ಬೆಂಗಳೂರು ನಗರ ಜಿಲ್ಲೆ-3 (ಬಿಯುಡಿ-3) ವಲಯ-17 ಕೆಂಗೇರಿ ವ್ಯಾಪ್ತಿಯಲ್ಲಿ ಮಾನ್ಯ ಅಪರ ಆಯುಕ್ತರು (ಮಾದಕ ವಸ್ತು), ಬೆಂಗಳೂರು, ಮಾನ್ಯ ಅಬಕಾರಿ ಜಂಟಿ ಆಯುಕ್ತರು, ಬೆಂಗಳೂರು ಉತ್ತರ ವಿಭಾಗ, ಬೆಂಗಳೂರು ರವರ ಮಾರ್ಗದರ್ಶನದಲ್ಲಿ ಹಾಗೂ ಡಾ|| ಕೆ.ಎಸ್. ಮುರಳಿ, ಅಬಕಾರಿ ಉಪ ಆಯುಕ್ತರು, ಬೆಂಗಳೂರು ನಗರ ಜಿಲ್ಲೆ-3 (ಬಿಯುಡಿ-3) ರವರ ನಿರ್ದೇಶನ ಹಾಗೂ ನೇತೃತ್ವದಲ್ಲಿ ದಿನಾಂಕ:29-01-2025 ಹಾಗೂ 30-01-2025 ರಂದು ಎರಡು (2) ಘೋರ ಮೊಕದ್ದಮೆಗಳು ದಾಖಲಾಗಿರುತ್ತವೆ.
ಪ್ರಕರಣ-1 :- ಪ್ರ.ವ.ವ ಸಂಖ್ಯೆ: 26/2024-25/3807/SIE-2/380707 ದಿನಾಂಕ:29-01-2025
| ಕ್ರ. ಸಂ. | ಕೃತ್ಯ ನಡೆದ ಸ್ಥಳ | ಜಫ್ತು ಪಡಿಸಿದ ಮದ್ಯ (ಲೀ ಗಳಲ್ಲಿ) | ವಶಪಡಿಸಿಕೊಂಡ ವಾಹನಗಳು | ಮದ್ಯದ ಮೌಲ್ಯ (ರೂ.) | ವಾಹನದ ಮೌಲ್ಯ (ರೂ.) |
| (1) | ನಾಗರಭಾವಿ, ಜ್ಞಾನಭಾರತಿ ಕ್ಯಾಂಪಸ್ ಮುಖ್ಯರಸ್ತೆ, ಮುನೇಶ್ವರ ದೇವಸ್ಥಾನದ ಹತ್ತಿರ ರಸ್ತೆಮಾರ್ಗದಲ್ಲಿರುವ ನಂದಿನಿ ಬೂತ್ ಮುಂಭಾಗದಲ್ಲಿ | 8.250 ಲೀ ತೆರಿಗೆ ರಹಿತ (Duty free) ಮದ್ಯ | 1 ದ್ವಿಚಕ್ರ ವಾಹನ | 80,000/- | |
| (2) | ದಾಸರಹಳ್ಳಿ ಹೌಸಿಂಗ್ ಬೋರ್ಡ್ ಮಾರ್ಗ ಮಧ್ಯದಲ್ಲಿರುವ ರಹೇಜಾ ಅಪಾರ್ಟಮೆಂಟ್ ಎದುರು | 7.00 ಲೀ ತೆರಿಗೆ ರಹಿತ (Duty free) ಮದ್ಯ | 1 ದ್ವಿಚಕ್ರ ವಾಹನ | 80,000/- | |
| (3) | 4ನೇ ಮುಖ್ಯರಸ್ತೆ, ಮೀನಾಕ್ಷಿ ನಗರ, ಕಾಮಾಕ್ಷಿ ಪಾಳ್ಯ, ಬೆಂಗಳೂರು ಇಲ್ಲಿರುವ ಶಾರದಾಂಭ ಪಿಜಿ ಕಟ್ಟಡದ ನೆಲಮಹಡಿಯಲ್ಲಿರುವ ಗೊಡಾನ್ | 163 ಲೀ ಡಿಫೆನ್ಸ್ ಮದ್ಯ ಹಾಗೂ ತೆರಿಗೆ ರಹಿತ (Duty free) ಮದ್ಯ | – | – | |
| ಒಟ್ಟು | 178.25 ಲೀ | 2 | 7,01,574/- | 1,60,000/- |
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಅಬಕಾರಿ ಉಪ ಅಧೀಕ್ಷಕರಾದ ಶ್ರೀ ಎಂ.ಸಿ. ಶಂಕರ, ಅಬಕಾರಿ ನಿರೀಕ್ಷಕರುಗಳಾದ ಶ್ರೀ ರಾಘವೇಂದ್ರ.ಪಿ.ಜಿ, ಶ್ರೀ ಎ.ಹೆಚ್.ಕೃಷ್ಣಮೂರ್ತಿ, ಅಬಕಾರಿ ಉಪ ನಿರೀಕ್ಷಕರಾದ ಶ್ರೀ ಎಸ್.ಎನ್. ವಾಸುದೇವ್ ಹಾಗೂ ಅಬಕಾರಿ ಹೆಡ್ ಕಾನ್ಸಟೆಬಲ್ಸ್ ಗಳಾದ ಶ್ರೀ ಹುಸೇನ್ ವಾಲಿಕರ್, ಮಚ್ಚೇಂದ್ರ ರೋಡ್ಕರ್ ಹಾಗೂ ಅಬಕಾರಿ ಕಾನ್ಸಟೆಬಲ್ಸ್ ಗಳಾದ ಶ್ರೀ ರವಿ ಉಪ್ಪಾರ್, ಅಭಿಷೇಕ್, ಸುರೇಶ್ ಸೊಲ್ಲಾಪುರ್.
