ಯಾದಗಿರಿ: ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸದಿದ್ದಕ್ಕೆ ಆಕ್ರೋಶಗೊಂಡಿರುವ ಯುವಕನೊರ್ವ ತನ್ನ ಎದುರಾಳಿಗಳನ್ನು ತಲವಾರ್ನಿಂದ ಕೊಲೆ ಮಾಡುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ ವಿಚಿತ್ರ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೆಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಹುಣಸಗಿ ತಾಲೂಕಿನ ಬರದೇವನಾಳ ಗ್ರಾಮದ ಶರೀಫ್ ಎನ್ನುವ ಯುವಕ ತಮ್ಮ ಗ್ರಾಮದಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ಇದಕ್ಕೆ ಗ್ರಾಮದ ಕೆಲವರಿಂದ ನಮಗೆ ಅಡಚಣೆ ಮಾಡುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೊಡೆಕಲ್ ಪೊಲೀಸ್ ಠಾಣೆಗೆ ದೂರು ನೀಡಲು ತಿಂಗಳಿಂದ ಹೋದರು ಪೊಲೀಸ್ ಇಲಾಖೆ ಅಧಿಕಾರಿಗಳು ಕೇರ್ ಮಾಡಿಲ್ಲ.
ನಮ್ಮ ಮನೆಯ ಎಲ್ಲಾ ದಾಖಲೆ ಸರಿಯಾಗಿದ್ದರು ನಮಗೆ
ಅಡಚಣೆ ಮಾಡುತ್ತಿದ್ದಾರೆ, ಈ ಸಂಬಂಧ ನಮ್ಮ ತಂದೆ ಕಳೆದ ಒಂದು ತಿಂಗಳಿನಿಂದ ಪೊಲೀಸ್ ಠಾಣೆಗೆ ಅಲೆದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ದೂರ ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು ಅಲ್ಲಿ ಯಾರು ಕೇರ್ ಮಾಡುತ್ತಿಲ್ಲ .
ಸುರಪುರ ಶಾಸಕರ ಪಿಎ ಪೊಲೀಸರಿಗೆ ಕರೆ ಮಾಡಿ ಹೇಳಿದ್ದಕ್ಕೆ ದೂರು ಪಡೆಯುತ್ತಿಲ್ಲ. ಒಂದು ವೇಳೆ ನೀವು ದೂರು ಪಡೆಯದಿದ್ದರೆ
ಈ ತಲ್ವಾರ್ ಯಿಂದ ಮರ್ಡರ್ ಮಾಡತೀನಿ ಎಂದು ಶರೀಫ್ ಪೋಸ್ಟರ್ ಒಂದರಲ್ಲಿ ತಲ್ವಾರ್ಗಳ ಫೋಟೋವನ್ನು ಟ್ವಿಟ್ ಮಾಡಿ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ್ದಾರೆ.
ಮನೆ ಕಟ್ಟುವ ಸಂದರ್ಭದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿ ಜಾಗದಲ್ಲಿ ಸಮಸ್ಯೆ ಉಂಟಾಗಿ ಪಕ್ಕದ ಮನೆಯವರ ಜೊತೆಗೆ ತಿಂಗಳಿಂದ ಜಗಳ ಮಾಡಿಕೊಂಡಿದ ಶರೀಫ್ ಠಾಣೆಗೆ ದೂರು ನೀಡಲು ಬಂದಿದ್ದರು. ನಾವು ಇಬ್ಬರನ್ನು ಠಾಣೆಗೆ ಕರೆಸಿ ತಿಳಿ ಹೇಳಿ ಕಳಿಸಲಾಗಿತ್ತು. ಆದರೂ ಶರೀಫ್ ಅನ್ನುವ ಯುವಕ ಈ ರೀತಿ ದೂರು ದಾಖಲಿಸಿಕೊಳ್ಳುತ್ತಿಲ್ಲ. ಆದ್ದರಿಂದ ನಾವು ಎದುರಾಳಿಯನ್ನು ಮರ್ಡರ್ ಮಾಡುತ್ತಿನಿ ಎಂದು ಎಕ್ಸ್ನಲ್ಲಿ ಪೋಸ್ಟ್ ಹಾಕಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ್ದಾರೆ. ಆದ್ದರಿಂದ ಯುವಕನ ಮೇಲೆ ಕೇಸ್ ದಾಖಲಸಲಾಗಿದೆ.
-ಅಯ್ಯಪ್ಪ. ಪಿಎಸ್ಐ ಕೋಡಕಲ್









