ಮನೆಯ ಮುಂಭಾಗಲಿಗೆ ಬೀಗ ಹಾಕಿಕೊಂಡು ಕುಟುಂಬ ಸಮೇತರಾಗಿ ಉತ್ತರ ಪ್ರದೇಶದಲ್ಲಿನ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿರುವ ಸಂದರ್ಭದಲ್ಲಿ ಕಳ್ಳರು ಮನೆಯ ಮುಂಭಾಗಳನ್ನು ಹೊಡೆದು ಮನೆಯಲ್ಲಿಟ್ಟಿದ್ದ 387 ಗ್ರಾಂ ಚಿನ್ನಾಭರಣ, 100ಗ್ರಾಂ ಬೆಳ್ಳಿ ನಾಣ್ಯ, 50,000 ನಗದು ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸುತ್ತಾರೆ.
ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಪಿರಿಯಾದುದಾರರಿಂದ ಸರಿಯಾದ ಮಾಹಿತಿಯನ್ನು ಕಲೆಹಾಕಿ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ದೊಡ್ಡಬಿದರಕಲ್ಲು ಸಿದ್ದಾರ್ಥ ಶಾಲೆಯ ಮುಂಭಾಗ ವಶಕ್ಕೆ ಪಡೆದುಕೊಂಡಿರುತ್ತಾರೆ. ಆರೋಪಿಯು ತನ್ನ ಜೈಲು ಸಹಚರಣೊಂದಿಗೆ ಕಳುವು ಮಾಡಿರುದ್ದಾಗಿ ಆರೋಪ ಒಪ್ಪಿಕೊಂಡಿರುತ್ತಾರೆ.

ಪೊಲೀಸರ ವಿಚಾರಣೆ ವೇಳೆಯಲ್ಲಿ ಚಿನ್ನಭರಣ ಪೈಕಿ ಕೆಲವು ಚಿನ್ನಾಭರಣಗಳನ್ನು ಆರೋಪಿಗೆ ಪರಿಚಯವಿರುವ ಇಬ್ಬರು ಸ್ನೇಹಿತರ ಮೂಲಕ ನೆಲಗದರನ ಹಳ್ಳಿಯ ಮಣಪುರಂ ಗೋಲ್ಡ್ ಲೋನ್ ನಲ್ಲಿ ಅಡಮಾನ ಇಟ್ಟಿರುವುದಾಗಿ ತಿಳಿಸುತ್ತಾರೆ ಒಟ್ಟು ಮೌಲ್ಯ 16, 00, 000 ಲಕ್ಷ ರೂ (202.9ಗ್ರಾಂ)ಚಿನ್ನಭರಣ ವಶಕ್ಕೆ ಪಡೆಯಲಾಗಿದೆ. ಉಳಿದ ಚಿನ್ನ ಬೆಳ್ಳಿ ನಗದು ಓರ್ವ ವ್ಯಕ್ತಿಯ ಕೈಯಲ್ಲಿದ್ದು ಆತನ ಶೋಧ ಕಾರ್ಯ ಮುಂದುವರೆದಿದೆ.ಆರೋಪಿಯನ್ನು ಮಾನ್ಯ ನ್ಯಾಯಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಕಾರ್ಯಚರಣೆಯು ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲೋಕೇಶ್ .ಭ. ಜಗಲಾಸರ್ ಐ. ಪಿ. ಎಸ್. ರವರ ನೇತೃತ್ವದಲ್ಲಿ ಹಾಗೂ ಸುಬ್ರಮಣ್ಯಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್. ಎಸ್. ಬಿ. ರವರ ಉಸ್ತುವಾರಿಯಲ್ಲಿ ಸುಬ್ರಮಣ್ಯಪುರ ಠಾಣೆಯ ಇನ್ಸ್ಪೆಕ್ಟರ್ ಶ್ರೀ ರಾಜು ಎಂ ಎಸ್ ಹಾಗೂ ಇತರೆ ಅಧಿಕಾರಿ ಸಿಬ್ಬಂದಿ ವರ್ಗದವರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.









