ಬನಶಂಕರಿ ಪೊಲೀಸ್ ಠಾಣಾ ಸರಹದ್ದಿನ 2ನೇ ಹಂತದ ಶ್ರೀರಾಮ ರಸ್ತೆಯಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:14/08/2026 ರಂದು ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ಕೋರಮಂಗಲದಲ್ಲಿ ಮನಿ ಎಕ್ಸ್ಚೆಂಜ್ ಆಫೀಸ್ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿರುತ್ತಾರೆ. ಈಗ್ಗೆ ಸುಮಾರು 04 ವರ್ಷಗಳಿಂದ ಪಿರ್ಯಾದುದಾರರ ಕಛೇರಿಯಲ್ಲಿ ಕೆಲಸಮಾಡಿಕೊಂಡಿದ್ದ ವ್ಯಕ್ತಿಯು ಕಛೇರಿಗೆ ಸಂಬಂಧಪಟ್ಟ ಕೆಲಸಗಳನ್ನು ಹಾಗೂ ಮನೆಯಿಂದ ಕಛೇರಿಗೆ, ಕಛೇರಿಯಿಂದ ಮನೆಗೆ ಹಣ ತೆಗೆದುಕೊಂಡು ಹೋಗುವುದು ಹಾಗೂ ಬ್ಯಾಂಕಿನ ಕೆಲಸಗಳನ್ನು ಮಾಡಿಕೊಂಡಿರುತ್ತಾನೆ. ದಿನಾಂಕ:14/08/2026 ರಂದು ಬೆಳಿಗ್ಗೆ ಮನೆಯಲ್ಲಿರುವ ಪಿರ್ಯಾದುದಾರರ ಮತ್ತೊಬ್ಬ ಮಗನಿಗೆ * 26,80,000/-ನಗದನ್ನು ತಲುಪಿಸುವಂತೆ ನೀಡಿದ್ದು, ಆತನು ಹಣವನ್ನು ಪಿರ್ಯಾದುದಾರರ ಮಗನಿಗೆ ತಲುಪಿಸದೆ ಹಣದೊಂದಿಗೆ ಪರಾರಿಯಾಗಿರುತ್ತಾನೆಂದು ತಿಳಿಸಿರುತ್ತಾರೆ. ಈ ಕುರಿತು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ದಿನಾಂಕ:21/08/2026 ರಂದು ಪಿರ್ಯಾದುದಾರರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ತಿಲಕ್ನಗರದ ಆತನ ವಾಸದ ಮನೆಯಿಂದ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ನಗದನ್ನು ತೆಗೆದುಕೊಂಡು ಹೋಗಿರುವುದಾಗಿ ತಪ್ರೊಪ್ಪಿಕೊಂಡಿರುತ್ತಾನೆ. ಅದೇ ದಿನ ಆತನ ವಾಸದ ಮನೆಯಿಂದ * 26,15,000/-(ಇಪ್ಪತ್ತಾರು ಲಕ್ಷದ ಹದಿನೈದು ಸಾವಿರ ರೂಪಾಯಿ)ಯನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಯನ್ನು ಮುಂದಿನ ತನಿಖೆಗೆ ಅವಶ್ಯಕತೆಯಿದ್ದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಿ ಕೊಡಲಾಗಿರುತ್ತದೆ.
ಈ ಕಾರ್ಯಾಚರಣೆಗಳನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ:ಕೆ ವಂಶಿಕೃಷ್ಣ, ಐಪಿಎಸ್, ರವರ ಮಾರ್ಗದರ್ಶನದಲ್ಲಿ, ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಕೆ.ಸಿ.ಲಕ್ಷ್ಮೀನಾರಾಯಣ ರವರ ನೆತೃತ್ವದಲ್ಲಿ, ಬನಶಂಕರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಅರ್ಜುನ್.ಸಿ.ಆರ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡವು ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









