ಮನೆ ಕಳ್ಳತನ ಮಾಡಿ ಚಿನ್ನ ಮತ್ತು ಬೆಳ್ಳಿಯೊಂದಿಗೆ ಪರಾರಿಯಾಗಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸಹಚರರನ್ನು ಬಂಧಿಸಿದ ಹೊಸಕೋಟೆ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ತಿರುಮಲ ಶೆಟ್ಟಿ ಹಳ್ಳಿಯ ಪೊಲೀಸರು.
ಸೂರಿ ಅಲಿಯಾಸ್ ಸೈಕೋ ಸೂರಿ ಮಾಲೂರು ತಾಲೂಕಿನ ನಿಡಘಟ್ಟ ಗ್ರಾಮದ ವಾಸಿ, ಸುಬ್ರಮಣಿ ಅಂಕ ಶೆಟ್ಟಿಹಳ್ಳಿ, ಮಾರುತಿ ಅಂಕ ಶೆಟ್ಟಿಹಳ್ಳಿ ಗ್ರಾಮದ ಬಂಧಿತ ವಾಸಿಗಳಾಗಿದ್ದು, ಬಂದಿತ ಆರೋಪಿ ಸೂರಿ ನಟೋರಿಯಸ್ ದಂಡುಪಾಳ್ಯ ಗ್ಯಾಂಗ್ ನ ಆರೋಪಿ ತಿಮ್ಮನ ಸಂಬಂಧಿಯಾಗಿದ್ದು ಈತ ಮುಖ್ಯ ವೃತ್ತಿ ಕಳ್ಳತನ ವಾಗಿದ್ದು, ಹೈವೇ ರಾಬರಿ, ಕುರಿ ಕಳ್ಳತನ ಸೇರಿದಂತೆ 25ಕ್ಕೂ ಹೆಚ್ಚುಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು
ಬಂಧಿತ ಆರೋಪಿಗಳು ಹೊಸಕೋಟೆ ತಾಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ಮನೆಯ ಬೀಗ ಒಡೆದು ಸುಮಾರು 10 ಲಕ್ಷ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿ ದೋಚಿ ಪರಾರಿಯಾಗಿದ್ದರು. ಆರೋಪಿಯ ಸುಳಿವು ಪತ್ತೆ ಹಚ್ಚಿದ ತಿರುಮಲ ಶೆಟ್ಟಿ ಹಳ್ಳಿಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುಂದರ್ ಹಾಗೂ ತಂಡದವರು ತಮಿಳುನಾಡಿನ ತಳಿಯಲ್ಲಿ ಅವಿತು ಕುಳಿತಿದ್ದ ಕಳ್ಳರ ಗುಂಪನ್ನು ಪತ್ತೆ ಹಚ್ಚಿ ಸಿನಿಮೀಯ ರೀತಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂದಿತರಿಂದ 10 ಲಕ್ಷ, ಬೆಳ್ಳಿ ಹಾಗೂ ಕಾರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳ ಪತ್ತೆಯ ತನಿಖೆ ಯಲ್ಲಿ ಪಿಎಸ್ಐ ನಾರಾಯಣಸ್ವಾಮಿ,
ಎ ಎಸ್ ಐ ವೆಂಕಟೇಶ್, ಸಿಬ್ಬಂದಿಗಳಾದ ಮಂಜುನಾಥ್, ನಟರಾಜ್,ಲಕ್ಷ್ಮಿಕಾಂತ್, ದೇವೇಂದ್ರ ಬಡಿಗೇರ್, ಅಕ್ಷಯ್ ಹಾಗೂ ಇತರರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
====================
ದಂಡುಪಾಳ್ಯದ ಸಹಚರರನ್ನು ಬಂಧಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ ಇವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಹಾಗೂ ಬಹುಮಾನ ಪ್ರಶಂಸೆ ದೊರಕಿಸಿ ಕೊಡುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ.

ಅಣ್ಣ ಸಾಹೇಬ್ ಪಾಟೀಲ್(ಡಿ ವೈ ಎಸ್ ಪಿ ಹೊಸಕೋಟೆ ಉಪವಿಭಾಗ)
=======================
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು. ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದ್ದು ಮತ್ತಷ್ಟು ಪ್ರಕರಣಗಳು ತನಖೆಯಿಂದ ತಿಳಿಯಲಿದೆ.

ಸುಂದರ್, (ಪೊಲೀಸ್ ಇನ್ಸ್ಪೆಕ್ಟರ್, ತಿರುಮಲ ಶೆಟ್ಟಿಹಳ್ಳಿ ಪೊಲೀಸ್ ಠಾಣೆ)