ಪ್ರಕರಣ-2 :- ಪ್ರ.ವ.ವ ಸಂಖ್ಯೆ: 20/2024-25/38IE/380206 ದಿನಾಂಕ: 30-01-2025
| ಕ್ರ. ಸಂ. | ಕೃತ್ಯ ನಡೆದ ಸ್ಥಳ | ಜಫ್ತು ಪಡಿಸಿದ ಮದ್ಯ (ಲೀ ಗಳಲ್ಲಿ) | ಮದ್ಯದ ಮೌಲ್ಯ (ರೂ.) |
| (1) | ಮನೆ ನಂ.101/42, 4ನೇ ಮುಖ್ಯರಸ್ತೆ, ಮೀನಾಕ್ಷಿ ನಗರ, ಬಸವೇಶ್ವರನಗರ, ಬೆಂಗಳೂರು-560079 | 538 ಲೀತೆರಿಗೆ ರಹಿತ (Duty free) ವಿದೇಶಿ ಮದ್ಯ | 39,08,907/- |
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಅಬಕಾರಿ ಉಪ ಅಧೀಕ್ಷಕರಾದ ಶ್ರೀ ಲಕ್ಷ್ಮೀಶ. ಸಿ, ಅಬಕಾರಿ ನಿರೀಕ್ಷಕರುಗಳಾದ ಶ್ರೀಮತಿ ಜಯಶೀಲ.ಡಿ ಹಾಗೂ ಅಬಕಾರಿ ಹೆಡ್ ಕಾನ್ಸಟೆಬಲ್ಸ್ ಗಳಾದ ಶ್ರೀ ಕೃಷ್ಣಮೂರ್ತಿ, ಮಾರೇಗೌಡ ಮತ್ತು ವಾಹನ ಚಾಲಕ ಹುಚ್ಚಪ್ಪ.ಎಂ.
ಪ್ರಕರಣದ ಪ್ರಮುಖ ಆರೋಪಿತ ವ್ಯಕ್ತಿ ಕಾಮಾಕ್ಷಿಪಾಳ್ಯ ನಿವಾಸಿಯಾದ ಶ್ರೀ ಜಗನ್ನಾಥ ಕೆ.ವಿ. ಬಿನ್ ವೆಂಕಟಶಾಮಪ್ಪ. ಕೆ.ಸಿ ಇವರು ಇಲಾಖಾ ವಶದಲ್ಲಿದ್ದಾಗ ಟಾಯ್ಲೆಟ್ ಕ್ಲೀನಿಂಗ್ ಲಿಕ್ವಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿ, ಈತನ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಆಗುತ್ತಿದೆ ಎಂದು ವೈದ್ಯರು ತಿಳಿಸಿರುತ್ತಾರೆ. ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ ಮತ್ತು ಸರ್ಕಾರದ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕೆ ಈತನ ವಿರುದ್ದ ದೂರು ನೀಡಿ ಪೊಲೀಸ್ ಇಲಾಖೆಯಿಂದ ಎಫ್.ಐ.ಆರ್ ಮಾಡಲಾಗಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಒಟ್ಟು 716.25 ಲೀ ತೆರಿಗೆರಹಿತ(Duty free)ವಿದೇಶಿ ಹಾಗೂ ಡಿಫೆನ್ಸ್ ಮದ್ಯವಶಪಡಿಸಿಕೊಂಡು, 2 ದ್ವಿಚಕ್ರ ವಾಹನಗಳನ್ನು ಜಫ್ತುಪಡಿಸಲಾಗಿರುತ್ತದೆ. ವಶಪಡಸಿಕೊಳ್ಳಲಾದ ಮದ್ಯದ ಹಾಗೂ ವಾಹನಗಳ ಒಟ್ಟು ಅಂದಾಜು ಮೌಲ್ಯ ರೂ. 47,70,000/- ಆಗಿರುತ್ತದೆ. ಈ ದುಷ್ಕೃತ್ಯದಿಂದ ಸುಮಾರು ರೂ. 28,00,000/- ರಷ್ಟು ರಾಜ್ಯದ ರಾಜಸ್ವಕ್ಕೆ ಉಂಟಾಗಬಹುದಾದ ನಷ್ಟವನ್ನು ಅಬಕಾರಿ ಇಲಾಖೆಯಿಂದ ತಪ್ಪಿಸಲಾಗಿರುತ್ತದೆ.









