಷ್ ಇಂಡಿಯಾ ಫೌಂಡೇಷನ್, ಸೇಫ್ಟಿ ರಿಸರ್ಚ್ ಫೌಂಡೇಷನ್ ಹಾಗೂ ಇನ್ಫಾಂಟ್ಸ್ ಟ್ರಾವೆಲ್ ಸಹಯೋಗದಲ್ಲಿ ಶಾಲಾ ಬಸ್ ಚಾಲಕರು ಮತ್ತು ಪಾಲಕರಿಗಾಗಿ ರಸ್ತೆ ಹಾಗೂ ಮಕ್ಕಳ ಸುರಕ್ಷತಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಲಾ ಬಸ್ ಚಾಲಕರ ಶಿಸ್ತು, ವಾಹನದಲ್ಲಿನ ಮಕ್ಕಳ ಸುರಕ್ಷತೆ, ವಾಹನದ ನಿರ್ವಹಣೆ ಮತ್ತು ಸ್ವಚ್ಛತೆ, ರಸ್ತೆಯ ತಿರುವುಗಳಲ್ಲಿ ವಹಿಸಬೇಕಾದ ಎಚ್ಚರಿಕೆ, ಬ್ಲೈಂಡ್ ಸ್ಪಾಟ್ಗಳ ಅಪಾಯ, ಮಕ್ಕಳ ಹಾಗೂ ಪೋಷಕರೊಂದಿಗೆ ಚಾಲಕರು ನಡೆದುಕೊಳ್ಳಬೇಕಾದ ರೀತಿ ಸೇರಿದಂತೆ ವಿವಿಧ ಸುರಕ್ಷತಾ ಅಂಶಗಳ ಕುರಿತು ತರಬೇತಿ ನೀಡಲಾಯಿತು.
ಅದೇ ರೀತಿ, ಮಕ್ಕಳು ರಸ್ತೆ ದಾಟುವ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ಅಪಘಾತಗಳನ್ನು ತಡೆಯುವ ಕ್ರಮಗಳ ಬಗ್ಗೆಯೂ ವಿಡಿಯೋ ಮತ್ತು PPT ಪ್ರಸ್ತುತಿಗಳ ಮೂಲಕ ಜಾಗೃತಿ ಮೂಡಿಸಲಾಯಿತು.
ತರಬೇತುದಾರರಾದ ಜಿಗರ್ ಸೋನಿ ಹಾಗೂ ಆಗಸ್ಟಿಯನ್ ಅವರು ಚಾಲಕರು ಮತ್ತು ಪಾಲಕರಿಗೆ ಅಗತ್ಯವಾದ ಸುರಕ್ಷತಾ ಮಾಹಿತಿಯನ್ನು ಪ್ರಾಯೋಗಿಕ ಉದಾಹರಣೆಗಳೊಂದಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿ ಜಾನ್ ಪ್ರೇಮ್, Infants HR ಕಬಿಲ್, ರೋಹಿತ್ ಹಾಗೂ BOSCH/SRF ಕಾರ್ಯಕ್ರಮ ಸಂಚಾಲಕ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






